ETV Bharat / state

ಕಂದಾಯ, ಅರಣ್ಯ ಭೂಮಿ ತಕರಾರು ಬಗೆಹರಿಸಲು ಆಗದ ಸ್ಥಿತಿಯಲ್ಲಿದ್ದೇವೆ: ಸಚಿವ ಬೈರೇಗೌಡ - ಕಂದಾಯ ಸಚಿವ ಕೃಷ್ಣ ಬೈರೆಗೌಡ

ಅರಣ್ಯ ಇಲಾಖೆ ಅವರು ತಮ್ಮ ಭೂಮಿ ಎಂದು ಕಾಲಕಾಲಕ್ಕೆ ಕಂದಾಯ ಇಲಾಖೆಯ ಗಮನಕ್ಕೆ ತರದೇ ಇರುವುದರಿಂದ ಸಮಸ್ಯೆ ಬಗೆಹರಿಸಲಾಗದಂತಹ ತ್ರಿಶಂಕು ಪರಿಸ್ಥಿತಿಗೆ ಇಲಾಖೆ ಸಿಲುಕಿ‌ಕೊಂಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

minister-krishna-byregowda-reaction-on-revenue-and-forest-land-disputes
ಕಂದಾಯ ಹಾಗೂ ಅರಣ್ಯ ಭೂಮಿ ತಕರಾರು ಬಗೆಹರಿಸಲು ಆಗದ ಸ್ಥಿತಿಯಲ್ಲಿದ್ದೇವೆ: ಸಚಿವ ಕೃಷ್ಣ ಬೈರೇಗೌಡ
author img

By ETV Bharat Karnataka Team

Published : Sep 6, 2023, 10:28 PM IST

ಸಚಿವ ಕೃಷ್ಣ ಬೈರೇಗೌಡ

ಶಿವಮೊಗ್ಗ: ಜಿಲ್ಲೆಯ ಕಂದಾಯ, ಅರಣ್ಯ ಭೂಮಿ ತಕರಾರು ಬಗೆಹರಿಸಲು ಆಗದ ತ್ರಿಶಂಕು ಪರಿಸ್ಥಿತಿಯಲ್ಲಿ ನಮ್ಮ ಇಲಾಖೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಶಿವಮೊಗ್ಗ ಜಿಲ್ಲೆಯ ಪ್ರವಾಸ ನಡೆಸಿದ ಸಚಿವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಂದಾಯ ಅಧಿಕಾರಿಗಳ ಜಿಲ್ಲಾ‌ಮಟ್ಟದ ಸಭೆ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ವಿಶಿಷ್ಟ ಸಮಸ್ಯೆಗಳಿವೆ. ಬಹುತೇಕ ಭೂ ಮಂಜೂರಾತಿಗೆ ಸಂಬಂಧ ಪಟ್ಟಂತೆ ಸಮಸ್ಯೆಯಾಗಿದೆ ಎಂದರು.

ಇನ್ನು ದುರಾದೃಷ್ಟಕ್ಕೆ ಅರಣ್ಯ ಇಲಾಖೆರವರು ತಮ್ಮ ಭೂಮಿ ಎಂದು ಕಾಲಕಾಲಕ್ಕೆ ಕಂದಾಯ ಇಲಾಖೆಯ ಗಮನಕ್ಕೆ ತಂದಿದ್ದರೆ ಎಲ್ಲವನ್ನು ಸರಿ ಮಾಡಬಹುದಾಗಿತ್ತು. ಈಗ ಅವರು ಅವರು ತಮ್ಮ ಭೂಮಿ ಎಂದು ತರಕಾರು ತೆಗೆದಿದ್ದರಿಂದ ಸಮಸ್ಯೆ ಬಗೆಹರಿಸಲಾಗದಂತಹ ಇಲಾಖೆ ತ್ರಿಶಂಕು ಪರಿಸ್ಥಿತಿಗೆ ಸಿಲುಕಿ‌ಕೊಂಡಿದೆ. ಇಂತಹ ಸಮಸ್ಯೆ ಹೆಚ್ಚಿಗೆ ಇರುವುದು ಶಿವಮೊಗ್ಗ ಜಿಲ್ಲೆಯಲ್ಲಿಯೇ. ಬೇರೆ ಸಮಸ್ಯೆಗಳು ನಮ್ಮ ಹಂತದಲ್ಲಿಯೇ ನಮ್ಮ‌ ಇಚ್ಚಾ ಶಕ್ತಿಯಿಂದಲೇ ಪರಿಹರಿಸುವಂತಹ ಸಮಸ್ಯೆಗಳಿವೆ. ಅರಣ್ಯ ಹಾಗೂ ಕಂದಾಯ ಭೂಮಿ ಎಂದು ಪರಿಹರಿಸಲು ಆಗದಂತಹ ಕಷ್ಟದ ಸಮಸ್ಯೆ ಎಂದರು.

ಸರ್ವೆ ಸಿಬ್ಬಂದಿ ತುಂಬಲು ಸೂಚನೆ: ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ‌ ಕೊರತೆ ಇದೆ ಅಂತ ಡಿಸಿ ಅವರು ಹೇಳಿದ್ದಾರೆ. ನಮ್ಮ ಅಧಿಕಾರಿಗಳಿಗೆ ಮಾನವ ಸಂಪನ್ಮೂಲ ಒದಗಿಸಿಕೊಡಬೇಕು ಎಂದು ತಿಳಿಸಿದ್ದಾರೆ. 2 ಸಾವಿರ ಲೈಸನ್ಸ್ ಸರ್ವೆಯರ್ ನೇಮಕದ ಹಾದಿಯಲ್ಲಿದ್ದೇವೆ. 354 ಸರ್ಕಾರಿ ಸರ್ವೆಯರ್ ನೇಮಕದ ಪ್ರಕ್ರಿಯೆಯಲ್ಲಿದ್ದೇವೆ. ವಿಎ ನೇಮಕ ಮಾಡಿಕೊಳ್ಳಲು ಸಹ ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಲ್ಲಿ ಒಂದು ಜಿಲ್ಲೆಯಿಂದ ಇನ್ನೂಂದು ಜಿಲ್ಲೆಗೆ ಹೆಚ್ಚು ಅಂತರ ವ್ಯತ್ಯಾಸ ಇರಬಾರದು ಅಂತ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಡ್ರೋನ್​ ಸರ್ವೆ ಸಹ ಸರಿ‌ ಇಲ್ಲ: ಈಗಾಗಲೇ ಸರ್ಕಾರಿ ಹಾಗೂ ಖಾಸಗಿ ಭೂಮಿಯ ಡ್ರೋನ್ ಸರ್ವೆ ಮಾಡಿದ್ದಾರೆ. ಕೈಯಲ್ಲಿ ಸರ್ವೆ ಮಾಡುವ ಸಮಸ್ಯೆಯೇ ಡ್ರೋನ್​ ಸರ್ವೆಯಲ್ಲಿ ಬರುತ್ತಿದೆ. ಆಕಾರ್ ಬಂದ್ ನಿಂದಲೇ ಸಮಸ್ಯೆ‌ ಇದೆ. ಮಿಸ್ ಮ್ಯಾಚ್ ಸರಿ ಮಾಡದೇ ಹೋದರೆ, ಯಾವುದು‌ ಸರಿ ಆಗಲ್ಲ ಎಂದ ಅವರು, ತೆಲಂಗಾಣ ,ಆಂಧ್ರ ಹಾಗೂ ಗುಜರಾತ್​ಗೆ ಹೋಗಿ‌ ಅಲ್ಲಿ ಯಾವ ರೀತಿ ಸರ್ವೆ ಮಾಡುತ್ತಿದ್ದಾರೆ ಎಂದು ತಿಳಿದು‌ಕೊಂಡು ಬರಲು ತಿಳಿಸಿದ್ದೇನೆ ಎಂದು ಹೇಳಿದರು.

ಪಹಣಿಯಲ್ಲಿ ಬೆಳೆ ನಮೂದು ಮಾಡುವ ಕುರಿತು ಇ ಗವರ್ನೆನ್ಸ್​ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಫಾರಂ 57 ಅರ್ಜಿ ಬಂದಿದೆ. ಈಗ 97 ಸಾವಿರ ಅರ್ಜಿ ಬಂದಿದೆ. ಇದನ್ನು‌ ಪರಿಶೀಲನೆ ನಡೆಸಿದಾಗ ಸರ್ಕಾರಿ ಭೂಮಿ ಎಷ್ಟಿದೆ ಎಂದು ತಿಳಿದು ಬರುತ್ತದೆ. ನಮ್ಮ‌ಅಧಿಕಾರಿಗಳು ಸ್ಥಳಕ್ಕೆ ಹೋಗಿ ಸರ್ವೆ ಮಾಡಲು ತಿಳಿಸಿದ್ದೇನೆ. ಕೆಲವರು ಜಿಡ್ಡು ಗಟ್ಟಿದ ಮನಸ್ಥಿತಿಯಲ್ಲಿ ಇರುವವರಿದ್ದಾರೆ. ಅವರಿಗೆ ನಾವು ಬದಲಾಗಬೇಕು ಎಂದು ತಿಳಿಸಿದ್ದೇವೆ ಎಂದರು. ಈ ವೇಳೆ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು, ಡಿಸಿ ಹಾಗೂ ಜಿಲ್ಲಾ ಇತರ ಅಧಿಕಾರಿಗಳು ಇದ್ದರು.

ಇದನ್ನೂ ಓದಿ: ಬಿಜೆಪಿಯವರು ರಾಮ, ಕೃಷ್ಣನನ್ನು ಬಿಟ್ಟು ಈಗ ದೇಶಕ್ಕೆ ನಾಮಕರಣ ಮಾಡಲು ಹೊರಟಿದ್ದಾರೆ: ಸಚಿವ ಮಧು ಬಂಗಾರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.