ETV Bharat / state

ಶಿವಮೊಗ್ಗ: ಹತ್ಯೆಯಾಗಿರುವ ಹರ್ಷ ಮನೆಗೆ ಸಿಟಿ ರವಿ ಭೇಟಿ, ಸಾಂತ್ವನ

author img

By

Published : Feb 28, 2022, 9:53 PM IST

ಹರ್ಷ ಕೊಲೆ ಮಾತ್ರವಲ್ಲ, ರಾಜ್ಯದಲ್ಲಿ ಸಾಲು ಸಾಲು ಕೊಲೆಗಳು ನಡೆದಿವೆ. ಯೋಜನಾಬದ್ಧವಾಗಿ ಹೇಗೆ ಲವ್ ಜಿಹಾದ್ ನಡೆಸುತ್ತಾರೆಯೋ, ಹಾಗೆಯೇ ಯೋಜನಾ ಬದ್ಧವಾಗಿ ಹಿಂದೂ ಧರ್ಮದ ಕೆಲಸದಲ್ಲಿ ತೊಡಗಿದವರನ್ನು ಹತ್ಯೆ ಮಾಡಲಾಗುತ್ತಿದೆ. ಕೇರಳದಲ್ಲಿ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿರುವಂತೆ ಕರ್ನಾಟಕದಲ್ಲೂ ಹತ್ಯೆ ನಡೆಯುತ್ತಿದೆ ಎಂದು ಸಿಟಿ ರವಿ ದೂರಿದರು.

ಮೃತ ಹರ್ಷ ಮನೆಗೆ ಸಿಟಿ ರವಿ ಭೇಟಿ
ಮೃತ ಹರ್ಷ ಮನೆಗೆ ಸಿಟಿ ರವಿ ಭೇಟಿ

ಶಿವಮೊಗ್ಗ : ಹತ್ಯೆಯಾದ ಭಜರಂಗದಳದ ಕಾರ್ಯಕರ್ತ ಹರ್ಷನ ಮನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮೃತ ಹರ್ಷ ಮನೆಗೆ ಸಿಟಿ ರವಿ ಭೇಟಿ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ 24 ಗಂಟೆ ಒಳಗೆ ಹತ್ತು ಜನ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಕುಮ್ಮಕ್ಕು ನೀಡಿದವರು ಯಾರು, ಯಾವ ಸಂಘಟನೆ ಈ ಘಟನೆ ಹಿಂದೆ ಇದೆ ಎಂದು ಮೂಲಕ್ಕೆ ಕೈಹಾಕಿ ಪೊಲೀಸರು ತನಿಖೆ ನಡೆಸುತಿದ್ದಾರೆ. ಹರ್ಷ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದರು.

ಹರ್ಷ ಕೊಲೆ ಮಾತ್ರವಲ್ಲ, ರಾಜ್ಯದಲ್ಲಿ ಸಾಲು ಸಾಲು ಕೊಲೆಗಳು ನಡೆಯುತ್ತಿದೆ. ಯೋಜನಾಬದ್ಧವಾಗಿ ಹೇಗೆ ಲವ್ ಜಿಹಾದ್ ನಡೆಸುತ್ತಾರೆಯೋ, ಹಾಗೆಯೇ ಯೋಜನಾ ಬದ್ಧವಾಗಿ ಹಿಂದೂ ಧರ್ಮದ ಕೆಲಸದಲ್ಲಿ ತೊಡಗಿದವರನ್ನು ಹತ್ಯೆ ಮಾಡಲಾಗುತ್ತಿದೆ. ಕೇರಳದಲ್ಲಿ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿರುವಂತೆ ಕರ್ನಾಟಕದಲ್ಲೂ ಹತ್ಯೆ ನಡೆಯುತ್ತಿದೆ ಎಂದು ದೂರಿದರು.

ಭಯದ ಮೂಲಕವೇ ಇಡೀ ಪ್ರಪಂಚವನ್ನು ವಶಪಡಿಸಿಕೊಳ್ಳಲು ನೋಡುತ್ತಾರೆ. ಮತಾಂದತೆಯೇ ಹರ್ಷ ಕೊಲೆಗೆ ಪ್ರಮುಖ ಕಾರಣ. ಹಾಗಾಗಿ ಎಲ್ಲಾ ಧರ್ಮ ಗ್ರಂಥಗಳನ್ನು ಚರ್ಚೆಗೊಳಪಡಿಸಬೇಕಿದೆ. ಕೊಲ್ಲುವುದು ಧರ್ಮವೇ ಅಲ್ಲ, ಕಾಯುವುದು ಧರ್ಮ. ಕೊಲ್ಲುವುದು ಮತಾಂಧತೆ, ಮತಾಂಧತೆ ಧರ್ಮಕ್ಕಿರುವ ವ್ಯತ್ಯಾಸ ಗುರುತಿಸದಿರುವುದು ದುರಂತ. ಯಾವ ಧರ್ಮದಲ್ಲಿ ಒಳ್ಳೆಯದಿದೆಯೋ ಅದನ್ನು ನಾವೂ ಅನುಸರಿಸೋಣ‌ ಎಂದರು.

ಹಾಗಾಗಿ ಎಲ್ಲ ಧರ್ಮಗ್ರಂಥಗಳ ಬಗ್ಗೆ ಚರ್ಚೆ ಮಾಡೋಣ. ಯಾವುದರಲ್ಲಿ ಒಳ್ಳೆಯದಿದೆಯೋ ಅದನ್ನು ಅನುಸರಿಸೋಣ. ಯಾವುದರಲ್ಲಿ ಮನುಕುಲಕ್ಕೆ ಒಳ್ಳೆಯದಾಗದ ವಿಷಯಗಳಿವೆಯೋ ಅವುಗಳನ್ನು ಜಗತ್ತಿನಿಂದಲೇ ಹೊರಹಾಕೋಣ. ಭಾರತದ ಮೂಲ ನಿವಾಸಿಗಳು ಮುಂದೆ ಅಸಾಹಯಕರಾಗುವ ಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.