ಶಿವಮೊಗ್ಗ: ಜಿಲ್ಲಾ ಪಂಚಾಯತ್ ವತಿಯಿಂದ ಇಂದು Catch the Rain ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್ ಸ್ಪರ್ಧೆಯನ್ನು ನಗರದ ನೆಹರೂ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.
ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ನಂದೀಶ್.ಎನ್ ಪ್ರಥಮ, ಕಾರ್ತಿಕ್ ದ್ವಿತೀಯ , ಕಿರಣ್ ತೃತೀಯ ಪ್ರಶಸ್ತಿ ಪಡೆದರು. ಮಹಿಳಾ ವಿಭಾಗದಲ್ಲಿ ಲಕ್ಷ್ಮೀ ಮಂಜೇ ಗೌಡ ಪ್ರಥಮ, ಪುಣ್ಯ ಎಸ್.ಎಸ್ ದ್ವಿತೀಯ, ಅಶ್ವಿನಿ ಪಿ.ಆರ್ ತೃತೀಯ ಬಹುಮಾನ ಪಡೆದರು.
ಇದನ್ನೂ ಓದಿ: ಕೊರೊನಾಗೆ ಹೆದರಿ ಚಿಕಿತ್ಸೆ ನೀಡದ ವೈದ್ಯರು; ಆಟೋದಲ್ಲಿಟ್ಟು ಶವ ಕೊಂಡೊಯ್ದ ತಾಯಿ!