ETV Bharat / state

ರಸ್ತೆಯಲ್ಲಿ ಮೊಬೈಲ್​ನಲ್ಲಿ ಮಾತನಾಡುತ್ತಾ ಹೋಗುತ್ತೀರಾ? .. ಮೊಬೈಲ್ ರಾಬರಿ ಗ್ಯಾಂಗ್​ ಇದೆ ಎಚ್ಚರ..

ಇಂದು ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ವಾಪಸ್ ಆಗುವಾಗ ಯುವತಿಯೊಬ್ಬರು ಮೊಬೈಲ್​ನಲ್ಲಿ ಮಾತನಾಡುತ್ತಾ ಬರುತ್ತಿದ್ದ ವೇಳೆ ಮೊಬೈಲ್ ಕಳ್ಳತನವಾಗಿದ್ದು, ಮಹಿಳೆ ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ‌ ದೂರು‌ ದಾಖಲಿಸಿದ್ದಾರೆ.

Mobile Robbery at Shimoga District
Mobile Robbery at Shimoga District
author img

By

Published : Nov 9, 2020, 11:27 PM IST

ಶಿವಮೊಗ್ಗ: ರಸ್ತೆಯಲ್ಲಿ ಮೊಬೈಲ್​ನಲ್ಲಿ ಮಾತನಾಡುತ್ತಾ ಹೋಗುವಾಗ ಬೈಕ್​ನಲ್ಲಿ ಬಂದ ಕಳ್ಳರು ಮೊಬೈಲ್ ಅನ್ನು ಕಿತ್ತು ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಇಂದು ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ವಾಪಸ್ ಆಗುವಾಗ ಯುವತಿಯೊಬ್ಬರು ಮೊಬೈಲ್​ನಲ್ಲಿ ಮಾತನಾಡುತ್ತಾ ಬರುತ್ತಿದ್ದ ವೇಳೆ ದುರ್ಗಿಗುಡಿಯ ದುರ್ಗಮ್ಮನ ಕೇರಿಯಲ್ಲಿ ಮೊಬೈಲ್ ರಾಬರಿಯಾಗಿದೆ. ಬಿಳಿ ಬಣ್ಣದ ಅಪಾಚೆ ಬೈಕ್​​ನಲ್ಲಿ ಬಂದ ಇಬ್ಬರು ಮೊಬೈಲ್‌ ಕಸಿದು ಪರಾರಿಯಾಗಿದ್ದಾರೆ.

ತಕ್ಷಣಕ್ಕೆ‌ ಗಾಬರಿಗೆ ಬಿದ್ದ ಯುವತಿ ಮೊಬೈಲ್ ಎಂದು ಕೂಗಿ‌ಕೊಂಡಿದ್ದಾರೆ. ಅಷ್ಟರಲ್ಲಿ ಬೈಕ್​ನಲ್ಲಿ ಬಂದ‌ ಖದೀಮರು ಪರಾರಿಯಾಗಿದ್ದಾರೆ. ತಕ್ಷಣ ಸ್ಥಳೀಯರು ಬಂದು ಯುವತಿಯನ್ನು ಸಮಾಧಾನ ಮಾಡಿದ್ದಾರೆ. ಯುವತಿ ಸ್ಥಳೀಯರ ಸಹಾಯದಿಂದ ದೊಡ್ಡಪೇಟೆ ಪೊಲೀಸ್​ ಠಾಣೆಗೆ ತೆರಳಿ ಮೊಬೈಲ್ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ಲಾವಾ ಕಂಪನಿಯ‌ ಮೊಬೈಲ್ ಜೊತೆ ಎಟಿಎಂ ಕಾರ್ಡ್ ಸಹ ಇತ್ತು ಎಂದು ಯುವತಿ ತಿಳಿಸಿದ್ದಾಳೆ.

ಮೊಬೈಲ್‌ ರಾಬರಿ ಗ್ಯಾಂಗ್ ಆ್ಯಕ್ಟಿವ್ ಆಗಿದೆ:

ಕಳೆದ ಮೂರು‌ ದಿನದ ಹಿಂದೆ ಅಚ್ಯುತ ರಾವ್ ಲೇಔಟ್ ನ ಸಾಗರ ನರ್ಸಿಂಗ್ ಹೋಂ ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುವಾಗ ಡಿಯೋ ಗಾಡಿಯಲ್ಲಿ ಬಂದ ಮೂವರು ಇದೇ ರೀತಿ ಗಿರೀಶ್ ಎಂಬುವರ ಮೊಬೈಲ್‌ ಕಸಿದು ಪರಾರಿಯಾಗಿದ್ದಾರೆ. ಈ ವೇಳೆ ಗಿರೀಶ್ ಡಿಯೋದಲ್ಲಿ ಹಿಂಬದಿ ಕುಳಿತವನ ಕೈ‌ಹಿಡಿದು ಎಳೆದ ಪರಿಣಾಮ ಬೈಕ್ ನಲ್ಲಿದ್ದವರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮೊಬೈಲ್‌‌ ಕಳ್ಳರು ಬೈಕ್ ಹಾಗೂ ಅವರ ಮೊಬೈಲ್ ಬೀಳಿಸಿಕೊಂಡು ಪರಾರಿಯಾಗಿದ್ದಾರೆ. ಈ ಬೈಕ್ ಪುರಲೆ ಗ್ರಾಮದವರಿಗೆ ಸೇರಿದ್ದಾಗಿದೆ. ‌ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ‌ ದೂರು‌ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.