ETV Bharat / state

Muharram: ಶಿವಮೊಗ್ಗದಲ್ಲಿ ಬಂಜಾರ ಸಮುದಾಯದ ಜನರಿಂದ ಮೊಹರಂ ಆಚರಣೆ - ಜಾಲಿಹಾಳ್ ಗ್ರಾಮ

Muharram celebration: ಶಿವಮೊಗ್ಗ ಜಿಲ್ಲೆಯಲ್ಲಿ ಮುಸ್ಲಿಮರ ಹಬ್ಬ ಮೊಹರಂ ಅನ್ನು ಬಂಜಾರ ಸಮುದಾಯದವರು ಅದ್ಧೂರಿಯಾಗಿ ಆಚರಿಸಿದರು.

Muharram celebration
Muharram celebration
author img

By

Published : Jul 30, 2023, 10:42 AM IST

Updated : Jul 30, 2023, 1:24 PM IST

ಶಿವಮೊಗ್ಗ ಬಂಜಾರ ಸಮುದಾಯದವರಿಂದ ನಡೆದ ಮೊಹರಂ

ಶಿವಮೊಗ್ಗ: ಶನಿವಾರ ರಾಜ್ಯಾದ್ಯಂತ ಶಿಯಾ ಮುಸ್ಲಿಮರು ಮೊಹರಂ ಆಚರಿಸಿದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಬಂಜಾರ ಸಮುದಾಯದವರು ಅದ್ಧೂರಿಯಾಗಿ ಮೊಹರಂ ಆಚರಿಸಿ ಗಮನ ಸೆಳೆದರು.

ಶೀರಿಹಳ್ಳಿ ತಾಂಡಾದಲ್ಲಿ ಮುಸ್ಲಿಂ ಕುಟುಂಬವಿಲ್ಲ. ಇಲ್ಲಿ ನೂರಾರು ವರ್ಷಗಳಿಂದ ಬಂಜಾರ ಜನರು ಮೊಹರಂ ಆಚರಿಸುತ್ತಾ ಬಂದಿದ್ದಾರೆ. 120ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿರುವ ಈ ಊರಿನಲ್ಲಿ, ಬೇರೆ ಸಮುದಾಯದ ಒಂದೇ ಒಂದು ಮನೆಯೂ ಇಲ್ಲ. ಇಲ್ಲಿ ಇರುವವರೆಲ್ಲ ಬಂಜಾರ ಸಮುದಾಯದ ಜನರೇ ಆಗಿದ್ದಾರೆ. ಸಾಂಪ್ರದಾಯಿಕ ಶೈಲಿಯ ಜಾನಪದ ನೃತ್ಯ, ಸಿನಿಮಾ ಹಾಡಿನ ನೃತ್ಯಗಳು ಗಮನ ಸೆಳೆದವು. ಇಬ್ಬರು ಯುವಕರು ದೇವರನ್ನು ಹೊತ್ತು ಊರಿನಲ್ಲಿ ಮೆರವಣಿಗೆ ಮಾಡಿದರು.

ಬಳ್ಳಾರಿ ಜಾಲಿಹಾಳ್​ದಲ್ಲಿ ನಡೆದ ಮೊಹರಂ

ಜಾಲಿಹಾಳ್ ಗ್ರಾಮದಲ್ಲಿ ಮೊಹರಂ : ಬಳ್ಳಾರಿ ತಾಲೂಕಿನ ಜಾಲಿಹಾಳ್ ಗ್ರಾಮದಲ್ಲೂ ಮೊಹರಂ ಆಚರಣೆ ನಡೆಯಿತು. ಇಲ್ಲಿ ಎರಡು ಮುಸ್ಲಿಂ ಕುಟುಂಬಗಳಿವೆ. ಗ್ರಾಮದ ಹಿಂದುಗಳು ಕಳೆದ ಹಲವು ದಶಕಗಳಿಂದ ಮೊಹರಂ ಆಚರಿಸಿಕೊಂಡು ಬರುತ್ತಿದ್ದಾರೆ. ಹಬ್ಬದ ಪ್ರಮುಖ ವಿಧಿಗಳನ್ನು ಮಾತ್ರ ಮುಸ್ಲಿಮರು ನೆರವೇರಿಸುತ್ತಾರೆ. ಮೊಹರಂ ಆರಂಭದ ಅಲಾಯಿ ಕುಣಿಗೆ ಗುದ್ದಲಿ ಬೀಳುವ ದಿನದಿಂದ ಕತಲ್ ರಾತ್ರಿ ಆಚರಣೆ ಹಾಗೂ ಕಡೆಯ ದಿನದ ದೇವರು ಹೊಳೆ ಹೋಗುವವರೆಗೂ ಹಿಂದೂಗಳೇ ಆಚರಿಸಿಕೊಂಡು ಬರುತ್ತಾರೆ. ಮಸೀದಿಯಲ್ಲಿ ಹಬ್ಬದ ಪ್ರಯುಕ್ತ ಹೊನ್ನೂರು ಸ್ವಾಮಿ, ಪಟಾಲ್ ಸ್ವಾಮಿ, ಹಿತ್ತಾಳೆ ದೇವರು ಸೇರಿ ಹನ್ನೊಂದು ದೇವರುಗಳನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.

ಹನ್ನೊಂದು ದಿನ ನಡೆಯುವ ಹಬ್ಬದ ಸಂದರ್ಭದಲ್ಲಿ ಗ್ರಾಮಸ್ಥರು ಮಾಂಸಹಾರ ಹಾಗೂ ಮದ್ಯಪಾನ ಸೇವಿಸುವುದಿಲ್ಲ. ಪಾದರಕ್ಷೆಗಳನ್ನೂ ಧರಿಸದೆ ಭಕ್ತಿ ಮೆರೆಯುತ್ತಾರೆ. ಶ್ರದ್ಧಾಭಕ್ತಿಯಿಂದ ಮೊಹರಂ ಆಚರಿಸುವುದರಿಂದ ಆಶಯಗಳು ಈಡೇರುತ್ತವೆ ಎಂಬ ಜನರ ನಂಬಿಕೆ.

ಇದನ್ನೂ ಓದಿ: Muharram: ಮುಸ್ಲಿಮರೇ ಇಲ್ಲದ ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಹಬ್ಬಾಚರಣೆ

Last Updated : Jul 30, 2023, 1:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.