ETV Bharat / state

ನನ್ನೆದೆ ಸೀಳಿದ್ರೆ ಶ್ರೀರಾಮ, ಸಿದ್ದರಾಮ ಇಬ್ಬರೂ ಇದ್ದಾರೆ: ಶಾಸಕ ಪ್ರದೀಪ್ ಈಶ್ವರ್ - MLA Pradeep Eshwar

ರಾಮಮಂದಿರ ವಿಚಾರವಾಗಿ ಶಿವಮೊಗ್ಗದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ.

MLA Pradeep Eshwar
ಶಾಸಕ ಪ್ರದೀಪ್ ಈಶ್ವರ್
author img

By ETV Bharat Karnataka Team

Published : Jan 19, 2024, 2:23 PM IST

ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ

ಶಿವಮೊಗ್ಗ: ನಾವೂ ಹಿಂದೂಗಳೇ. ನಾವೂ ಶ್ರೀರಾಮ ಭಕ್ತರೇ. ನನ್ನ ಎದೆ ಸೀಳಿದರೆ ಶ್ರೀರಾಮ ಹಾಗೂ ಸಿದ್ದರಾಮ ಇಬ್ಬರೂ ಇದ್ದಾರೆ ಎನ್ನುವ ಮೂಲಕ ತಾವು ರಾಮಮಂದಿರದ ವಿರೋಧಿಗಳಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್​​ ಈಶ್ವರ್ ತಿಳಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ, ನಮ್ಮಲ್ಲಿ ರಾಮಮಂದಿರ ವಿಷಯದಲ್ಲಿ ಗೊಂದಲ ಇಲ್ಲ. ನಾವು ಹಿಂದುಗಳೇ, ನಾವು ಶ್ರೀರಾಮನ ಆರಾಧಕರು. ನನ್ನೆದೆ ಸೀಳಿದರೆ ಶ್ರೀರಾಮ, ಸಿದ್ದರಾಮ ಎಲ್ಲರೂ ಇದ್ದಾರೆ. ಆದರೆ ಬಿಜೆಪಿಯವರು ನಮ್ಮನ್ನು ಹಿಂದೂ ವಿರೋಧಿಗಳು ಎಂಬ ರೀತಿ ಬಿಂಬಿಸುತ್ತಿದ್ದಾರೆ. ಯುವಕರು ರಾಜಕಾರಣಿಗಳ‌ ಹಿಂದೆ ದಯವಿಟ್ಟು ಬರಬೇಡಿ. ನಿಮಗೆ ರಾಜಕಾರಣಿ‌ ಇಷ್ಟ ಆದ್ನಾ, ಚುನಾವಣೆ ಸಮಯದಲ್ಲಿ ಮತ ಹಾಕಿ ಎಂದರು. ಆದರೆ, ಯುವಕರು ಯಾವುದೇ ಕಾರಣಕ್ಕೂ ಕೋಮು‌ ಗಲಭೆಗೆ ಒಳಗಾಗಬೇಡಿ. ದಯವಿಟ್ಟು ಜೀವನ ಕಟ್ಟಿಕೊಳ್ಳಿ, ಸಂಪಾದನೆ ಮಾಡಿ ಎಂದು ಸಲಹೆ ನೀಡಿದರು.

ರಾಮ ಮಂದಿರ ತೆರೆಸಿದ್ದೇ ರಾಜೀವ್ ಗಾಂಧಿ: ರಾಮಮಂದಿರ ವಿಚಾರವನ್ನು ಪುನಃ ತೆರೆಸಿದ್ದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜ.22ರ ನಂತರ ಹೋಗುತ್ತೇವೆ ಅಂದಿದ್ದಾರೆ. ನಾವೂ ಹೋಗುತ್ತೇವೆ. ನಾನೂ ಶ್ರೀರಾಮನ ಆರಾಧಕ. ನನಗೂ ದೈವ ಭಕ್ತಿ ಇದೆ. ದೈವ ಭಕ್ತಿ ಇರೋದಕ್ಕೆ ನಾವು ಅಧಿಕಾರಕ್ಕೆ ಬಂದಿರೋದು ಎಂದರು.

ಹೆಗಡೆ ಬಹಿರಂಗ ಚರ್ಚೆಗೆ ಬರಲಿ: ಸಂಸದ ಅನಂತ್ ಕುಮಾರ್ ಹೆಗಡೆ ಬಹಿರಂಗ ಚರ್ಚೆಗೆ ಬರಲಿ, ಸಂಸ್ಕೃತಿ ಬಗ್ಗೆ ಮಾತನಾಡೋಣ ಎಂದು ಸವಾಲು ಹಾಕಿದರು. ಹೆಗಡೆ, ಪ್ರತಾಪ್ ಸಿಂಹರ ಬಗ್ಗೆ ನಾನು ಗೌರವ ಕೊಟ್ಟು ಮಾತನಾಡುತ್ತೇನೆ. ನಮ್ಮ ಮನೆಯಲ್ಲಿ ನಮಗೆ ಸಂಸ್ಕೃತಿ ಕಲಿಸಿದ್ದಾರೆ ಎಂದು ಟಾಂಗ್ ಕೊಟ್ಟರು.

ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ: ಯಡಿಯೂರಪ್ಪ

ಸುಧಾಕರ್ ಲೋಕಸಭೆಗೆ ಸ್ಪರ್ಧಿಸುವ ವಿಚಾರ: ಡಿ.ಸುಧಾಕರ್ ಅವರು ವಿಧಾನಸಭೆಯಲ್ಲಿ ಸೋತಿದ್ದಾರೆ, ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲಿ. ದೈವಬಲ, ಜನಬಲ ನನ್ನ ಕಡೆ ಇದೆ. ನಮ್ಮೂರು ಹುಡುಗ ಮತ್ತೆ ಸೋಲೋದು ನನಗೆ ಇಷ್ಟ ಇಲ್ಲ ಎಂದು ವ್ಯಂಗ್ಯವಾಡಿದರು.

ಲೋಕಸಭೆಯಲ್ಲಿ ನಾವು ಹೆಚ್ಚು ಸ್ಥಾನ ಪಡೆಯುತ್ತೇವೆ. ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ - ಗೆಲ್ಲುತ್ತೇವೆ ಅಂತಾ ಕೆಲಸ ಮಾಡುತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕಸ ಹೊಡಿ ಅಂದ್ರೆ ಹೊಡೆಯುತ್ತೇನೆ. ರಾಜೀನಾಮೆ ಕೊಡು‌ ಅಂದ್ರೆ ಕೊಡುತ್ತೇನೆ. ನಾನು ಯಾವುದೇ‌ ನಿಗಮ ಮಂಡಳಿಯ ಆಕಾಂಕ್ಷಿಯೂ‌ ಅಲ್ಲ. ಪಕ್ಷ ಲೋಕಸಭೆಗೆ ನಿಲ್ಲು ಅಂದ್ರೆ ನಾಳೆನೇ ನಿಲ್ಲುತ್ತೇನೆ ಎಂದರು.

ಇದನ್ನೂ ಓದಿ: ಬದ್ಧತೆ ಇದ್ದರೆ ಸದಾಶಿವ ಆಯೋಗದ ವರದಿ ಜಾರಿ ಮಾಡಿ: ಸರ್ಕಾರಕ್ಕೆ ಬೊಮ್ಮಾಯಿ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.