ETV Bharat / state

ಶಿವಮೊಗ್ಗದಲ್ಲಿ ಡಿಆರ್​ಡಿಒ ಕೇಂದ್ರ ಸ್ಥಾಪನೆಗೆ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ: ಸಂಸದ ರಾಘವೇಂದ್ರ - ಕೇಂದ್ರದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ

ಕುವೆಂಪು ವಿಶ್ವವಿದ್ಯಾನಿಲಯದವರ ಕೋರಿಕೆಯ ಮೇರೆಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಡಿಫೆನ್ಸ್ ರಿಸರ್ಚ್ ಡೆವಲಪ್​ಮೆಂಟ್​ ​ ಆರ್ಗನೈಸೇಷನ್ ಸ್ಥಾಪನೆಗೆ ಕೇಂದ್ರದ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಕೇಂದ್ರದ ತಂಡ ಸಹ್ಯಾದ್ರಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

MP BY Raghavendra pressmeet in Shimoga
ಸಂಸದ ಬಿ.ವೈ.ರಾಘವೇಂದ್ರ
author img

By

Published : Sep 29, 2020, 1:25 PM IST

ಶಿವಮೊಗ್ಗ: ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಹಾಗೂ ಹಲವು ಯೋಜನೆಗಳ ಸ್ಥಾಪನೆಗೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಕೇಂದ್ರದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ‌ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಸಿದ ಮಾತನಾಡಿದ ಅವರು, ಕುವೆಂಪು ವಿಶ್ವವಿದ್ಯಾನಿಲಯದವರ ಕೋರಿಕೆಯ ಮೇರೆಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಡಿಫೆನ್ಸ್ ರಿಸರ್ಚ್​ ಡೆವಲಪ್​ಮೆಂಟ್​ ಆರ್ಗನೈಸೇಷನ್(DRDO) ಸ್ಥಾಪನೆಗೆ ಕೇಂದ್ರದ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಕೇಂದ್ರದ ತಂಡ ಸಹ್ಯಾದ್ರಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.

ಕೇಂದ್ರದ ಡಿಆರ್​ಡಿಒ ತಂಡ ಜಿಲ್ಲೆಗೆ ಆಗಮಿಸಿದರೆ, ಸೈನಿಕರಿಗೆ ಬೇಕಾದ ಬಟ್ಟೆ ಸೇರಿದಂತೆ ಇತರೆ ವಿಚಾರಗಳ ಕುರಿತು ಸಂಶೋಧನೆ ನಡೆಸಬಹುದಾಗಿದೆ. ಇಲ್ಲಿನ ಪಶ್ಚಿಮಘಟ್ಟದ ಸಸ್ಯಗಳನ್ನು ಬಳಸಿ ಸಂಶೋಧನೆ ನಡೆಸಬಹುದಾಗಿದೆ. ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಜಿಲ್ಲೆಯ ರಾಗಿಗುಡ್ಡದಲ್ಲಿ 7 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.

ಎಸ್ಟಿ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲೆಂದು ಕ್ಲಸ್ಟರ್ ಸಂಪನ್ಮೂಲ ಕೇಂದ್ರ ತೆರೆಯಲು ಬೇಡಿಕೆ ಇಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಒಂದು ಕೇಂದ್ರೀಯ ವಿದ್ಯಾಲಯ ಇದೆ. ಮುಂದೆ ರೈಲ್ವೆ ಸೇರಿದಂತೆ ಕೇಂದ್ರದ ಇತರೆ ಯೋಜನೆಗಳು ಜಿಲ್ಲೆಯಲ್ಲಿ ಸ್ಥಾಪನೆ ಆಗಲಿರುವುದರಿಂದ ಇನ್ನೊಂದು ಕೇಂದ್ರೀಯ ವಿದ್ಯಾಲಯ ತೆರೆಯಲು ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಡಿಆರ್​ಡಿಒ ಸ್ಥಾಪನೆ ಕುರಿತು ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ- ಸಂಸದ ಬಿ.ವೈ. ರಾಘವೇಂದ್ರ

ಏಕಲವ್ಯ ಶಾಲೆಗೆ ಕೇಂದ್ರ ಅನುಮತಿ ನೀಡಲಿದೆ. ಇದನ್ನು ಶಿವಮೊಗ್ಗ ಗ್ರಾಮಾಂತರ ಹಾಗೂ ಶಿಕಾರಿಪುರದಲ್ಲಿ ಸ್ಥಾಪನೆ ಮಾಡಲಾಗುವುದು. ಜಿಲ್ಲೆಗೆ ಎರಡು ವಾಜಪೇಯಿ ವಸತಿ ಶಾಲೆ ಬರಲಿವೆ. ಈ‌ ಶಾಲೆಗಳನ್ನು ಶಿವಮೊಗ್ಗ ಗ್ರಾಮಾಂತರ ಹಾಗೂ ತೀರ್ಥಹಳ್ಳಿಯಲ್ಲಿ ಸ್ಥಾಪನೆ ಮಾಡಲಿದ್ದೇವೆ. ಹಾಗೆಯೇ, ಪೊಲೀಸ್ ತರಬೇತಿ ಕೇಂದ್ರವನ್ನು ಸಾಗರದಲ್ಲಿ ಸ್ಥಾಪನೆ ಮಾಡಲಾಗುವುದು. ಸೈನಿಕ ಶಾಲೆಯನ್ನು ತೀರ್ಥಹಳ್ಳಿಯಲ್ಲಿ ಸ್ಥಾಪಿಸಲು ಅವಕಾಶವಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ವಿಐಎಸ್ಎಲ್ ಕಾರ್ಖಾನೆಗೆ ಬಿಡ್ ಮಾಡಲು ನಾಲ್ಕು ಕಂಪನಿಗಳು ಮುಂದೆ ಬಂದಿವೆ. ಅವು ಟೆಂಡರ್ ನಲ್ಲಿ ಭಾಗವಹಿಸಲಿವೆ. ಭದ್ರಾವತಿಯ ಮೈಸೂರು ಪೇಪರ್ ಮಿಲ್ ಪುನಶ್ಚೇತನಕ್ಕೆ ಒಂದು ಸಾವಿರ‌ಕೋಟಿ‌ ರೂ. ಬೇಕಾಗುತ್ತದೆ. ಬ್ಯಾಂಕ್ ನಲ್ಲಿ‌ ಇರುವ ಎಂಪಿಎಂನ ಸಾಲ ಹಾಗೂ ಮೆಸ್ಕಾಂ ಬಿಲ್ ಬಾಕಿಯನ್ನು ಕಾರ್ಖಾನೆಯ ಕಚ್ಚಾ ವಸ್ತುವನ್ನು ಮಾರಾಟ ಮಾಡಿ ತೀರಿಸಿ, ಕಾರ್ಖಾನೆ ಪುನಶ್ಚೇತನಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ ಎಂದರು.

ಶಿವಮೊಗ್ಗದ ಮಾಚೇನಹಳ್ಳಿಯ ಬಳಿ ಸಾಂಬಾರು ಪದಾರ್ಥದ ಪಾರ್ಕ್ ಮಾಡಲು ಯೋಚಿಸಲಾಗಿದೆ. ಇದಕ್ಕೆ ಕೇಂದ್ರ ಸದ್ಯದಲ್ಲಿ ಅನುಮತಿ‌ ನೀಡುವ ವಿಶ್ವಾಸವಿದೆ ಎಂದ ಅವರು, ಇದಕ್ಕಾಗಿ ಮಾಚೇನಹಳ್ಳಿ ಬಳಿ 50 ಎಕರೆ ಜಾಗ ಮೀಸಲಿಡಲಾಗಿದೆ ಎಂದು ತಿಳಿಸಿದರು. ನಗರದ ಶಿಮುಲ್ ಹಾಲಿನ ಕೇಂದ್ರಕ್ಕೆ ಬರುತ್ತಿರುವ ಹೆಚ್ಚುವರಿ ಹಾಲಿನಿಂದ ಹಾಲಿನ ಪೌಡರ್ ತಯಾರಿಸುವ ಘಟಕ ಸ್ಥಾಪಿಸಲಾಗುವುದು ಎಂದು ಸಂಸದರು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.