ETV Bharat / state

ಬೈಕ್ ರ್‍ಯಾಲಿಯಲ್ಲಿ ಮಿಂಚಿದ ಬಿಎಸ್​ವೈ ಪುತ್ರರು.. ಶಿಕಾರಿಪುರದಲ್ಲಿ ರಾಘವೇಂದ್ರ, ವಿಜಯೇಂದ್ರ ಸಂಚಾರ - ಈಟಿವಿ ಭಾರತ್ ಕನ್ನಡ ಸುದ್ದಿ

ಶಿಕಾರಿಪುರ ಕ್ಷೇತ್ರಕ್ಕೆ ಬಿ ವೈ ವಿಜಯೇಂದ್ರರೆ ಅಭ್ಯರ್ಥಿ ಎಂದು ಬಿ ಎಸ್ ಯಡಿಯೂರಪ್ಪ ಘೋಷಿಸಿದ ಬಳಿಕ ಸಖತ್ ಕ್ರಿಯಾಶೀಲರಾಗಿರುವ ಅವರು ಶಿಕಾರಿಪುರ ತಾಲೂಕಿನ ಪ್ರತಿಹಳ್ಳಿಗಳಿಗೂ ಭೇಟಿ ನೀಡಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.

ಬೈಕ್ ರ್‍ಯಾಲಿಯಲ್ಲಿ ಮಿಂಚಿದ ರಾಘವೇಂದ್ರ ವಿಜಯೇಂದ್ರ

author img

By

Published : Nov 9, 2022, 6:14 PM IST

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಕೊಳಗಿ ಗ್ರಾಮದ ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ಬೈಕ್ ರ್‍ಯಾಲಿಯಲ್ಲಿ ಸಂಸದ ಬಿ ವೈ ರಾಘವೇಂದ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಬೈಕ್ ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ರ್‍ಯಾಲಿಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.

ಶಿಕಾರಿಪುರ ಕ್ಷೇತ್ರಕ್ಕೆ ಬಿ. ವೈ ವಿಜಯೇಂದ್ರರೆ ಅಭ್ಯರ್ಥಿ ಎಂದು ಬಿ. ಎಸ್ ಯಡಿಯೂರಪ್ಪ ಘೋಷಿಸಿದ ಬಳಿಕ ಸಖತ್ ಕ್ರಿಯಾಶೀಲರಾಗಿರುವ ಅವರು ಶಿಕಾರಿಪುರ ತಾಲೂಕಿನ ಪ್ರತಿಹಳ್ಳಿಗಳಿಗೂ ಭೇಟಿ ನೀಡಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅದರಂತೆ ಪಕ್ಷ ಸಂಘಟನೆಗಾಗಿ ಆಯೋಜಿಸಿದ್ದ ಯುವ ಮೋರ್ಚಾ ಬೈಕ್ ರ್‍ಯಾಲಿಯಲ್ಲಿ ಇಂದು ಸಹ ಸಂಸದ ಬಿ. ವೈ ರಾಘವೇಂದ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಕಾರ್ಯಕರ್ತರೊಂದಿಗೆ ಬುಲೆಟ್ ಬೈಕ್​ ರ್‍ಯಾಲಿಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.

ಬೈಕ್ ರ್‍ಯಾಲಿಯಲ್ಲಿ ಮಿಂಚಿದ ರಾಘವೇಂದ್ರ ವಿಜಯೇಂದ್ರ

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಅರಣ್ಯ ನಿಗಮದ ರಾಜ್ಯ ಉಪಾಧ್ಯಕ್ಷರಾದ ಕೊಳಗಿ ರೇವಣಪ್ಪ ಅವರು, APMC ನಿರ್ದೇಶಕ ಸುಧೀರ್ ಮಾರವಳ್ಳಿ, ಸಾಮಾಜಿಕ ಜಾಲತಾಣದ ಗಣೇಶ್ ನಾಗಿಹಳ್ಳಿ, ಪ್ರವೀಣ್ ಕೊಳಗಿ, ಉಜ್ಜಪ್ಪ, ಮಲ್ಲಿಕಾರ್ಜುನ ಹಾಗೂ ಉತ್ಸಾಹಿ ಕಾರ್ಯಕರ್ತರು ಭಾಗವಹಿಸಿದ್ದರು.

ಓದಿ: ಗ್ರಾಮೀಣ ಪ್ರದೇಶಗಳಿಗೆ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆ: ಬಿ ವೈ ರಾಘವೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.