ಶಿವಮೊಗ್ಗ: ಹಾಸ್ಟೆಲ್‌ನಿಂದ ಊರಿಗೆ ಹೋಗುವುದಾಗಿ ಹೊರಟಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕಾಡಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಹೊಸನಗರ ತಾಲೂಕು ಸುಡೂರು ಬಳಿ ಬೆಳಕಿಗೆ ಬಂದಿದೆ.
ಹೊಸನಗರ ತಾಲೂಕು ಹಾರೂ ಹಿತ್ತಲು ಗ್ರಾಮದ ನಿವಾಸಿ ಅರುಣ್ ಶವವಾಗಿ ಪತ್ತೆಯಾಗಿದ್ದಾನೆ. ಶಿವಮೊಗ್ಗದ ಜೆಎನ್‌ಸಿಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಈತ ನಗರದ ಟ್ಯಾಂಕ್ ಮೊಹಲ್ಲದ ಹಾಸ್ಟೆಲ್‌ನಲ್ಲಿ ತಂಗುತ್ತಿದ್ದ. ಇತ್ತೀಚೆಗೆ ತಾನು ಮನೆಗೆ ಹೋಗಿ ಬರುವುದಾಗಿ ಹೇಳಿ ಹಾಸ್ಟೆಲ್‌ನಿಂದ ಹೊರಟಿದ್ದ ಎಂಬ ಮಾಹಿತಿ ದೊರೆತಿದೆ. ಆದರೆ, ಮನೆಗೆ ಬಾರದ ಕಾರಣ ಅರುಣ್ ತಂದೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಮಗ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಇದೀಗ ಅರುಣ್ ಕಾಡಿನಲ್ಲಿ ಮರಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.