ಶಿವಮೊಗ್ಗ: ಭಾನುವಾರ ಪಾದರಾಯನಪುರದಲ್ಲಿ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದನ್ನು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಶಿವಮೊಗ್ಗದಲ್ಲಿ ಖಂಡಿಸಿದ್ದಾರೆ.
ಆರೋಗ್ಯ ಸಿಬ್ಬಂದಿ ಮೇಲೆ ಈ ರೀತಿ ಹಲ್ಲೆ ಪ್ರಕರಣ ಇದೇನು ಮೊದಲಲ್ಲ. ಮತ್ತೆ ಮತ್ತೆ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಯುತ್ತಿರುವುದು ಸರಿಯಲ್ಲ ಎಂದರು. ಅದು ವಿಶೇಷವಾಗಿ ಒಂದು ಸೀಮಿತ ಬಡಾವಣೆಯಲ್ಲಿ ಒಂದು ಜನಾಂಗ ವಾಸ ಮಾಡುವ ಕಡೆ ಹಲ್ಲೆ ನಡೆಯುತ್ತಿದೆ. ಬಡಾವಣೆಯ ನಿವಾಸಿಗಳ ಆರೋಗ್ಯ ಉಳಿಸಲು, ಆರೋಗ್ಯ ನೌಕರರು ಅವರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಇಂತಹವರ ಮೇಲೆಯೇ ಹಲ್ಲೆ ಖಂಡನೀಯ ಎಂದರು.
ಇತ್ತೀಚೆಗೆ ಜಮೀರ್ ಅಹಮದ್, ಸಿ.ಎಂ. ಇಬ್ರಾಹಿಂ ಎಲ್ಲರೂ ಕೂಡಾ ಆ ಸಮುದಾಯಕ್ಕೆ ಬುದ್ದಿ ಹೇಳುವ ಬದಲು ಅವರು ಅವಿದ್ಯಾವಂತರು, ತಿಳಿವಳಿಕೆ ಇಲ್ಲ ಅನ್ನುತ್ತಿರುವುದು ರ್ದೌಭಾಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಕಿ ಜೈಲಿಗೆ ಹಾಕಬೇಕು. ಉತ್ತರ ಪ್ರದೇಶದ ರೀತಿಯಲ್ಲಿ ಅವರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.