ETV Bharat / state

ಆರ್​​ಎಸ್​​ಎಸ್ ಟೀಕಿಸುವ ನೈತಿಕತೆ ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್​​ಗೆ ಇಲ್ಲ: ಸಚಿವ ಈಶ್ವರಪ್ಪ ವಾಗ್ದಾಳಿ

ಆರ್​​ಎಸ್​​ಎಸ್ ಟೀಕೆ ಮಾಡಿದರೆ ಕಾಂಗ್ರೆಸ್​​ನವರು ಧೂಳಾಗಿ ಹೋಗುತ್ತಾರೆ. ದೇಶದಲ್ಲಿ ಕಾಂಗ್ರೆಸ್​​ಗೆ ಕಸ ಗುಡಿಸುವ ರೀತಿಯಲ್ಲಿ ಜನ ಗುಡಿಸಿಬಿಟ್ಟಿದ್ದಾರೆ. ರಾಜಕಾರಣ ಮಾಡುವವರು ರಾಜಕೀಯಕ್ಕಾಗಿ ಟೀಕೆ ಮಾಡಲಿ. ಟೀಕೆ ಮಾಡುವುದೇ ಕೆಲವರ ಅಭ್ಯಾಸವಾಗಿದೆ. ಸೋನಿಯಾ ಗಾಂಧಿ ಖುಷಿಪಡಿಸಲು ಟೀಕೆ ಮಾಡುತ್ತಿರಬೇಕು ಎಂದು ಸಚಿವ ಈಶ್ವರಪ್ಪ ಕುಟುಕಿದ್ದಾರೆ.

minister-ks-eswarappa-talk-about-rss-issue
ಸಚಿವ ಈಶ್ವರಪ್ಪ ವಾಗ್ದಾಳಿ
author img

By

Published : Nov 17, 2020, 8:07 PM IST

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಂಎಲ್​​​ಸಿ ಬಿ.ಕೆ.ಹರಿಪ್ರಸಾದ್ ಅವರು ಆರ್​​ಎಸ್​​ಎಸ್ ಬಗ್ಗೆ ತಿಳಿದು‌ಕೊಂಡು ಮಾತನಾಡಬೇಕೆಂದು ಸಚಿವ ಈಶ್ವರಪ್ಪ ಕಾಂಗ್ರೆಸ್​​ನ ಇಬ್ಬರು ನಾಯಕರಿಗೆ ಸಲಹೆ ನೀಡಿದ್ದಾರೆ.

ಸಚಿವ ಈಶ್ವರಪ್ಪ

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಜಾತಿವಾದಿ ಸಂಘ ಎಂದು ಕರೆದಿರುವುದು ಸರಿಯಲ್ಲ. ಬಿ.ಕೆ.ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ಆರ್​​ಎಸ್​​ಎಸ್ ಬಗ್ಗೆ ಏನೂ ಕಲ್ಪನೆ ಇಲ್ಲದೆ ಮಾತನಾಡಿದ್ದಾರೆ. ಚಡ್ಡಿ, ಕರಿ ಟೋಪಿ ಸಂಘಟನೆ ಎಂದು ಹರಿಪ್ರಸಾದ್ ಹೇಳಿದ್ದು ಖಂಡನೀಯ. ಆರ್​ಎಸ್​​ಎಸ್ ಜಾತಿವಾರು ಸಂಸ್ಥೆಯಲ್ಲ. ಅದರ ಬಗ್ಗೆ ಮಾತನಾಡಲು ಇವರಿಗೆ ಯಾವುದೇ ಹಕ್ಕಿಲ್ಲ ಎಂದು ಕಿಡಿಕಾರಿದರು.

ರಾಷ್ಟ್ರಧ್ವಜ ಹಾರಿಸಲು ಇವರಿಗೆ ಆಸಕ್ತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನಮ್ಮ ಕಚೇರಿ ಸೇರಿದಂತೆ ಕೆಂಪು ಕೋಟೆಯವರೆಗೆ ನಮ್ಮ ಸಂಘಟನೆಯಲ್ಲಿರುವರೇ ರಾಷ್ಟ್ರಧ್ವಜ ಹಾರಿಸುತ್ತಿದ್ದಾರೆ. ಮೊದಲು ಅವರಿಬ್ಬರು ಆರ್​ಎಸ್​​ಎಸ್ ಎಂದರೆ ಏನು ಎಂಬುದು ತಿಳಿದುಕೊಳ್ಳಲಿ. ನನಗೂ ಹಗುರವಾಗಿ ಮಾತನಾಡಲು ಬರುತ್ತದೆ. ಆದರೆ ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಹೋದಲ್ಲೆಲ್ಲಾ ಮೋದಿ, ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಬಗ್ಗೆ ಟೀಕೆ ಮಾಡುತ್ತಾರೆ. ಅಲ್ಪಸಂಖ್ಯಾತರನ್ನು ಸಂತೃಪ್ತಿಗೊಳಿಸುವ ಕಾರಣದಿಂದಾಗಿ ಆಡಳಿತ ನಡೆಸಿದ ಹಿನ್ನೆಲೆಯಲ್ಲಿ ಇಂದು ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ ಎಂದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿಚಾರ:

ಮರಾಠ ಪ್ರಾಧಿಕಾರ ಸಿಎಂ ರಚನೆ ಮಾಡಿದ್ದು, ಸರ್ಕಾರದ ಎಲ್ಲಾ ತೀರ್ಮಾನಕ್ಕೆ ಎಲ್ಲಾ‌ ಕಡೆ ಬೆಂಬಲ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ರಾಜ್ಯದಲ್ಲಿ ಇದುವರೆಗೆ ಅನೇಕ ಪ್ರಾಧಿಕಾರಗಳ ರಚನೆಯಾಗಿವೆ. ಸಿಎಂ ಯಡಿಯೂರಪ್ಪ ಯಾವುದೇ ದುರುದ್ದೇಶ ಇಟ್ಟುಕೊಂಡು ರಚನೆ ಮಾಡಲು ಮುಂದಾಗಿಲ್ಲ. ಅನೇಕರು ಬೇರೆ ಬೇರೆ ಪ್ರಾಧಿಕಾರ ರಚಿಸಲು ಕೇಳಿಕೊಂಡಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಕೇಳುವುದು ತಪ್ಪಲ್ಲ. ಈ ಬಗ್ಗೆ ನಾಳೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಆರ್​​ಎಸ್​​ಎಸ್ ಬಗ್ಗೆ ಟೀಕೆ ಮಾಡಿದರೆ ಕಾಂಗ್ರೆಸ್​​ನವರು ಧೂಳಾಗಿ ಹೋಗುತ್ತಾರೆ. ದೇಶದಲ್ಲಿ ಕಾಂಗ್ರೆಸ್​​ಗೆ ಕಸ ಗುಡಿಸುವ ರೀತಿಯಲ್ಲಿ ಜನ ಗುಡಿಸಿಬಿಟ್ಟಿದ್ದಾರೆ. ರಾಜಕಾರಣ ಮಾಡುವವರು ರಾಜಕೀಯಕ್ಕಾಗಿ ಟೀಕೆ ಮಾಡಲಿ. ಟೀಕೆ ಮಾಡುವುದೇ ಕೆಲವರ ಅಭ್ಯಾಸವಾಗಿದೆ. ಸೋನಿಯಾ ಗಾಂಧಿ ಖುಷಿಪಡಿಸಲು ಟೀಕೆ ಮಾಡುತ್ತಿರಬೇಕು ಎಂದು ಕುಟುಕಿದರು.

ಸಂಪತ್ ರಾಜ್ ಬಂಧನ ವಿಚಾರ:

ನಮ್ಮ ಮನೆ ಸುಡುವುದಕ್ಕೆ ಸಂಪತ್ ರಾಜ್ ಕಾರಣ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದರು. ಅಧಿಕಾರದ ಆಸೆಗೆ ಕಾಂಗ್ರೆಸ್ ಯಾರನ್ನಾದರೂ ಸುಡುತ್ತೆ. ಸುಟ್ಟಂತಹವರನ್ನು ರಕ್ಷಣೆ ಸಹ‌ ಮಾಡುತ್ತಾರೆ. ದೇಶದ್ರೋಹಿಗಳ ಬಂಧನ ಆಗಿದ್ದು, ಆರಂಭದಲ್ಲಿ ಇದು ಸರ್ಕಾರದ ಸೃಷ್ಟಿ ಎಂಬಂತೆ ಬಿಂಬಿಸಲಾಗಿತ್ತು. ಡಿಕೆಶಿ, ಸಿದ್ದರಾಮಯ್ಯ ಕಾಂಗ್ರೆಸ್ ಬೆನ್ನಿಗೆ ನಿಲ್ಲಲ್ಲ. ಯಾರು ಅವರ ಬೆನ್ನಿಗೆ ನಿಲ್ಲುತ್ತಾರೋ, ಬೆಂಬಲಿಸುತ್ತಾರೋ, ಇವರು ಅವರ ಬೆನ್ನಿಗೆ ನಿಲ್ಲುತ್ತಾರೆ. ಘಟನೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿಗೆ ಅನಾಹುತ ಆಗಿದ್ದರೆ ಯಾರ ಮೇಲೆ ಹೇಳುತ್ತಿದ್ದರೋ ಗೊತ್ತಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.