ETV Bharat / state

ಕರೆಂಟ್​ಗಾಗಿ ಮಾಡಿದ ಮನವಿ ವ್ಯರ್ಥ.. 6 ತಿಂಗಳಿಂದ ಮೆಸ್ಕಾಂ ಕಚೇರಿಗೇ ಮಿಕ್ಸಿ ತಂದು ಮಸಾಲೆ ರುಬ್ಬುವ ರೈತ

ರೈತನೋರ್ವನ ಮನೆಗೆ ಕರೆಂಟ್​ ನೀಡಿಲ್ಲವೆಂದು ಆತ ವಿಭಿನ್ನವಾಗಿ ಮೆಸ್ಕಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹನುಮಂತಪ್ಪ ಎಂಬುವರು ಪ್ರತಿ‌ನಿತ್ಯ ಮೆಸ್ಕಾಂ ವಿತರಣಾ ಕೇಂದ್ರಕ್ಕೆ ಬಂದು ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ.

There is no current in the house of a Shimoga farmer named Hanumanthappa
ಮೆಸ್ಕಾಂ ಕಚೇರಿಗೆ ಬಂದು ಮಸಾಲೆ ರುಬ್ಬುವ ಹನುಮಂತಪ್ಪ
author img

By

Published : May 29, 2022, 4:10 PM IST

ಶಿವಮೊಗ್ಗ: ಮನೆಗೆ ವಿದ್ಯುತ್ ಸಂಪರ್ಕ ನೀಡದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ರೈತನೋರ್ವ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈತ ಪ್ರತಿ ನಿತ್ಯ ಮನೆಯಿಂದ ಮಿಕ್ಸಿ ತಂದು ಮೆಸ್ಕಾಂ ವಿತರಣಾ ಕೇಂದ್ರದಲ್ಲಿಯೇ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾನೆ. ಈ ಘಟನೆ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮಂಗೂಟೆ ನಿವಾಸಿ ಹನುಮಂತಪ್ಪ ಎಂಬುವರು ಪ್ರತಿ‌ನಿತ್ಯ ಮೆಸ್ಕಾಂ ವಿತರಣಾ ಕೇಂದ್ರಕ್ಕೆ ಬಂದು ಮಸಾಲೆ ರುಬ್ಬಿಕೊಂಡು ಹೋಗುತ್ತಿರುವ ವ್ಯಕ್ತಿ. ಹನುಮಂತಪ್ಪ ಈ ರೀತಿ ಪ್ರತಿನಿತ್ಯ ಮಾಡುತ್ತಿದ್ರೂ, ಯಾವ ಅಧಿಕಾರಿಗಳು ಅವರನ್ನು ಪ್ರಶ್ನೆ ಮಾಡುತ್ತಿಲ್ಲವಂತೆ.

ಹನುಮಂತಪ್ಪ ಮಂಗೂಟೆ ಗ್ರಾಮದ ತಮ್ಮದೇ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಈತ ಮನೆ ನಿರ್ಮಾಣ ಮಾಡಿಕೊಂಡ ಮೇಲೆ ಮನೆಗೆ ವಿದ್ಯುತ್ ಸಂಪರ್ಕ ನೀಡಿ ಎಂದು ಆನವೇರಿ ಸೇರಿದಂತೆ ಹೊಳೆಹೊನ್ನೂರಿನ ಎಲ್ಲಾ‌ ಮೆಸ್ಕಾಂ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರು. ಆದರೆ ಯಾರೂ ಸಹ ಇವರಿಗೆ ಸರಿಯಾಗಿ ಸ್ಪಂದಿಸಿಲ್ಲವಂತೆ. ಅಲ್ಲದೆ ಸಂಪರ್ಕ ನೀಡಲು ಹಣವನ್ನು ಕೇಳಿದ್ದಾರೆ. ಇದಕ್ಕೆ ಹನುಮಂತಪ್ಪ ನಾನು ಹಣ ನೀಡಲ್ಲ, ನೀವೇ ಸಂಪರ್ಕ ನೀಡಬೇಕು. ಹಾಲಿ ತಮಗೆ ಐಪಿ ಸೆಟ್​​ನ ಮೆಸ್ಕಾಂ ಸಂಪರ್ಕವನ್ನು ಬಿಟ್ಟು ಮನೆಗೆ ಬೇರೆಯದೆ ಆದ ಸಂಪರ್ಕ ನೀಡಿ ಎಂದು ಕೇಳಿದ್ರು ಯಾವ ಅಧಿಕಾರಿಯೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.

There is no current in the house of a Shimoga farmer named Hanumanthappa
ಮೆಸ್ಕಾಂ ಕಚೇರಿಗೆ ಬಂದು ಮಸಾಲೆ ರುಬ್ಬುವ ಹನುಮಂತಪ್ಪ

ಕೊನೆಗೆ ಹನುಮಂತಪ್ಪ ಮನೆಯಲ್ಲಿ ಅಡುಗೆ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದಾಗ, ನಮ್ಮ ಕಚೇರಿಗೆ ಬಂದು ಮಸಾಲೆ ರುಬ್ಬಿಕೊಂಡು ಹೋಗಿ ಎಂದು ಮೆಸ್ಕಾಂ ಸಿಬ್ಬಂದಿಯೇ ಹೇಳಿದ್ದಾರಂತೆ. ಹಾಗಾಗಿ ಹನುಮಂತಪ್ಪ ಕಳೆದ ಐದಾರು ತಿಂಗಳಿನಿಂದ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ. ಹನುಮಂತಪ್ಪ ಜೊತೆ ಅವರ ತಾಯಿ, ಅಕ್ಕ, ಪತ್ನಿ ಹಾಗೂ ಮಕ್ಕಳು ವಾಸವಾಗಿದ್ದಾರೆ. ಇದರಿಂದ ನಮಗೆ ವಿದ್ಯುತ್ ಸಂಪರ್ಕದ ಅವಶ್ಯಕತೆ ಇದೆ. ಕಳೆದ ಆರು ತಿಂಗಳ ಹಿಂದೆ ಸಾಮಾನ್ಯ ವಿದ್ಯುತ್ ಸಂಪರ್ಕ ಇತ್ತು. ನಂತರ ಗ್ರಾಮಕ್ಕೆ ಹೊಸದಾಗಿ ನಿರಂತರ ಜ್ಯೋತಿ ಸಂಪರ್ಕ ನೀಡಲಾಗಿದೆ. ಅಂದಿನಿಂದ ಹನುಮಂತಪ್ಪ ಮನೆಗೆ ವಿದ್ಯುತ್ ಕಡಿತಗೊಂಡಿದೆಯಂತೆ.

ಇದನ್ನೂ ಓದಿ: ರಾಜ್ಯದ ಕಾಂಗ್ರೆಸ್​ಗೆ ಹತ್ತಾರು ಶಾಪಗಳು ತಟ್ಟಿವೆ: ನಳಿನ್​ ಕುಮಾರ್ ಕಟೀಲ್

ಇವರು ಸಾಕಷ್ಟು ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಶಾಸಕ ಅಶೋಕ ನಾಯ್ಕ ಅವರ ಶಿಫಾರಸು ಪತ್ರವನ್ನು ತಂದು ನೀಡಿದ್ರೂ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ. ಅನಿವಾರ್ಯವಾಗಿ ಮೆಸ್ಕಾಂ ವಿತರಣಾ ಕೇಂದ್ರಕ್ಕೆ ಬಂದು ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದೇನೆ. ಹನುಮಂತಪ್ಪ ಅವರ ಮನೆಯಿಂದ ವಿದ್ಯುತ್​ ವಿತರಣಾ ಕೇಂದ್ರ ಅರ್ಧ ಕಿ.ಮೀ. ದೂರ ಇದೆ. ಇದರಿಂದ ಅಲ್ಲಿಗೆ ಹೋಗಿ ಬರ್ತಾ ಇದ್ದಾರೆ. ನಮಗೆ ವಿದ್ಯುತ್ ನೀಡಿದ್ರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಅಧಿಕಾರಿಗಳನ್ನು ಕೇಳಿದ್ರೆ, ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪವನ್ನು ಹನುಂತಪ್ಪ ಮಾಡಿದ್ದಾರೆ.

ಅಧಿಕಾರಿಗಳ ಸಮಜಾಯಿಷಿ ಏನು?: ಹನುಂತಪ್ಪನವರ ವಿದ್ಯುತ್ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಅವರಿಗೆ ಐಪಿ ಸೆಟ್​ನಿಂದಲೇ ವಿದ್ಯುತ್ ನೀಡಲಾಗುತ್ತಿತ್ತು. ಆದರೆ ನಿರಂತರ ಜ್ಯೋತಿ ಸಂಪರ್ಕ ಬಂದ ನಂತರ ಈ ಸಮಸ್ಯೆಯಾಗಿದೆ. ಅವರು ಗ್ರಾಮದಿಂದ ಬೇರೆ ಕಡೆ ವಾಸವಿರುವ ಕಾರಣ ಅಲ್ಲಿಗೆ ಹೊಸ ಲೈನ್ ಜೋಡಿಸುವ ಕುರಿತು ಅನುಮೋದನೆ ತೆಗೆದುಕೊಳ್ಳಲಾಗಿದೆ. ಈಗ ಗುತ್ತಿಗೆದಾರರಿಗೆ ಅದಷ್ಟು ಬೇಗ ಕೆಲಸ ಮುಗಿಸಲು ತಿಳಿಸಲಾಗಿದೆ. ಹನುಮಂತಪ್ಪಗೆ ರಾತ್ರಿ ಸಮಸ್ಯೆ ಆಗುತ್ತದೆ ಎಂದು ಇವರ ಮನೆಯ ಭಾಗಕ್ಕೆ ರಾತ್ರಿ 8 ಬೆಳಗ್ಗೆ 6 ರ ತನಕ ವಿದ್ಯುತ್ ಐಪಿ ಸೆಟ್​ನಿಂದಲೇ ನೀಡಲಾಗುತ್ತಿದೆ. ಬೆಳಗ್ಗೆ ವೇಳೆ ಹನುಮಂತಪ್ಪ ಮನೆ ಬಳಿಯ ಟ್ರಾನ್ಸಫಾರ್ಮರ್​​​ನಿಂದ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಹನುಮಂತಪ್ಪ ಆನವೇರಿಯ ಕಚೇರಿಗೆ ಬಂದಿಲ್ಲ, ಅವರು ಮಲ್ಲಾಪುರದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಹೋಗಿರಬಹುದು. ಇದು ನಮ್ಮ ಗಮನಕ್ಕೆ ಬಂದಿಲ್ಲ. ವಿತರಣಾ ಕೇಂದ್ರದ ಒಳಗೆ ಯಾರನ್ನೂ ಬಿಡುವುದಿಲ್ಲ. ಆದಷ್ಟು ಬೇಗ ಅವರಿಗೆ ನಿರಂತರ ವಿದ್ಯುತ್ ಸಂಪರ್ಕ‌ ನೀಡಲಾಗುವುದು ಎಂದು ಆನವೇರಿಯ ಮೆಸ್ಕಾಂ ಜೆ.ಇ. ವಿಶ್ವನಾಥ್ 'ಈಟಿವಿ ಭಾರತ'ಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.