ಶಿವಮೊಗ್ಗ: ಕೈದಿಯೊಬ್ಬನು ನಗರದ ಕೇಂದ್ರ ಕಾರಾಗೃಹದಲ್ಲಿ ತಾನಿದ್ದ ಜೈಲಿನ ಸೆಲ್ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಲೆ ಆರೋಪಿ ಕರುಣಾಕರ ದೇವಾಡಿಗ(24) ಎಂಬಾತನೇ ಆತ್ಮಹತ್ಯೆ ಮಾಡಿಕೊಂ ಕೈದಿ ಆಗಿದ್ದಾನೆ. ಇಂದು ಬೆಳಗ್ಗೆ ಕರುಣಾಕರ ದೇವಾಡಿಗ ಕೈದಿ ಜೈಲ್ ತನ್ನ ಸೆಲ್ ನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಬೆಳಗ್ಗೆ ಜೈಲ್ ನಲ್ಲಿ ತಿಂಡಿಗೆಂದು ಬಿಟ್ಟಿರುವ ವೇಳೆ ಕೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೈದಿ ಮೇಲೆ ಆರೋಪ ಏನೂ: ಭದ್ರಾವತಿ ತಾಲೂಕು ಸುಣ್ಣದ ಹಳ್ಳಿಯ ಆಂಜನೇಯ ದೇವಾಲಯದ ಮುಂಭಾಗ ವೃದ್ದೆಯೊಬ್ಬರು ಭಿಕ್ಷೆ ಬೇಡಿಕೊಂಡು ದೇವಾಲಯದ ಆವರಣದಲ್ಲಿಯೇ ವಾಸ ಮಾಡುತ್ತಿದ್ದರು. ಕೈದಿ ಕರುಣಾಕರ ದೇವಾಡಿಗ ದೇವಾಲಯದ ಹುಂಡಿ ಕಳ್ಳತನಕ್ಕೆ ಎಂದು ಬಂದು, ಅಲ್ಲಿದ್ದ ಅಜ್ಜಿಯ ಮೈ ಮೇಲಿನ ಒಡವೆ ನೋಡಿ ಕೊಲೆ ಮಾಡಿ ಪರಾರಿಯಾಗಿದ್ದ.
ಈತನನ್ನು ಭದ್ರಾವತಿ ಪೇಪರ್ ಟೌನ್ ಪೊಲೀಸರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದ ಆಧಾರದ ಮೇಲೆ ಕೊಲೆ ಆರೋಪಿ ಕರುಣಾಕರ ದೇವಾಡಿಗನನ್ನು ಬಂಧಿಸಿದ್ದರು. ಕೊಲೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಈತನು ಮೂಲತಃ ಉಡುಪಿ ಜಿಲ್ಲೆಯವ. ಹಾಲಿ ಭದ್ರಾವತಿಯಲ್ಲೆ ವಾಸವಾಗಿದ್ದನು. ಈತ ಜೈಲಿಗೆ ಸೇರಿದ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದಕ್ಕಾಗಿ ಜೈಲ್ ನಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೇಯಸಿಯನ್ನು ಹತ್ಯೆ ಮಾಡಿದ್ದ ಪ್ರಿಯಕರ ಅಂದರ್: ಅನೈತಿಕ ಸಂಬಂಧವನ್ನು ಮರೆಮಾಚಲು ಪ್ರಿಯಕರನ ನಿರ್ಧಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಲು ಮುಂದಾಗಿದ್ದ ಪ್ರೇಯಸಿಯನ್ನು ಪ್ರಿಯಕರ ಹತ್ಯೆ ಮಾಡಿರುವ ಪ್ರಕರಣ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ವ್ಯಾಪ್ತಿ ಜರುಗಿದೆ. ಸರಗುಣಂ (35) ಹತ್ಯೆಗೆ ಒಳಗಾದ ಮಹಿಳೆ. ಈ ಸಂಬಂಧ ಗಣೇಶ್(22) ಎಂಬ ಆರೋಪಿಯನ್ನು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಮೃತ ಸರಗುಣಂ ಈಗಾಗಲೇ ಮದುವೆಯಾಗಿದ್ದು 17 ವರ್ಷದ ಮಗನಿದ್ದಾನೆ. ಪತಿ ಕೂಲಿ ಕೆಲಸ ಮಾಡಿಕೊಂಡಿದ್ದು, ಈಕೆ ಮನೆಕೆಲಸ ಮಾಡಿಕೊಂಡಿದ್ದಳು. ನಾಲ್ಕು ವರ್ಷದ ಹಿಂದೆ ಬಸವೇಶ್ವರ ನಗರ ಬಳಿಯ ಎಂಜಿ ನಗರದಲ್ಲಿ ವಾಸವಿದ್ದಾಗ ಸರಗುಣಗೆ ಆಟೋ ಚಾಲಕನಾಗಿದ್ದ ಗಣೇಶ್ ಎಂಬಾತನ ಪರಿಚಯವಾಗಿತ್ತು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸರಗುಣ ತನ್ನ ಗಂಡನಿಗೆ ಗೊತ್ತಾಗದಂತೆ ಗಣೇಶನನ್ನು ಭೇಟಿ ಮಾಡುತ್ತಿದ್ದಳು. ಅಲ್ಲದೆ ಸರಗುಣ ಗಣೇಶನಿಗೆ 50 ಸಾವಿರ ರೂ. ಹಣ ನೀಡಿದ್ದಳು. ಜೊತೆಗೆ ಬಸವೇಶ್ವರ ನಗರದ ಜೆಸಿ ನಗರದಲ್ಲಿ ಒಂದು ಬಾಡಿಗೆ ಮನೆಯನ್ನೂ ಆತನಿಗೆ ವ್ಯವಸ್ಥೆ ಮಾಡಿದ್ದಳು. ಸರಗುಣ ಆಗಾಗ ಇಲ್ಲಿಗೆ ಬಂತು ಗಣೇಶನ ಜೊತೆ ಕಾಲ ಕಳೆಯುತ್ತಿದ್ದಳು. ಇತ್ತೀಚೆಗೆ ಗಣೇಶ್ಗೆ ಮತ್ತೋರ್ವಳ ಪರಿಚಯವಾಗಿದ್ದು, ಆಕೆಯ ಜೊತೆ ಸಂಬಂಧ ಹೊಂದಿದ್ದ. ಹೀಗಾಗಿ ಗಣೇಶ್ ಸರಗುಣಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು.
ಸರಗುಣಂ ಮೃತಪಟ್ಟ ಬಳಿಕ ಆಕೆಯನ್ನು ಗಣೇಶ್ ತನ್ನ ಆಟೋದಲ್ಲೇ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಆಸ್ಪತ್ರೆಯಲ್ಲಿ, ನನ್ನ ಅಕ್ಕ ನೇಣು ಹಾಕಿಕೊಂಡಿದ್ದಾಳೆ ಬದುಕಿಸಿ ಕೊಡಿ ಸರ್ ಎಂದು ಡ್ರಾಮಾ ಮಾಡಿದ್ದ. ಆದರೆ ಅಷ್ಟೊತ್ತಿಗಾಗಲೇ ಸರಗುಣಂ ಮೃತಪಟ್ಟಿದ್ದಳು. ಅಷ್ಟೇ ಅಲ್ಲದೆ ಪೊಲೀಸರ ಮುಂದೆಯೂ ಇದೇ ಸುಳ್ಳು ಹೇಳಿದ್ದ. ಈ ಸಂಬಂಧ ಪೊಲೀಸರು ಕೂಲಂಕಷ ತನಿಖೆ ನಡೆಸಿ ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂಓದಿ:ಪತ್ನಿಯನ್ನು ತುಂಡರಿಸಿ ಮುಂಡವನ್ನು ಸುಡಲು ಯತ್ನಿಸಿದ ಪತಿ.. ರುಂಡ, ಕೈಗಳನ್ನು ಪತ್ತೆ ಹಚ್ಚಿದ ಪೊಲೀಸರು!