ETV Bharat / state

ಶಿಕಾರಿಪುರ ಕದನ ಕಣ.. ಗೆಲುವಿನ ವಿಶ್ವಾಸದಲ್ಲಿರುವ ಬಿಜೆಪಿಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಪೈಪೋಟಿ - new challenge for bjp in shikaripura constituency

ಈ ಬಾರಿಯೂ ಶಿಕಾರಿಪುರ ಕ್ಷೇತ್ರದಲ್ಲಿ ಗೆದ್ದು ಬೀಗುವ ಉತ್ಸಾಹದಲ್ಲಿರುವ ಬಿಜೆಪಿಗೆ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಪೈಪೋಟಿ ಸವಾಲಾಗಿದೆ.

ಶಿಕಾರಿಪುರ ವಿಧಾನಸಭಾ ಕ್ಷೇತ್ರ
ಶಿಕಾರಿಪುರ ವಿಧಾನಸಭಾ ಕ್ಷೇತ್ರ
author img

By

Published : May 2, 2023, 7:00 PM IST

Updated : May 2, 2023, 9:24 PM IST

ಶಿಕಾರಿಪುರ ಕದನ ಕಣ

ಶಿವಮೊಗ್ಗ : ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರ ಸಹ ಒಂದು. ಈ ಕ್ಷೇತ್ರವನ್ನು ಬಿಜೆಪಿ ಕಳೆದ 40 ವರ್ಷಗಳಿಂದ ಗೆದ್ದುಕೊಂಡು ಬಂದಿದೆ. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಬಿ. ವೈ ವಿಜಯೇಂದ್ರ ಗೆಲುವಿನ ಓಟ ಅಷ್ಟು ಸುಲಭವಾಗಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಶಿಕಾರಿಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿಯಾಗಿದ್ದ ನಾಗರಾಜ ಗೌಡ ಅವರಿಗೆ ಟಿಕೆಟ್​ ಕೈ ತಪ್ಪಿತ್ತು. ಈ ಕಾರಣ ನಾಗರಾಜ ಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಪಕ್ಷ ಸಿ ಫಾರಂ ನೀಡಲು ಯೋಚಿಸಿತ್ತು. ಆದರೆ ಪಕ್ಷದಲ್ಲಿ ವಿರೋಧ ವ್ಯಕ್ತವಾದ ಕಾರಣ ಸಿ ಫಾರಂ ನೀಡಲಾಗಲಿಲ್ಲ. ನಾಗರಾಜಗೌಡ ಕ್ಷೇತ್ರದಲ್ಲಿ ಪ್ರಬಲ ಸಮುದಾಯವಾದ ಸಾದರ ಲಿಂಗಾಯತಕ್ಕೆ ಸೇರಿದವರು. ಇವರ ಚಿಕ್ಕಪ್ಪ ಬಿಜೆಪಿಯಿಂದ ಎಂಎಲ್​ಸಿ ಆಗಿದ್ದ ಶಾಂತವೀರಪ್ಪ ಗೌಡ, ಬಿಎಸ್​ವೈ ಜೊತೆಗೆ ಮುನಿಸಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ನಾಗರಾಜಗೌಡ ಅವರಿಗೆ ಪಕ್ಷಾತೀತವಾದ ಬೆಂಬಲದ ಜೊತೆಗೆ ಸಮುದಾಯ ಸಹ ಬೆಂಬಲ ನೀಡಿದೆ. ಅಲ್ಲದೆ ಚುನಾವಣಾ ಖರ್ಚಿಗಾಗಿ ಹಣದ ನೆರವು ನೀಡುವುದರ ಜೊತೆಗೆ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಅವರ ಸಮುದಾಯ ತಿಳಿಸಿದೆ. ಜೆಡಿಎಸ್ ಸಹ ಬೆಂಬಲ ಸೂಚಿಸಿರುವುದರಿಂದ ಬಿ ವೈ ವಿಜಯೇಂದ್ರ ಅವರಿಗೆ ಕಠಿಣ ಸವಾಲು ಎದುರಾಗಿದೆ.

ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಮಾಲತೇಶ್ ಗೋಣಿ ಅವರು ಸ್ಪರ್ಧೆಯಲ್ಲಿದ್ದು, ಕಳೆದ ಮೂರು ಚುನಾವಣೆಯಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಇವರು ಕಳೆದ ಬಾರಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ 51 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಕ್ಷೇತ್ರದಲ್ಲಿ ಪ್ರತಿ ಬಾರಿ ಕಾಂಗ್ರೆಸ್- ಬಿಜೆಪಿ ಮಧ್ಯೆ ನೇರ ಹಣಾಹಣಿ ಇರುತ್ತಿತ್ತು. ಈ ಸಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಇನ್ನು, ಬಂಜಾರ ಸಮುದಾಯದವರು ತಮ್ಮ ಮೀಸಲಾತಿ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿ ನಡೆಸಿದ್ದ ಪ್ರತಿಭಟನೆಯಲ್ಲಿ ಶಿಕಾರಿಪುರದಲ್ಲಿ ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದರು. ಇತ್ತೀಚೆಗೆ ಬಿಜೆಪಿ ಅಭ್ಯರ್ಥಿ ಬಿ ವೈ ವಿಜಯೇಂದ್ರ ಅವರು ತರಲಘಟ್ಟ ತಾಂಡದಲ್ಲಿ ಪ್ರಚಾರಕ್ಕೆ ಹೋಗಿ ವಾಪಸ್ ಅಗುವಾಗ ಬಂಜಾರ ಯುವಕರು, ಮಹಿಳೆಯರು ಬಿಜೆಪಿ ಹಠಾವೋ, ತಾಂಡ ಬಚಾವೋ ಎಂಬ ಘೋಷಣೆ ಕೂಗಿದ್ದರು‌.

ಆರ್​ಎಸ್​ಎಸ್ ಕಟ್ಟಾಳು, ಶಿಕಾರಿಪುರದ ಪುರಸಭೆಯಿಂದ ವಿಧಾನಸಭೆಯವರೆಗೂ ತಮ್ಮ ಹೋರಾಟದ ಮೂಲಕ ಅಧಿಕಾರವನ್ನು ಪಡೆದ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಈಗಾಗಲೇ ಚುನಾವಣಾ ರಾಜಕೀಯದಿಂದ ದೂರ ಉಳಿದು‌ಕೊಂಡಿದ್ದು, ಸಕ್ರಿಯ ರಾಜಕೀಯದಲ್ಲಿದ್ದಾರೆ. ಬಿಎಸ್​ವೈ ತಾವು ಸ್ಪರ್ಧಿಸುತ್ತಿದ್ದ ಕ್ಷೇತ್ರದಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಕಿರಿಯ ಮಗ ಬಿ.ವೈ. ವಿಜಯೇಂದ್ರರನ್ನು ಕಣಕ್ಕೆ ಇಳಿಸಿದ್ದಾರೆ.

ಅಧಿಕೃತ ಚುನಾವಣೆ ಮೂಲಕ ರಾಜಕೀಯಕ್ಕೆ ವಿಜಯೇಂದ್ರ ಎಂಟ್ರಿ : ತಮ್ಮ ತಂದೆಯ ಆಶೀರ್ವಾದ ಹಾಗೂ ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಪಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಯಲ್ಲಿ ವೇಳೆ ವಿಜಯೇಂದ್ರ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರ ಹಾಗೂ ಕಾರ್ಯಕರ್ತರನ್ನು ಸೇರಿಸುವ ಮೂಲಕ ರಾಜಕೀಯ ಪ್ರಭಾವವನ್ನು ತೋರಿಸಿದ್ದಾರೆ. ನಾಮಪತ್ರ ಸಲ್ಲಿಸಿ ನಂತರ ತಮ್ಮ ಕ್ಷೇತ್ರಕ್ಕೆ ಅನುಕೂಲಕರವಾದ ಬಂಜಾರ, ವಾಲ್ಮೀಕಿ‌ ನಾಯಕರನ್ನು ಕರೆಯಿಸಿ ತಮ್ಮ ಬಲವನ್ನು ಪ್ರದರ್ಶಿಸಿದ್ದರು.

ತಮ್ಮ ತಂದೆಯವರ ಅಭಿವೃದ್ಧಿ ಹಾಗೂ ಕ್ಷೇತ್ರದ ಜನರ ಸೇವೆ ಮಾಡಲು ನನಗ ಅವಕಾಶ ನೀಡುವಂತೆ ವಿಜಯೇಂದ್ರ ಜನತೆಯಲ್ಲಿ ಮನವಿ ಮಾಡಿಕೊಂಡು‌ ಮತಯಾಚಿಸುತ್ತಿದ್ದಾರೆ. ತಂದೆ ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳಾದ ನೀರಾವರಿ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ನೀಡಿದ್ದಾರೆ. ಅಲ್ಲದೆ ತಮ್ಮ ಸಹೋದರ ಸಂಸದ ರಾಘವೇಂದ್ರ ಅವರು ನೀರಾವರಿ ಯೋಜನೆಗೆ ಅನುದಾನ ತಂದಿರುವುದು, ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲು ಮಾರ್ಗ ಪ್ರಾರಂಭಿಸಿರುವ ವಿಷಯಗಳನ್ನು ಇಟ್ಟು‌ಕೊಂಡು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಕಳೆದ ಬಾರಿ ಬಿ.ವೈ. ವಿಜಯೇಂದ್ರ ಅವರು, ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಸಾಕಷ್ಟು ಶ್ರಮ ಹಾಕಿದ್ದರು‌. ಕಳೆದ ಚುನಾವಣೆಯಲ್ಲಿಯೇ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾಹಿತಿ ದಟ್ಟವಾಗಿತ್ತು. ಆದರೆ ಪಕ್ಷ ಅದಕ್ಕೆ ಅವಕಾಶ‌ ನೀಡಿರಲಿಲ್ಲ. ಇದರಿಂದ ಈ ಬಾರಿಯೂ ಸಹ ವರುಣಾದಲ್ಲಿ ಸ್ಪರ್ಧಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿತ್ತಾದರೂ ಸಹ ಯಡಿಯೂರಪ್ಪನವರು ಶಿಕಾರಿಪುರಕ್ಕೆ ವಿಜಯೇಂದ್ರರನ್ನು ತಮ್ಮ ಉತ್ತರಾಧಿಕಾರಿಯಾಗಿ ಅಖಾಡಕ್ಕಿಳಿಸಿರುವುದರಿಂದ ವಿಜಯೇಂದ್ರ ಅವರಿಗೆ ಈ ಚುನಾವಣೆ ಪ್ರಮುಖವಾಗಿದೆ.

ಇದನ್ನೂ ಓದಿ : ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಕುಳಿತವರ ಎಟಿಎಂ ಆಗಲಿದೆ: ಅಮಿತ್​ ಶಾ

Last Updated : May 2, 2023, 9:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.