ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲೆಂದೇ ಕರೆಯುವ ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಮರೆಯಾಗಿದ್ದು ಅನ್ನದಾತರು ಕಂಗಾಲಾಗಿದ್ದಾರೆ. ಕಳೆದ 15 ದಿನಗಳಿಂದ ಮಲೆನಾಡಿನಲ್ಲಿ ವರ್ಷಧಾರೆಯ ಸದ್ದಿಲ್ಲ. ಇದರಿಂದಾಗಿ ಬಿತ್ತನೆ ಮಾಡಿರುವ ಬೆಳೆಗಳು ಬಾಡಿಹೋಗುವ ಆತಂಕ ರೈತರದ್ದು. ಮೆಕ್ಕೆಜೋಳ, ಭತ್ತದ ನಾಟಿ ಈಗಾಗಲೇ ಮಳೆ ಇಲ್ಲದೆ ಬಾಡಿಹೋಗುವ ಹಂತ ತಲುಪಿದೆ. ಸಾಲ ಮಾಡಿ ಬಿತ್ತನೆ ಮುಗಿಸಿರುವ ರೈತರು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ದಾಖಲಾದ ಮಳೆಯ ಪ್ರಮಾಣ: ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 12.70 ಮಿ.ಮೀ ಮಳೆಯಾಗಿದ್ದು, ಸರಾಸರಿ 1.81 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಮಿ.ಮೀ ಇದ್ದು, ಇದುವರೆಗೆ ಸರಾಸರಿ 57.71 ಮಿ.ಮೀ ದಾಖಲಾಗಿದೆ. ಶಿವಮೊಗ್ಗ 01.90 ಮಿ.ಮೀ, ಭದ್ರಾವತಿ 01.00 ಮಿ.ಮೀ, ತೀರ್ಥಹಳ್ಳಿ 2.80 ಮಿ.ಮೀ, ಸಾಗರ 1.30 ಮಿ.ಮೀ, ಶಿಕಾರಿಪುರ 02.60 ಮಿ.ಮೀ, ಸೊರಬ 01.60 ಮಿ.ಮೀ ಹಾಗೂ ಹೊಸನಗರ 1.50 ಮಿ.ಮೀ ಮಳೆ ಸುರಿದಿದೆ.
ಜಲಾಶಯಗಳ ನೀರಿನ ಮಟ್ಟ: ಅಡಿಗಳು ಮತ್ತು ಹರಿವು ಕ್ಯೂಸೆಕ್‌ಗಳಲ್ಲಿ): ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1790.70 (ಇಂದಿನ ಮಟ್ಟ), 8158.00 (ಒಳಹರಿವು), 6359.70 (ಹೊರಹರಿವು), ಭದ್ರಾ: 186 (ಗರಿಷ್ಠ), 166.11 (ಇಂದಿನ ಮಟ್ಟ), 2712.00 (ಒಳಹರಿವು), 745.00 (ಹೊರಹರಿವು), ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 6136.00 (ಒಳಹರಿವು), 6136.00 (ಹೊರಹರಿವು).
ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 581.28 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 499 (ಒಳಹರಿವು), 670.00 (ಹೊರಹರಿವು), ವಾರಾಹಿ ಪಿಕಪ್: 563.88 (ಎಂಎಸ್‍ಎಲ್‍ಗಳಲ್ಲಿ), 561.58 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 3701 (ಒಳಹರಿವು), 2994.00 (ಹೊರಹರಿವು ) ಇದೆ.
ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 569.96 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 108.00 (ಒಳಹರಿವು), 1388.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ). ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 576.94 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 71.00 (ಒಳಹರಿವು), 1256.00 (ಹೊರಹರಿವು) ದಾಖಲಾಗಿದೆ.
ತುಂಗೆಯ ಹರಿವು ಇಳಿಕೆ: ಕಳೆದ ಹದಿನೈದು ದಿನಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಮೈದುಂಬಿ ಹರಿಯುತ್ತಿದ್ದ ತುಂಗಾ ನದಿಯಲ್ಲಿ ಈಗ ಹರಿವಿನ ಪ್ರಮಾಣ ಸಂಪೂರ್ಣ ಇಳಿಕೆಯಾಗಿದೆ.
ಇದನ್ನೂ ಓದಿ: ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಟಾರ್ಪಲ್ ಹೊದಿಸಿದ ಪ್ರಾಚ್ಯವಸ್ತು ಇಲಾಖೆ: ಅಧಿಕಾರಿಗಳು ಹೇಳಿದ್ದು ಹೀಗೆ..