ಶಿವಮೊಗ್ಗ: ಕೊರೊನಾ ಹೆಚ್ಚಾದ ಕಾರಣ ನಾರಾಯಣಪುರ ಗ್ರಾಮಸ್ಥರು ತಮ್ಮ ಊರಲ್ಲಿ ಇಂದಿನಿಂದ ಸ್ವಯಂ ಲಾಕ್ಡೌನ್ ಮಾಡಿಕೊಂಡಿದ್ದಾರೆ.
ತಾಲೂಕಿನ ಹಾರನಹಳ್ಳಿ ಹೋಬಳಿಯ ನಾರಾಯಣಪುರದಲ್ಲಿ 40ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. ಕೊರೊನಾದಿಂದ ಗ್ರಾಮದ ಮುಖಂಡರೊಬ್ಬರು ಮೃತಪಟ್ಟಿದ್ದಾರೆ.
ಓದಿ:ಆಸ್ಪತ್ರೆಗಳಲ್ಲಿ ಆಕ್ಸಿಜನ್ ಆಡಿಟ್ ಕಡ್ಡಾಯ: ಹೈಕೋರ್ಟ್ ನಿರ್ದೇಶನದನಂತೆ ಹೊಸ ಮಾರ್ಗಸೂಚಿ
ಸರ್ಕಾರ ಲಾಕ್ಡೌನ್ ಮಾಡಿದರು ಸಹ ಗ್ರಾಮೀಣ ಭಾಗದಲ್ಲಿ ಲಾಕ್ಡೌನ್ ಅಷ್ಟೊಂದು ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿರಲಿಲ್ಲ. ಇದರಿಂದ ಕೊರೊನಾ ಹೆಚ್ಚಾಗುತ್ತಿದ್ದು, ತಮ್ಮೂರಿನಲ್ಲಿ ಮುಂದೆ ಯಾವುದೇ ಸಾವು- ನೋವು ಉಂಟಾಗಬಾರದು ಎಂದು ಲಾಕ್ಡೌನ್ ಮಾಡಿಕೊಂಡಿದ್ದಾರೆ. ಅವಶ್ಯಕತೆ ಇದ್ದರೆ ಮಾತ್ರ ಹೊಲಕ್ಕೆ ಹೋಗಬಹುದಾಗಿದೆ.