ಶಿವಮೊಗ್ಗ: ಆಲೆಮನೆಗೆ ಹಳೆಯ ಟೈರ್‌ಗಳನ್ನು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಟೈರ್ಗಳು ಸುಟ್ಟು ಭಸ್ಮವಾಗಿರುವ ಘಟನೆ ಭದ್ರಾವತಿಯ ವೀರಾಪುರದಲ್ಲಿ ನಡೆದಿದೆ.
ಭದ್ರಾವತಿ ತಾಲೂಕಿನಲ್ಲಿ ಸಾಕಷ್ಟು ಕಬ್ಬಿನ ಆಲೆಮನೆಗಳಿವೆ. ಇಲ್ಲಿ ಕಬ್ಬಿನ ಹಾಲು ಕಾಯಿಸಲು, ಬೆಲ್ಲ ಮಾಡಲು ಹಳೆ ಟೈರುಗಳನ್ನು ಬಳಸಲಾಗುತ್ತಿದೆ. ಹೀಗೆ ವೀರಾಪುರದ ಅಲೆಮನೆಗೆ ಒಂದು ಲೋಡ್ ಟೈರ್ ಸಾಗಿಸುವಾಗ ದಾರಿಯಲ್ಲಿ ವಿದ್ಯುತ್ ತಂತಿ ತಗುಲಿದೆ.
ತಕ್ಷಣ ಚಾಲಕ ಲಾರಿ ನಿಲ್ಲಿಸಿ, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅಷ್ಟರಲ್ಲಿ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಲು ಯತ್ನ ಮಾಡಿದ್ರೂ ಸಹ ಪ್ರಯೋಜನವಾಗಲಿಲ್ಲ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಟೈರ್ ಸಂಪೂರ್ಣ ಸುಟ್ಟು ಹೋಗಿದೆ. ಲಾರಿ ಭಾಗಶಃ ಬೆಂಕಿಗೆ ಆಹುತಿಯಾಗಿದೆ.
ಈ ಕುರಿತು ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.