ಶಿವಮೊಗ್ಗ: ಗಂಡ ಮಾಡಿದ ಸಾಲದಿಂದ ಬೇಸತ್ತ ಮಹಿಳೆ ಮತ್ತು ಆಕೆಯ ಮಗಳು ಒಂದೇ ಸೀರೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಭದ್ರಾವತಿಯ ಸುಭಾಷ್ ನಗರದಲ್ಲಿ ನಡೆದಿದೆ.
![mother-and-daughter-commits-suicide-in-shimoga](https://etvbharatimages.akamaized.net/etvbharat/prod-images/12995200_thumbn.jpg)
ಭದ್ರಾವತಿ ಸುಭಾಷ್ ನಗರ ನಿವಾಸಿ ಧನಶೇಖರ್ ಎಂಬುವರ ಪತ್ನಿ ಸಂಗೀತ(40) ಹಾಗೂ 11 ವರ್ಷದ ಮಗಳು ಆತ್ಮಹತ್ಯೆಗೆ ಶರಣಾದವರು. ಕೊರೊನಾ ಹಿನ್ನೆಲೆ ಧನಶೇಖರ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೋಲ್ಸೇಲ್ ವ್ಯಾಪಾರ ನಡೆಸುತ್ತಿದ್ದರು. ಆದರೆ, ವ್ಯಾಪಾರದಲ್ಲಿ ನಷ್ಟ ಉಂಟಾಗಿ, ಸುಮಾರು 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.
ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡಿ ಹೋಗುತ್ತಿದ್ದರು. ಇದರಿಂದ ಬೇಸತ್ತು ಸಂಗೀತ ಮೊದಲು ತನ್ನ ಮಗಳಿಗೆ ಸೀರೆಯಲ್ಲಿ ನೇಣು ಬಿಗಿದಿದ್ದಾರೆ. ನಂತರ ಅದೇ ಸೀರೆಯಲ್ಲಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಕೋವಿಡ್ನಿಂದ ಬದಲಾದ ಜೀವನಶೈಲಿ ; ಮಹಿಳೆಯರಲ್ಲಿ ಶೇ. 30ರಷ್ಟು ಹೆಚ್ಚಾದ ಪಿಸಿಒಎಸ್ ಪ್ರಕರಣಗಳು