ETV Bharat / state

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮದುವೆ ಮಾಡಿದ ಸಂಬಂಧಿಕರ ಮೇಲೆ ಬಿತ್ತು ಕೇಸು - ಈಟಿವಿ ಭಾರತ ಕನ್ನಡ

ಬಾಲಕಿಯ ಮದುವೆ ಮಾಡಿಸಿದ ತಂದೆ , ತಾಯಿ ಮತ್ತು ಸಂಬಂಧಿಕರ ಮೇಲೆ ಎಫ್​ಐಆರ್ ದಾಖಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

minor-girl-marriage-in-shivamogga-fir-filed-against-relatives
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮದುವೆ ಮಾಡಿದ ಸಂಬಂಧಿಕರ ಮೇಲೆ ಬಿತ್ತು ಕೇಸು
author img

By

Published : Aug 10, 2022, 7:49 AM IST

ಶಿವಮೊಗ್ಗ : ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿಯ ಮದುವೆ ಮಾಡಿಸಿದ್ದ ಸಂಬಂಧಿಕರು, ಮತ್ತು ಮದುವೆಯಲ್ಲಿ ಭಾಗವಹಿಸಿದ್ದ ಪೋಟೋ‌ಗ್ರಾಫರ್, ಅಡುಗೆ ಭಟ್ಟರು, ಪುರೋಹಿತರ ಮೇಲೆ ಪ್ರಕರಣ ದಾಖಲಾಗಿದೆ.

ಇಲ್ಲಿನ ಅಪ್ರಾಪ್ತ ಬಾಲಕಿಯ ಮದುವೆಯು ಜುಲೈ 31 ರಂದು ಸಂತೆಕಡೂರಿನ ಬಾಲಸುಬ್ರಮಣ್ಯ ದೇವಾಲಯದಲ್ಲಿ ನಡೆದಿತ್ತು. ಮದುವೆಯಾದ ಮರುದಿನ ಬೀಗರ ಊಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಮಕ್ಕಳ ರಕ್ಷಣಾ ಘಟಕದ ಸದಸ್ಯರು ದಾಳಿ‌ ನಡೆಸಿದ್ದು, ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಬಾಲಕಿಯ ವಿಚಾರಣೆ ನಡೆಸಿದಾಗ ಮದುವೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

minor-girl-marriage-in-shivamogga-fir-filed-against-relatives
ಎಫ್​ಐಆರ್ ಪ್ರತಿ

ಈ ಬಾಲಕಿಯು ತನ್ನ ದೂರದ ಸಂಬಂಧಿ ಸಂತೋಷ್ ಎಂಬುವವನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಪೋನ್ ನಲ್ಲಿ ಮಾತನಾಡುವಾಗ ಈ ವಿಚಾರ ಬಾಲಕಿಯ ತಂದೆ ತಾಯಿಗೆ ತಿಳಿದು ಗಲಾಟೆ ನಡೆದಿತ್ತು. ಹಾಗಾಗಿ ಈಕೆಯ ಪ್ರಿಯಕರ ಸಂತೋಷ್​​​​ಗೆ ತಂದೆ ತಾಯಿ ಇಲ್ಲದ ಕಾರಣ ಆತನ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಬಾಲಕಿಯ ಮನೆಗೆ ಬಂದು ಮದುವೆ ಮಾಡಿ ಕೊಡುವಂತೆ ಕೇಳಿದ್ದರು. ಅಂತೆಯೇ ಇಬ್ಬರ ಮದುವೆ ಜುಲೈ 31 ರಂದು ಮದುವೆ ನಡೆದಿತ್ತು.

minor-girl-marriage-in-shivamogga-fir-filed-against-relatives
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮದುವೆ ಮಾಡಿದ ಸಂಬಂಧಿಕರ ಮೇಲೆ ಬಿತ್ತು ಕೇಸು

ಪ್ರಕರಣ ಸಂಬಂಧ ಮದುವೆ ಮಾಡಿದ ಬಾಲಕಿಯ ತಂದೆ,ತಾಯಿ, ಸಂತೋಷನ ಚಿಕ್ಕಪ್ಪ, ಚಿಕ್ಕಮ್ಮ, ಮದುವೆ ಮಾಡಿದ ಪುರೋಹಿತರು, ಅಡುಗೆ ಭಟ್ಟ, ಲಗ್ನಪತ್ರಿಕೆ ಮುದ್ರಿಸಿದ ಪ್ರಿಂಟರ್ಸ್, ಇಬ್ಬರು ಪೋಟೊ ಗ್ರಾಫರ್ ರವರ ಮೇಲೆ ಈಗ ಎಫ್​ಐಆರ್ ದಾಖಲಾಗಿದೆ. ನೂರು ಸುಳ್ಳು ಹೇಳಿ ಮದುವೆ ಮಾಡು ಅಂತಾರೆ, ಆದರೆ ಒಂದೇ ಸುಳ್ಳಿಗೆ ಈಗ ಎಲ್ಲರೂ ಜೈಲು ಸೇರಿದ್ದಾರೆ.

ಇದನ್ನೂ ಓದಿ : ಈದ್ಗಾ ಮೈದಾನದ ಗೋಡೆ ಕೆಡವುದಾಗಿ ಹೇಳಿದ್ದ ಹಿಂದೂ ಕಾರ್ಯಕರ್ತನ ವಿರುದ್ಧ ಎಫ್ಐಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.