ಶಿವಮೊಗ್ಗ: ಬಂಧಿತ ಶಂಕಿತ ಉಗ್ರರಿಂದ ಇನ್ನಷ್ಟು ಸ್ಥಳಗಳ ಮಹಜರು ಬಾಕಿ ಇದೆ ಎಂದು ಎಸ್ಪಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ. ತನಿಖೆಗೆ ಸಂಬಂಧಿಸಿದಂತೆ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸ್ಥಳ ಮಹಜರು ಮುಗಿಸುತ್ತೇವೆ. ಸದ್ಯ ಬಂಧಿತರ ವಿಚಾರಣೆ ಮುಂದುವರಿದಿದೆ. ಅವರ ಹೇಳಿಕೆಯಲ್ಲಿ ವ್ಯತ್ಯಾಸ ಬಂದರೆ ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಶಾರಿಕ್ ಗಾಗಿ ಶೋಧ ಮುಂದುವರೆಸಿದ್ದೇವೆ : ತಲೆಮರೆಸಿಕೊಂಡಿರುವ ತೀರ್ಥಹಳ್ಳಿಯ ಶಾರಿಕ್ ಗಾಗಿ ನಮ್ಮ ಶೋಧ ಮುಂದುವರೆದಿದೆ. ಇದಕ್ಕಾಗಿ ಎರಡು ತಂಡಗಳನ್ನು ನಿಯೋಜಿಸಲಾಗಿದೆ. ಶಾರಿಕ್ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಶೋಧಕ್ಕೆ ತೊಂದರೆಯಾಗಿದೆ. ಜೊತೆಗೆ ಆತನ ಸಹಚರರನ್ನು ತನಿಖೆಗೆ ಒಳಪಡಿಸುತ್ತಿದ್ದೇವೆ.ಈ ಬಗ್ಗೆ ತಾಂತ್ರಿಕ ಪರಿಶೀಲನೆ ಕೂಡ ಆರಂಭವಾಗಿದೆ ಎಂದು ಹೇಳಿದರು.
ಬಂಧಿತರ ಫೋನ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದೇವೆ.ಇವುಗಳಿಂದ ನಮಗೆ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಎಎಸ್ ಇ ತಂಡದಿಂದ ತನಿಖೆ ಮಾಡಿಸಲಾಗುತ್ತಿದೆ. ಸದ್ಯ ಬಂಧಿತರು ವಿಚಾರಣೆಗೆ ಪೂರ್ಣಪ್ರಮಾಣದಲ್ಲಿ ಸಹಕರಿಸುತ್ತಿಲ್ಲ. ಅವರ ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ. ಅದರಿಂದ ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ.ಇವರ ಸಂಪರ್ಕದಲ್ಲಿ ಬಹಳ ಜನ ಇದ್ದಾರೆ. ಆ ಪೈಕಿ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಮಾತ್ರ ಬಂಧಿಸಲಾಗುತ್ತದೆ ಎಂದರು ಹೇಳಿದರು.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಪಿಎಫ್ಐ ರಾಜ್ಯ ವಲಯ ಅಧ್ಯಕ್ಷ ಎನ್‌ಐಎ ವಶಕ್ಕೆ