ಶಿವಮೊಗ್ಗ: ರೈತ ತನ್ನ ಬೆಳೆಗೆ ತಾನೇ ಸರ್ಟಿಫಿಕೇಟ್ ನೀಡುವಂತಹ ನೂತನ ಕ್ರಾಪ್ ಸರ್ವೇ ಆ್ಯಪ್ಗೆ ಜಿಲ್ಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.
ರೈತ ತನ್ನ ಹೊಲದಲ್ಲಿ ನಿಂತು ತನ್ನ ಬೆಳೆ ಯಾವುದು ಎಂದು ನಮೂದಿಸಿ, ಅದನ್ನು ಆ್ಯಪ್ನಲ್ಲಿ ಕಳುಹಿಸಬಹುದು. ಇದಕ್ಕೆ ಸರ್ಕಾರಿ ಅಧಿಕಾರಿಗಳನ್ನು ಕಾಯಬೇಕಿಲ್ಲ. ಇದರಿಂದ ರೈತರ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಇದನ್ನು ರೈತರು ಹೆಚ್ಚೆಚ್ಚು ಬಳಸಿಕೊಳ್ಳಬೇಕು. ಇದು ದೇಶದ ಬೆಳೆ ಸಮೀಕ್ಷೆಯ ಮೊದಲ ಆ್ಯಪ್ ಆಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಈ ವೇಳೆ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ್, ಡಿಸಿ ಶಿವಕುಮಾರ್, ಕೃಷಿ ಅಧಿಕಾರಿ ಕಿರಣ್ ಕುಮಾರ್ ಸೇರಿ ಇತರರು ಹಾಜರಿದ್ದರು.