ETV Bharat / state

ಹುಣಸೋಡು ಸ್ಪೋಟ ಪ್ರಕರಣಕ್ಕೆ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಿದೆ; ಆಯನೂರು ಮಂಜುನಾಥ್ - MLC Ayanur Manjunath latest news

ಹುಣಸೋಡು ಸ್ಪೋಟ ಪ್ರಕರಣ ಇಡೀ ರಾಜ್ಯಕ್ಕೆ ಒಂದು ಎಚ್ಚರಿಕೆಯ ಪಾಠವಾಗಿದೆ. ಸದನದಲ್ಲಿ ನಾನು ಈ ಬಗ್ಗೆ ವಿಸ್ತಾರವಾಗಿ ಚರ್ಚೆ ಮಾಡಿದ್ದೇನೆ. ಈ ಹಿನ್ನೆಲೆ ತನಿಖೆ ಕೂಡ 2 ಹಂತದಲ್ಲಿ ಆರಂಭವಾಗಿದೆ. ಇದರ ನಂತರ ನ್ಯಾಯಾಂಗ ತನಿಖೆಯೂ ನಡೆಯಬಹುದು. ಒಟ್ಟಾರೆ ಅಧಿಕಾರಿಗಳಿಂದ ಹಿಡಿದು ರಾಜಕಾರಣಿಗಳಿಗೂ ಕೂಡ ಈ ಘಟನೆ ಬಿಸಿ ಮುಟ್ಟಿಸಿರುವುದಂತೂ ನಿಜ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

Shivamogga
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾಧ್ಯಮ ಗೋಷ್ಠಿ
author img

By

Published : Feb 13, 2021, 7:36 PM IST

ಶಿವಮೊಗ್ಗ: ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು, ಅಚ್ಚರಿಯ ಫಲಿತಾಂಶದ ನಿರೀಕ್ಷೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾಧ್ಯಮ ಗೋಷ್ಠಿ

ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹುಣಸೋಡು ಸ್ಪೋಟ ಪ್ರಕರಣ ಇಡೀ ರಾಜ್ಯಕ್ಕೆ ಒಂದು ಎಚ್ಚರಿಕೆಯ ಪಾಠವಾಗಿದೆ. ಸದನದಲ್ಲಿ ನಾನು ಈ ಬಗ್ಗೆ ವಿಸ್ತಾರವಾಗಿ ಚರ್ಚೆ ಮಾಡಿದ್ದೇನೆ. ಈ ಹಿನ್ನೆಲೆ ತನಿಖೆ ಕೂಡ 2 ಹಂತದಲ್ಲಿ ಆರಂಭವಾಗಿದೆ. ಇದರ ನಂತರ ನ್ಯಾಯಾಂಗ ತನಿಖೆಯೂ ನಡೆಯಬಹುದು. ಒಟ್ಟಾರೆ ಅಧಿಕಾರಿಗಳಿಂದ ಹಿಡಿದು ರಾಜಕಾರಣಿಗಳಿಗೂ ಕೂಡ ಈ ಘಟನೆ ಬಿಸಿ ಮುಟ್ಟಿಸಿರುವುದಂತೂ ನಿಜ. ಕಂದಾಯ ಮತ್ತು ಪೊಲೀಸ್ ಇಲಾಖೆಯಿಂದಲೂ ಕೂಡ ಇದು ತನಿಖೆಯಾಗುತ್ತಿದೆ. ಪ್ರಮುಖವಾಗಿ ಸ್ಪೋಟಕಗಳು ಎಲ್ಲಿಂದ ಬಂದವು ಮತ್ತು ಹೇಗೆ ಬಂದವು ಎಂಬುದು ಒಂದು ಯಕ್ಷ ಪ್ರಶ್ನೆಯೇ ಆಗಿದೆ. ಏನೇ ಆಗಲಿ ಒಂದು ತಾಂತ್ವಿಕ ಅಂತ್ಯ ಕಾಣುತ್ತದೆ ಎಂದರು.

ಶಿವಮೊಗ್ಗ ತಾಲ್ಲೂಕಿನಲ್ಲಿ ಸುಮಾರು 40ಕ್ಕೂ ಹೆಚ್ಚು ಅಧಿಕೃತ ಕಲ್ಲು ಕ್ರಶರ್‌ಗಳಿವೆ. ಆದರೆ, ಈ ಕ್ರಶರ್‌ಗಳಿಗೆ ಕಲ್ಲು ಪೂರೈಕೆ ಎಲ್ಲಿಂದ ಆಗುತ್ತದೆ ಎಂಬ ಪ್ರಶ್ನೆಗೆ ಅಲ್ಲೇ ಉತ್ತರ ಸಿಗುತ್ತದೆ. ಕ್ರಶರ್‌ಗಳ ಸುತ್ತಮುತ್ತ ಇರುವ ಕ್ವಾರಿಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ನೂರಾರು ಅಡಿ ಆಳಕ್ಕೆ ಅವು ಇಳಿದುಕೊಂಡಿವೆ. ಈ ಕ್ವಾರಿಗಳನ್ನು ಸಿಡಿಸಲು ಸಿಗುವ ಸ್ಪೋಟಕ ವಸ್ತುಗಳ ಬಗ್ಗೆಯೇ ತನಿಖೆ ಹೆಚ್ಚಾಗಿ ನಡೆಯುತ್ತದೆ. ರಾಜಕಾರಣಿಗಳ ಬೆಂಬಲ ಇಲ್ಲ ಎಂದು ನಾನು ಹೇಳುವುದಿಲ್ಲ. ಹಾಗೆಯೇ ತನಿಖೆ ದಿಕ್ಕು ತಪ್ಪುತ್ತದೆ ಎಂಬುದನ್ನು ನಾನು ಹೇಳಲಾರೆ. ಭರವಸೆಯನ್ನು ಕಳೆದುಕೊಳ್ಳುವುದಿಲ್ಲ. ಒಟ್ಟಾರೆ ಹುಣಸೋಡು ಪ್ರಕರಣ ಅಕ್ರಮ ಕ್ವಾರಿಗಳ ಬಗ್ಗೆ ಬೆಳಕು ಚಲ್ಲಿದ್ದಂತೂ ನಿಜ ಎಂದರು.

ಕಲ್ಲು ಗಣಿಗಾರಿಕೆ ಕಾನೂನಿನ ಚೌಕಟ್ಟಿನಲ್ಲಿರಬೇಕು. ಇಲ್ಲದೇ ಹೋದರೆ ಅದನ್ನು ಯಾವುದೇ ಪಕ್ಷದವರು ಮಾಡಿದರು ಕೂಡ ತಪ್ಪು. ಇದಕ್ಕೆ ಅಧಿಕಾರಿಗಳು ಕೂಡ ಜವಾಬ್ದಾರರೇ ಆಗಿರುತ್ತಾರೆ. ಇದೊಂದು ವಿಧ್ವಂಸಕ ಕೃತ್ಯವೇ ಸರಿ. ಈ ಬಗ್ಗೆ ಈಗಾಗಲೇ ನಾನು ಧ್ವನಿ ಎತ್ತಿದ್ದೇನೆ ಮತ್ತು ಎತ್ತುತ್ತಲೇ ಇರುತ್ತೇನೆ. ಶಿವಮೊಗ್ಗದಲ್ಲಿ ಹಲವು ಅಕ್ರಮ ಚಟುವಟಿಕೆಗಳಿವೆ ಎಂಬುದು ನಿಜ. ನಿರಂತರ ಜ್ಯೋತಿ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆಯಿದೆ ಎನ್ನುವುದು ನಿಜ. ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಕಳಪೆ ಹಾಗೂ ಕಾರ್ಮಿಕರ, ಶಿಕ್ಷಕರ, ಜನಸಾಮಾನ್ಯರ ಸಮಸ್ಯೆಗಳಿವೆ ಎನ್ನುವುದು ಕೂಡ ಸತ್ಯವೇ ಆಗಿದೆ ಎಂದರು.

ಕುರುಬ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮುನ್ನೆಲೆ ಇರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಭಾಗವಾಗಿರುವ ಸಚಿವರು ಚಳವಳಿಗಳನ್ನು ಹುಟ್ಟು ಹಾಕಬಾರದು. ಚಳವಳಿಗೆ ಉತ್ತರ ಹೇಳಬೇಕು ಮತ್ತು ಸಮಸ್ಯೆಗಳನ್ನು ಪರಿಹರಿಸಬೇಕು ಎನ್ನುವುದು ಸಂವಿಧಾನದ ಮಾತಾಗಿದೆ. ಈ ಮಾತನ್ನೇ ತಾವು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಸಮಯದಲ್ಲಿ ಹೇಳಿದ್ದು. ಆದರೆ ಅದು ಹೇಗೊ ಏನೋ ಸಚಿವ ಈಶ್ವರಪ್ಪನವರು ಜಾತಿಗಳನ್ನು ಕಟ್ಟಿಕೊಂಡು ಚಳವಳಿ ನಡೆಸುತ್ತಿದ್ದಾರೆ. ಅದಕ್ಕೆ ಆಯನೂರು ಮಂಜುನಾಥ್ ಈ ರೀತಿ ಹೇಳಿದ್ದಾರೆ ಎಂಬ ಉತ್ತರ ನೋಡಿ ನಿಜಕ್ಕೂ ಕಷ್ಟವಾಯಿತು. ಆದರೆ ತಾವು ಈಶ್ವರಪ್ಪರನ್ನು ಕುರಿತು ಹೇಳಿದ ಮಾತು ಇದಲ್ಲ. ಸಾರ್ವತ್ರಿಕವಾಗಿ ವಂದನಾ ನಿರ್ಣಯದ ಕುರಿತು ಮಾತನಾಡಿದ್ದು ಎಂದರು.

ಕಾರ್ಮಿಕರ ಭದ್ರತೆಗಾಗಿ ವಲಯಗಳ ರಚನೆ ಸ್ವಾಗತಾರ್ಹ:

ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಭದ್ರತೆಗಾಗಿ 42 ವಲಯಗಳನ್ನು ರಚಿಸಿರುವುದು ಸ್ವಾಗತಾರ್ಹ. ಸರ್ಕಾರ ಕಾರ್ಮಿಕರ ಭದ್ರತೆಗಾಗಿ 42 ಕ್ಕೂ ಹೆಚ್ಚು ಕಾರ್ಮಿಕ ಮಂಡಳಿಯನ್ನು ರಚಿಸಿದೆ. ಇದಕ್ಕೂ ಮುಂಚೆ ಕೆಲವೇ ವಲಯಗಳಿಗೆ ಮಾತ್ರ ಸೌಲಭ್ಯಗಳು ಸಿಗುತ್ತಿದ್ದವು. ಇನ್ನುಳಿದ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿಯೆ ಇಲ್ಲವಾಗಿತ್ತು. ಇದರಿಂದ ಕೋವಿಡ್ ಸಂಕಷ್ಟದ ಸಮಯದಲ್ಲಿ ಅನೇಕರಿಗೆ ಸೌಲಭ್ಯಗಳೆ ಸಿಗಲಿಲ್ಲ.

ಉದಾಹರಣೆಗೆ ಅಡಿಕೆ ತೋಟದಲ್ಲಿ ಮಾಲಿಗಳಾಗಿರುವವರು, ಕೃಷಿ ಕಾರ್ಮಿಕರು, ಗಣಿ ಕಾರ್ಮಿಕರು, ನರೇಗಾ ಕಾರ್ಮಿಕರು ಇದರಿಂದ ವಂಚಿತರಾಗಿದ್ದರು. ಈಗ ಅವರಿಗೆ ಸರ್ಕಾರ ಕಾರ್ಮಿಕ ಕಾರ್ಡ್ ನೀಡುತ್ತಿದೆ. ಕಮ್ಮಾರರು, ಕುಂಬಾರರು, ಹಮಾಲಿಗಳು, ಟೈಲರ್‌ಗಳು, ಅಕ್ಕಸಾಲಿಗಳು, ಬಟ್ಟಿ ಕಾರ್ಮಿಕರು, ಚಿಂದಿ ಆಯುವವರು, ಕ್ಷೌರಿಕರು, ಅಗಸರು, ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವವರು, ಬ್ಯೂಟೀಷಿಯನ್‌ಗಳು, ಹೋಟೆಲ್‌ಗಳಲ್ಲಿ ಕೆಲಸ ಮಾಡುವವರನ್ನು ಕೂಡ ಅಸಂಘಟಿತ ಕಾರ್ಮಿಕರು ಎಂದು ಗುರುತಿಸಿ ಸರ್ಕಾರ ಕಾರ್ಡ್ ನೀಡಿದೆ. ಇದು ಸಂತಸ ತಂದಿದೆ. ಸರ್ಕಾರಕ್ಕೆ ಮತ್ತು ಕಾರ್ಮಿಕ ಮಂತ್ರಿಗಳಿಗೆ ನಮ್ಮ ಅಭಿನಂದನೆ ಎಂದರು.

ಸರ್ಕಾರದ ತೀರ್ಮಾನ ಸ್ವಾಗತಾರ್ಹ: ಈ ಎಲ್ಲ ವಲಯಗಳಿಗೆ ಕಲ್ಯಾಣ ನಿಧಿಯನ್ನು ಇರಿಸಲಾಗುವುದು. ಇದರಿಂದ ಕಾರ್ಮಿಕರು ಬೀದಿಪಾಲಾಗುವುದು ತಪ್ಪುತ್ತದೆ. ಮುಖ್ಯಮಂತ್ರಿಗಳು ಅಸಂಘಟಿತ ಕಾರ್ಮಿಕರಿಗೆ ವಿಶೇಷ ಸವಲತ್ತುಗಳು ನೀಡುವಂತಹ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಪ್ರತ್ಯೇಕ ಮಂಡಳಿ ರಚಿಸಿ ಸಂಪನ್ಮೂಲ ಕ್ರೋಢಿಕರಿಸಲಾಗುತ್ತಿದೆ ಇದು ಉತ್ತಮ ಬೆಳವಣಿಗೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.