ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್ನಲ್ಲಿ ಕೊರೊನಾ ಹರಡುವಿಕೆ ತಡೆಯುವ ಜವಾಬ್ದಾರಿಯನ್ನು ಆಯಾ ವಾರ್ಡ್ನ ಕಾರ್ಪೋರೇಟರ್ಗಳಿಗೆ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಕೋವಿಡ್ ಕುರಿತು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸೇರಿದಂತೆ ಎಲ್ಲಾ ವಾರ್ಡ್ ಕಾರ್ಪೋರೇಟರ್ಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಗರ ಭಾಗದಲ್ಲಿ ಕೋವಿಡ್ನಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಲಾಕ್ಡೌನ್ ಯಶಸ್ವಿಯಾಗಬೇಕಾದ್ರೆ ಆಯಾ ವಾರ್ಡ್ನ ಕಾರ್ಪೋರೇಟರ್ಗಳು ಹೆಚ್ಚಿನ ಗಮನ ಹರಿಸಬೇಕು. ಜನ ಸೇರದಂತೆ ನೋಡಕೊಳ್ಳಬೇಕಿದೆ. ಕೋವಿಡ್ ತಡೆಯಲು ವಾರ್ಡ್ಗೊಬ್ಬ ನೋಡಲ್ ಆಫೀಸರ್ ನೇಮಕ ಮಾಡಲಾಗುವುದು. ಪಾಲಿಕೆಯ ಎಲ್ಲಾ ವಾರ್ಡ್ಗಳನ್ನು ಒಂದೊಂದು ಝೋನ್ ಎಂದು ಮಾಡಲಾಗುವುದು ಎಂದರು.
ಪ್ರತಿ ವಾರ್ಡ್ ಸ್ಯಾನಿಟೈಸರ್ ಮಾಡಲಾಗುವುದು. ಪ್ರತಿ ವಾರ್ಡ್ಗೂ ಆಹಾರದ ಕಿಟ್ ವಿತರಣೆ ಮಾಡಲಾಗುವುದು. ಈ ಬಾರಿ ಅಕ್ಕಿ, ಗೋಧಿ ಬಿಟ್ಟು ಉಳಿದ ದಿನಸಿ ಸಾಮಾನುಗಳು ಕಿಟ್ನಲ್ಲಿ ಇರಲಿವೆ. ಯಾವ ವಾರ್ಡ್ಗೆ ಎಷ್ಟು ಕಿಟ್, ಕಿಟ್ನಲ್ಲಿ ಏನೆಲ್ಲಾ ಇರಬೇಕು ಎಂದು ಆಯಾ ವಾರ್ಡ್ನ ಕಮಿಟಿ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ವಾರ್ಡ್ಗೆ ಒಂದರಂತೆ ಕೋವಿಡ್ ಕೇರ್ ಸೆಂಟರ್ ರಚನೆ ಮಾಡಲಾಗುವುದು. ಅಂದ್ರೆ ನಗರಕ್ಕೆ ಒಟ್ಟು 9 ಸಿಸಿಸಿ ಸೆಂಟರ್ ರಚನೆ ಮಾಡಲಾಗುವುದು. ಈ ಸೆಂಟರ್ಗಳನ್ನು ಮಂಗಳವಾರ ಪ್ರಾರಂಭ ಮಾಡಲಾಗುವುದು ಎಂದರು.
ಕೋವಿಡ್ ಕೇರ್ ಸೆಂಟರ್ಗೆ ಬೇಕಾದ ವೈದ್ಯರು, ನರ್ಸ್, ಔಷಧ ನೀಡಲಾಗುವುದು. ಹೋಂ ಐಸೋಲೇಷನ್ ತಡೆಯುವ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಹೋಟೆಲ್ನಲ್ಲಿ ಉಳಿಯುವವರಿಗೆ ಅವಕಾಶ ನೀಡಲಾಗುವುದು. ಇದರ ವೆಚ್ಚ ಅವರೇ ಭರಿಸಬೇಕಿದೆ. ಇದು ಕೋವಿಡ್ ಕುಟುಂಬದವರಿಗೆ ಹರಡುವುದನ್ನು ತಡೆಯುವ ದೃಷ್ಟಿಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಬ್ಲಾಕ್ ಫಂಗಸ್ ಜಿಲ್ಲೆಯಲ್ಲಿ ಎಷ್ಟಿದೆ ಎಂಬ ಮಾಹಿತಿ ನನ್ನ ಬಳಿ ಇಲ್ಲ. ಡಿಸಿ ಬಳಿ ಮಾಹಿತಿ ಪಡೆದು ಕೊಂಡು ಹೇಳುವೆ ಎಂದರು.
ಈ ವೇಳೆ ಪಾಲಿಕೆಯಿಂದ ಕೋವಿಡ್ನಿಂದ ಗುಣಮುಖರಾದವರಿಗೆ ಪಾಲಿಕೆಯಿಂದ ಡ್ರೈ ಫ್ರೂಟ್ಸ್ ನೀಡಲಾಯಿತು. ಕಳೆದ ಕೋವಿಡ್ನಲ್ಲಿ ಮೃತರಾದ ಪಾಪನಾಯ್ಕ ಅವರ ಕುಟುಂಬಕ್ಕೆ 30 ಲಕ್ಷ ರೂ.ಗಳ ಚೆಕ್ ವಿತರಿಸಿದರು.