ETV Bharat / state

ಶಾಸಕ ಆನಂದ್​​ ಸಿಂಗ್​​​ ರಾಜೀನಾಮೆ ಸ್ವಾಗತಾರ್ಹ: ಬಿಜೆಪಿ ಎಂಎಲ್​ಸಿ ರವಿಕುಮಾರ್​​​ - undefined

ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ಇಂದು ಸ್ಪೀಕರ್ ರಮೇಶ್ ಕುಮಾರ್ ನಿವಾಸಕ್ಕೆ ತೆರಳಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದ ಮೇಲಿನ ಅಸಮಾಧಾನವೇ ಇದಕ್ಕೆ ಕಾರಣ. ಆನಂದ್​​ ಸಿಂಗ್​​ ಅವರ ರಾಜೀನಾಮೆಯನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಬಿಜೆಪಿ ಎಂಎಲ್​ಸಿ ಎನ್.ರವಿಕುಮಾರ್ ಹೇಳಿದ್ದಾರೆ.

ಎಂಎಲ್​ಸಿ ಎನ್.ರವಿಕುಮಾರ್
author img

By

Published : Jul 1, 2019, 4:46 PM IST

ಶಿವಮೊಗ್ಗ: ಬಳ್ಳಾರಿಯ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿರುವುದಕ್ಕೆ ಬಿಜೆಪಿ ಸ್ವಾಗತಿಸುತ್ತದೆ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.

ಜಿಲ್ಲಾ ಬಿಜೆಪಿಯ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರು ಸರ್ಕಾರ ಜಿಂದಾಲ್​​ಗೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸಿದ್ದರು. ಇವರನ್ನು ಕರೆದು ಮಾತನಾಡುವ ಸೌಜನ್ಯವನ್ನು ಸರ್ಕಾರ ತೋರಲಿಲ್ಲ. ಅನಂದ್ ಸಿಂಗ್ ಅವರೊಬ್ಬರೇ ಅಲ್ಲ, ಇನ್ನೂ ಅನೇಕ ಶಾಸಕರು ಮೈತ್ರಿ ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದಾರೆ. ರಾಜ್ಯದಲ್ಲಿ ಐಎಂಎ ಹಗರಣ, ಬರ ಪರಿಸ್ಥಿತಿ ಹೀಗೆ ಹಲವು ವಿಷಯಗಳ ಬಗ್ಗೆ ಶಾಸಕರು ಅಸಮಾಧಾನ ಹೊಂದಿದ್ದು, ಇವರು ರಾಜೀನಾಮೆ ನೀಡಿದರೆ ಬಿಜೆಪಿ ಸ್ವಾಗತಿಸುತ್ತದೆ ಎಂದರು.

ಎನ್​.ರವಿಕುಮಾರ್​, ಬಿಜೆಪಿ ಎಂಎಲ್​ಸಿ

ಮೈತ್ರಿ ಸರ್ಕಾರದ ವೈಭವೋಪೇರಿತ ಆಡಳಿತ:

ಸಿಎಂ ಕುಮಾರಸ್ವಾಮಿ ಅವರು ಇಷ್ಟು ದಿನ ತಾಜ್ ವೆಸ್ಟ್ಂಡ್​​ನಲ್ಲಿ ವಾಸ್ತವ್ಯ ಮಾಡಿ, ಎರಡು ದಿನ ಗ್ರಾಮ ವಾಸ್ತವ್ಯ ಮಾಡಿ ಈಗ ಅಮೆರಿಕಗೆ ಹಾರಿದ್ದಾರೆ. ವೈಭವೋಪೇರಿತ, ವಿಲಾಸಿತನ ಆಡಳಿತ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ಬೇಸತ್ತು ಕರ್ನಾಟಕದ ಹಿತದೃಷ್ಟಿಯಿಂದ ಇಂತಹ ಸರ್ಕಾರ ಹೋಗುವುದೇ ಒಳ್ಳೆಯದು ಅಂತ ರಾಜೀನಾಮೆ ನೀಡಿದ್ದಾರೆ ಎಂದರು.

Intro:ವಿಜಯ ನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆಯನ್ನು ಬಿಜೆಪಿ ಸ್ವಾಗತ ಮಾಡುತ್ತದೆ ಎಂದು ಬಿಜೆಪಿಯ ರಾಜ್ಯ ಪ್ರದಾನ ಕಾರ್ಯದರ್ಶಿ ಎನ್.ರವಿ ಕುಮಾರ್ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ. ಜಿಲ್ಲಾ ಬಿಜೆಪಿಯ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಆನಂದ್ ಸಿಂಗ್ ರವರು ಸರ್ಕಾರ ಜಿಂದಾಲ್ ಗೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸಿದ್ದರು. ಇವರನ್ನು ಕರೆದು ಮಾತನಾಡುವ ಸೌಜನ್ಯವನ್ನು ಸರ್ಕಾರ ತೋರಲಿಲ್ಲ. ಅನಂದ್ ಸಿಂಗ್ ರವರೊಬ್ಬರೆ ಅಲ್ಲ. ಇನ್ನೂ ಅನೇಕ ಶಾಸಕರು ಮೈತ್ರಿ ಸರ್ಕಾರದ ಮೇಲೆ ಅಸಮಾಧಾನವನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಐಎಂಎ ಹಗರಣ, ಬರ ಪರಿಸ್ಥಿತಿ ಖಜಾನೆಯಾಗಿರಬಹುದು.

Body:ಹೀಗೆ ಹಲವು ವಿಷ್ಯಗಳ ಬಗ್ಗೆ ಶಾಸಕರು ಅಸಮಾಧಾನ ಹೊಂದಿದ್ದಾರೆ. ಅಸಮಾಧಾನ ಹೊಂದಿರುವ ಶಾಸಕರು ರಾಜೀನಾಮೆ ನೀಡಿದರೆ ಬಿಜೆಪಿ ಸ್ವಾಗತ ಮಾಡುತ್ತದೆ ಎಂದರು. ಸಿಎಂ ಕುಮಾರಸ್ವಾಮಿ ರವರು ಇಷ್ಟು ದಿನ ತಾಜ್ ವೆಸ್ಟ್ಂಡ್ ನಲ್ಲಿ ವಾಸ್ತವ್ಯ ಮಾಡಿ, ಎರಡು ದಿನ ಗ್ರಾಮ ವಾಸ್ತವ್ಯ ಮಾಡಿ ಈಗ ಅಮೇರಿಕಾಕ್ಕೆ ಹಾರಿದ್ದಾರೆ. ವೈಭವಪೇರಿತ, ವಿಲಾಸಿತನ ಆಡಳಿತ ವ್ಯವಸ್ಥೆ ಮಾಡಿ ಕೊಂಡಿದ್ದಾರೆ. ಇದರಿಂದ ಬೇಸತ್ತು ಕರ್ನಾಟಕದ ಹಿತದೃಷ್ಟಿಯಿಂದ ಇಂತಹ ಸರ್ಕಾರ ಹೋಗುವುದೇ ಒಳ್ಳೆಯದು ಅಂತ ರಾಜೀನಾಮೆ ನೀಡಿದ್ದಾರೆ ಎಂದರು.

Conclusion:ಈಗ ಅನೇಕ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೆಲ್ಸಗಳು ಆಗುತ್ತಿಲ್ಲ. ರೈತರು ಬೈಯುತ್ತಿದ್ದಾರೆ. ಜನರು ಶಾಪ ಹಾಕುತ್ತಿದ್ದಾರೆ. ಇದರಿಂದ ಅನೇಕ ಶಾಸಕರು ರಾಜೀನಾಮೆ ನೀಡಿದರೆ ನಾವು ಸ್ವಾಗತ ಮಾಡುತ್ತೆವೆ.ಬಿಜೆಪಿ ಮಧ್ಯಂತರ ಚುನಾವಣೆಯನ್ನು ಬಯಸದ ಪಾರ್ಟಿಯಾಗಿದೆ. ಮತ್ತೆ ಚುನಾವಣೆ ನಡೆದರೆ ದೇಶಕ್ಕೆ ಆರ್ಥಿಕ ಹೊರೆ ಜಾಸ್ತಿಯಾಗುತ್ತದೆ. ಇದರಿಂದ ಬಿಜೆಪಿ ಚುನಾವಣೆ ಬಯಸುವುದಿಲ್ಲ. ಅಲ್ಪ ಮತಕ್ಕೆ ಸರ್ಕಾರ ಕುಸಿದರೆ ಬಿಜೆಪಿ ಸರ್ಕಾರ ರಚನೆಗೆ ಮುಂದಾಗುತ್ತದೆ ಎಂದರು. ಮುಂದಿನ ಎಲ್ಲಾ ತೀರ್ಮಾನಗಳನ್ನು ರಾಜ್ಯದ ಅಧ್ಯಕ್ಷರು, ವರಿಷ್ಷರು ತೆಗೆದು ಕೊಳ್ಳುತ್ತಾರೆ ಎಂದರು.

ಬೈಟ್: ಎನ್.ರವಿ ಕುಮಾರ್. ಪ್ರದಾನ ಕಾರ್ಯದರ್ಶಿ. ಬಿಜೆಪಿ.

ಕಿರಣ್ ಕುಮಾರ್. ಶಿವಮೊಗ್ಗ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.