ETV Bharat / state

ಹರ್ಷನ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಮೊಬೈಲ್ ಸಿಕ್ಕ ಬಗ್ಗೆ ತನಿಖೆ : ಆರಗ ಜ್ಞಾನೇಂದ್ರ

ಪರಪ್ಪನ ಅಗ್ರಹಾರದಲ್ಲಿ ಹರ್ಷನ ಕೊಲೆ ಆರೋಪಿಗಳಿಗೆ ಮೊಬೈಲ್ ಸಿಕ್ಕ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.

mobile-phones-inside-the-prison-used-by-the-accused-of-harshas-murder
ಹರ್ಷನ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಮೊಬೈಲ್ ಸಿಕ್ಕ ಬಗ್ಗೆ ತನಿಖೆ : ಆರಗ ಜ್ಞಾನೇಂದ್ರ
author img

By

Published : Jul 4, 2022, 3:30 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ನಡೆದ ಹರ್ಷನ ಕೊಲೆ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಸಿಕ್ಕ ಕುರಿತು ನಿನ್ನೆ ಬೆಳಗ್ಗೆ ದಾಳಿ ನಡೆಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹರ್ಷನ ಕೊಲೆ ಆರೋಪಿಗಳಿಗೆ ಜೈಲಿನ ಒಳಗೆ ಮೊಬೈಲ್ ಸಿಕ್ಕಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಇನ್ನು ಕೊಲೆ ಆರೋಪಿಗಳಿಗೆ ಸಹಾಯ ಮಾಡಿದ ಜೈಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು. ಸರ್ಕಾರ ಜೈಲಿನಲ್ಲಿ ಜಾಮರ್ ಅಳವಡಿಸಲು ಜಜೆಟ್ ನಲ್ಲಿ ಹಣವನ್ನು ನೀಡಿದೆ. ಶೀಘ್ರದಲ್ಲಿ ಜೈಲಿನಲ್ಲಿ ಜಾಮರ್ ಗಳನ್ನು ಅಳವಡಿಕೆ ಮಾಡಲಾಗುವುದು ಎಂದರು.

ಹರ್ಷನ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಮೊಬೈಲ್ ಸಿಕ್ಕ ಬಗ್ಗೆ ತನಿಖೆ : ಆರಗ ಜ್ಞಾನೇಂದ್ರ

ಜೈಲಿನಲ್ಲಿನ ಆರೋಪಿಗಳಿಗೆ, ಬಂಧಿಗಳಿಗೆ ಮೊಬೈಲ್ ನೀಡುವುದು, ಖೈದಿಗಳಿಗೆ ಸಹಾಯ ಮಾಡುವ ಜೈಲಾಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲು ಮಾಡಲಾಗುವುದು. ಇನ್ನು ಜೈಲಿನಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ದಾಳಿ ನಡೆಸಲಾಗಿದೆ. ಆರೋಪಿಗಳಿಗೆ ಮೊಬೈಲ್ ಸಿಕ್ಕ ಕುರಿತೂ ತನಿಖೆ ನಡೆಲಾಗುವುದು. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗುವುದು ಎಂದು ಹೇಳಿದರು. ಈ ಹಿಂದೆಯು ಜೈಲಿನ ಮೇಲೆ ದಾಳಿ ನಡೆಸಲಾಗಿತ್ತು ಎಂದರು.

ಓದಿ : ಮೈದುಂಬಿ ಹರಿಯುತ್ತಿರುವ ಭದ್ರಾ ನದಿ: ಮುಳುಗಡೆಯಾದ ಹೆಬ್ಬಾಳೆ ಸೇತುವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.