ETV Bharat / state

ಜೆಡಿಎಸ್ ಜೀವಂತವಾಗಿದೆಯೆಂದು ತೋರಿಸಲು ಹೆಚ್ಡಿಕೆ ವಿಡಿಯೋ ರಿಲೀಸ್ ಮಾಡಿದ್ದಾರೆ: ಈಶ್ವರಪ್ಪ - ಹೆಚ್ಡಿಕೆ ವಿಡಿಯೋ ರಿಲೀಸ್ ಬಗ್ಗೆ ಶಿವಮೊಗ್ಗದಲ್ಲಿ ವ್ಯಂಗ್ಯ

ಈಗ ಜೆಡಿಎಸ್ ಎಂಎಲ್ಎಗಳು ಅಲ್ಲೊಂದು ಇಲ್ಲೊಂದು ಸ್ಥಾನ ಗೆಲ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಅವರೂ ಸಹ ಬಿಜೆಪಿಗೆ ಬರಲಿದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೆಚ್ಡಿಕೆಗೆ ಟಾಂಗ್​ ನೀಡಿದ್ದಾರೆ.

ಈಶ್ವರಪ್ಪ
ಈಶ್ವರಪ್ಪ
author img

By

Published : Jan 10, 2020, 5:19 PM IST

ಶಿವಮೊಗ್ಗ: ಕುಮಾರಸ್ವಾಮಿ ಅವರ ಪಕ್ಷ ಜೀವಂತವಾಗಿದೆ ಎಂದು ತೋರಿಸಲು ಮಂಗಳೂರಿನ ವಿಡಿಯೋ ರಿಲೀಸ್ ಮಾಡಿದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ, ಹೆಚ್ಡಿಕೆ ವಿಡಿಯೋ ರಿಲೀಸ್ ಬಗ್ಗೆ ಶಿವಮೊಗ್ಗದಲ್ಲಿ ವ್ಯಂಗ್ಯವಾಡಿದ್ದಾರೆ.

ಈಗ ಜೆಡಿಎಸ್ ಎಂಎಲ್ಎಗಳು ಅಲ್ಲೊಂದು ಇಲ್ಲೊಂದು ಸ್ಥಾನ ಗೆಲ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಅವರೂ ಸಹ ಬಿಜೆಪಿಗೆ ಬರಲಿದ್ದಾರೆ. ಕುಮಾರಸ್ವಾಮಿ ಅವರು ಮಂಗಳೂರು ಗಲಭೆಯ ಬಗ್ಗೆ ನಮ್ಮ ಸರ್ಕಾರದ ಬಗ್ಗೆ ಆರೋಪ ಮಾಡ್ತಾ ಇದ್ದಾರೆ. ಮಂಗಳೂರಿನಲ್ಲಿ ಯಾರು ಗಲಭೆ ಮಾಡಿದ್ರು, ಪೊಲೀಸರ ಮೇಲೆ ಯಾರು ಕಲ್ಲು ತೂರಿದರು, ವ್ಯಾನ್​ಗಳಲ್ಲಿ ಕಲ್ಲು ತಂದು ಹಾಕಿ ಕಲ್ಲು ತೂರಾಟ ಮಾಡಿದವರಿಗೆ ಸಹಾಯ ಮಾಡಿದವರು ಯಾರು? ಅಂತ ರಾಜ್ಯದ ಜನ ಮಾಧ್ಯಮಗಳಲ್ಲೆ ನೋಡಿದ್ದಾರೆ. ಇನ್ನು ಈ ಗಲಭೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒತ್ತಾಯಿಸಿದ್ದರು. ಅದರಂತೆ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದೆ. ನ್ಯಾಯಾಂಗ ತನಿಖೆಯ ವರದಿ ಬರುವವರೆಗೂ ಕಾಯುವುದಕ್ಕೆ ಇವರಿಗೆ ಆಗೋದಿಲ್ಲ. ಹೀಗಾಗಿ ತಾವು ಬದುಕಿದ್ದೇವೆ ಎಂದು ತೋರಿಸಲು ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಕುತಂತ್ರದ ರಾಜಕಾರಣಕ್ಕೆ ಬಗ್ಗಲ್ಲ ಎಂದರು.

ಹೆಚ್ಡಿಕೆ ವಿಡಿಯೋ ರಿಲೀಸ್ ಕುರಿತು ಸಚಿವ ಈಶ್ವರಪ್ಪ ಪ್ರತಿಕ್ರಿಯೆ

ಶೃಂಗೇರಿಯ ಬಂದ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ಗೆ ಮಸಿ ಬಳಿಯುವಂತಹ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅಂತ ಜನ ತಿರಸ್ಕಾರ ಹಾಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂದಿನ ಬೆಳವಣಿಗೆಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

'ಸಿದ್ದು ಮೋದಿಗೆ ಹಿಟ್ಲರ್ ಪದ ಬಳಕೆ ಸರಿಯಲ್ಲ, ದೇಶದ ಕ್ಷಮೆ ಕೇಳಬೇಕು':

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಷಾರನ್ನು ಹಿಟ್ಲರ್ ಅವರಿಗೆ ಹೋಲಿಸಿರುವುದು ಖಂಡನೀಯ. ಸಿದ್ದರಾಮಯ್ಯ ತಕ್ಷಣ ದೇಶದ ಜನರ ಕ್ಷಮೆ ಕೇಳಬೇಕು ಎಂದು ಸಚಿವ ಈಶ್ವರಪ್ಪ ಆಗ್ರಹಿಸಿದರು. ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡ್ರು, ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತಗಳಿಂದ ಸೋತರು. ಇನ್ನೂ ಅವರಿಗೆ ಬುದ್ದಿ ಬಂದಿಲ್ಲ. ನರೇಂದ್ರ ಮೋದಿಯನ್ನು ಹಿಟ್ಲರ್ ಎಂದು ಕರೆದಿದ್ದಿರಾ, ರಾಜ್ಯದ ಜನ ನಿಮ್ಮನ್ನು ಎಲ್ಲಿ ಕೂರಿಸುತ್ತಾರೆ ಅಂತ ನೋಡ್ತಾ ಇರಿ ಎಂದರು.

Intro:ಜೆಡಿಎಸ್ ಪಕ್ಷ ಜೀವಂತವಾಗಿದೆ ಅಂತ ತೋರಿಸಲು ಹೆಚ್ ಡಿ ಕೆ ವಿಡಿಯೋ ರಿಲೀಸ್ ಮಾಡಿದ್ದಾರೆ: ಸಚಿವ ಈಶ್ವರಪ್ಪ ವ್ಯಂಗ್ಯ.

ಶಿವಮೊಗ್ಗ: ಕುಮಾರಸ್ವಾಮಿರವರು ಸಿಎಂ ಆಗಿದ್ರು, ಇಂತಹ ವಿಡಿಯೋಗಳನ್ನು ರಿಲೀಸ್ ಮಾಡಿದ್ರೆ, ಇನ್ನೂ 10 ಜನ್ಮ ಬಂದ್ರೂ ಸಹ ಅವರು ಸಿಎಂ ಆಗೂದಿಲ್ಲ, ಕುಮಾರಸ್ವಾಮಿ ರವರ ಪಕ್ಷ ಜೀವಂತವಾಗಿ ಇದೆ ಅಂತ ತೋರಿಸಲು ಮಂಗಳೂರಿನ ವಿಡಿಯೋ ರಿಲೀಸ್ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಹೆಚ್ ಡಿ ಕೆ ವಿಡಿಯೋ ರಿಲೀಸ್ ಬಗ್ಗೆ ಶಿವಮೊಗ್ಗದಲ್ಲಿ ವ್ಯಂಗ್ಯವಾಡಿದ್ದಾರೆ. ಈಗ ಜೆಡಿಎಸ್ ನವರ ಎಂಎಲ್ಎಗಳು ಅಲ್ಲೊಂದು ಇಲ್ಲೊಂದು ಗೆಲ್ತಾ ಇದ್ದಾರೆ, ಮುಂದಿನ ದಿನಗಳಲ್ಲಿ ಅವರು ಸಹ ಬಿಜೆಪಿಗೆ ಬರಲಿದ್ದಾರೆ ಎಂದರು. ಕುಮಾರಸ್ವಾಮಿ ರವರು ಮಂಗಳೂರು ಗಲಭೆಯ ಬಗ್ಗೆ ನಮ್ಮ ಸರ್ಕಾರದ ಬಗ್ಗೆ ಆರೋಪ ಮಾಡ್ತಾ ಇದ್ದಾರೆ. ಮಂಗಳೂರಿನಲ್ಲಿ ಯಾರು ಗಲಭೆ ಮಾಡಿದ್ರು, ಪೊಲೀಸರ ಮೇಲೆ ಯಾರು ಕಲ್ಲು ತೂರಿದರು. ವ್ಯಾನ್ ಗಳಲ್ಲಿ ಕಲ್ಲು ತಂದು ಹಾಕಿ ಕಲ್ಲು ತೂರಾಟ ಮಾಡಿದವರಿಗೆ ಸಹಾಯ ಮಾಡಿದವರು ಯಾರು ಅಂತ ರಾಜ್ಯದ ಜನ ಮಾಧ್ಯಮಗಳಲ್ಲೆ ನೋಡಿದ್ದಾರೆ. ಇದನ್ನು ಕುಮಾರಸ್ವಾಮಿ ನಂಬೂತ್ತಾರೂ ಇಲ್ಲೂ ನನಗೆ ಗೂತ್ತಿಲ್ಲ. ಮಂಗಳೂರು ಗಲಭೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಅಂತ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒತ್ತಾಯಿಸಿದ್ದರು. ಅದರಂತೆ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದೆ. ನ್ಯಾಯಾಂಗ ತನಿಖೆಯ ವರದಿ ಬರುವ ವರೆಗೂ ಕಾಯುವುದಕ್ಕೆ ಇವರಿಗೆ ಆಗೂದಿಲ್ಲ. ಅದಕ್ಕೆ ಅವರು ತಾವು ಬದುಕ್ಕಿದ್ದೆವೆ ಅಂತ ತೋರಿಸಲು ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಕುತಂತ್ರದ ರಾಜಕಾರಣಕ್ಕೆ ಬಗ್ಗಲ್ಲ.

Body:ಈಗಾಗಲೇ ರಾಜ್ಯದ ಜನ‌ ಕಾಂಗ್ರೆಸ್ ಅನ್ನು ಮೂಲೆ ಗುಂಪು ಮಾಡಿದ್ದಾರೆ. ಜೆಡಿಎಸ್ ಎಲ್ಲಿದೆ ಅಂತ ಹುಡುಕುತ್ತಿದ್ದಾರೆ. ಈ ರೀತಿಯ ಆರೋಪಗಳಿಂದ ರಾಜ್ಯದ ಜನ ಬಿಜೆಪಿ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದು ಕೊಳ್ಳೂದಿಲ್ಲ ಎಂಬ ವಿಶ್ವಾಸವಿದೆ ಎಂದರು. ಕಾಂಗ್ರೆಸ್- ಜೆಡಿಎಸ್ ಆರೋಪಕ್ಕೆ ನಾವು ಬಗೂದಿಲ್ಲ. ನ್ಯಾಯಾಂಗ ತನಿಖೆಯ ವರದಿ ಬಂದ ಬಳಿಕ ತಪ್ಪಿತಸ್ಥ ಗೂಂಡಾಗಳ ವಿರುದ್ದ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದು ಕೊಳ್ಳಲಿದೆ ಎಂದರು.

ಶೃಂಗೇರಿಯ ಬಂದ್ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಕನ್ನಡ ಸಾಹಿತ್ಯ ಪರಿಷತ್ ಗೆ ಮಸಿ ಬಳಿಯುವಂತಹ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅಂತ ಜನ ತಿರಸ್ಕಾರ ಹಾಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂದಿನ ಬೆಳವಣಿಗೆಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

Conclusion:ಸಿದ್ದು ಮೋದಿಗೆ ಹಿಟ್ಲರ್ ಪದ ಬಳಕೆ ಸರಿಯಲ್ಲ, ದೇಶದ ಕ್ಷಮೆ ಕೇಳಬೇಕು:

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರದಾನಿ ನರೇಂದ್ರ ಮೋದಿ ಹಾಗೂ ಅಮಿತ ಷಾರನ್ನು ಹಿಟ್ಲರ್ ಗೆ ಹೋಲಿಸಿರುವುದು ಖಂಡನೀಯ, ಸಿದ್ದರಾಮಯ್ಯ ತಕ್ಷಣ ದೇಶದ ಜನರ ಕ್ಷಮೆ ಕೇಳಬೇಕು ಎಂದು ಸಚಿವ ಈಶ್ವರಪ್ಪ ಆಗ್ರಹಿಸಿದ್ದಾರೆ. ದೇಶದ ಮೆಚ್ಚಿದ ಪರಿಣಾಮ ನರೇಂದ್ರ ಮೋದಿರವರು ಎರಡನೇ ಸಲ ಪ್ರದಾನ ಮಂತ್ರಿಯಾಗಿದ್ದಾರೆ. ಇನ್ನೂ ವಿಶ್ವದಲ್ಲಿ ಮೋದಿರವರಿಗೆ ಮೆಚ್ಚುಗೆ ವ್ಯಕ್ತವಾಗ್ತಾ ಇದೆ. ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದು ಕೊಂಡ್ರು, ಚಾಮುಂಡೇಶ್ವರಿಯಲಿ‌ 36 ಸಾವಿರ ಮತಗಳಿಂದ ಸೋತರು, ಇನ್ನೂ ಅವರಿಗೆ ಬುದ್ದಿ ಬಂದಿಲ್ಲ. ನರೇಂದ್ರ ಮೋದಿಯನ್ನು ಹಿಟ್ಲರ್ ಎಂದು ಕರೆದಿದ್ದಿರಾ ರಾಜ್ಯದ ಜನ ನಿಮ್ಮನ್ನು ಎಲ್ಲಿ ಕೂರಿಸುತ್ತಾರೆ ಅಂತ ನೋಡ್ತಾ ಇರಿ ಎಂದರು. ಉಪ ಚುನಾವಣೆಯಲ್ಲಿ‌ 15 ರಲ್ಲಿ‌ 12 ರಲ್ಲಿ‌ ಸೋತರು ಸಹ ಬುದ್ದಿ ಬಂದಿಲ್ಲ ಎಂದರು.

ಬೈಟ್: ಕೆ.ಎಸ್.ಈಶ್ವರಪ್ಪ. ಸಚಿವರು. ಗ್ರಾಮೀಣಾಭಿವೃದ್ದಿ ಖಾತೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.