ETV Bharat / state

ಶಿವಮೊಗ್ಗದಲ್ಲಿ ರೌಡಿಶೀಟರ್​ ಅಟ್ಟಹಾಸ... ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಕೊಲೆ - ದೊಡ್ಡಪೇಟೆ ಪೊಲೀಸ್ ಠಾಣೆ

ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬನನ್ನು ರೌಡಿ‌ಶೀಟರ್​​​​ ಚಾಕುವಿನಿಂದ ಚುಚ್ಚಿ‌ ಕೊಲೆ ಮಾಡಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

murder in Shimoga
ಶಿವಮೊಗ್ಗದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ
author img

By

Published : May 17, 2020, 6:30 PM IST

ಶಿವಮೊಗ್ಗ: ಕ್ಷುಲ್ಲಕ‌ ಕಾರಣಕ್ಕೆ ವ್ಯಕ್ತಿಯನ್ನು, ರೌಡಿ‌ಶೀಟರ್​​​​​​​​ವೊಬ್ಬ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಬುದ್ಧನಗರದ ಆಂಜನೇಯ ದೇವಾಲಯದ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಪ್ರಭು ಎಂಬ ರೌಡಿಶೀಟರ್ ಸುರೇಶ್ ಎಂಬಾತನನ್ನು ಚಾಕುವಿನಿಂದ ಚುಚ್ಚಿ‌ ಕೊಲೆ ಮಾಡಿದ್ದಾನೆ.

ಪ್ರಭು ಹಾಗೂ ಸುರೇಶ್ ನಡುವೆ ನಿನ್ನೆ ರಾತ್ರಿ ಮಾತಿನ ಚಕಮಕಿ‌ ನಡೆದಿತ್ತು. ನಿನ್ನೆ ರಾತ್ರಿಯ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಪ್ರಭು ಇಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.