ETV Bharat / state

ಆಯುರ್ವೇದ ಆಸ್ಪತ್ರೆಯಲ್ಲಿ ಔಷಧ ಸಸ್ಯ ಉದ್ಯಾನ: ಈ ಮಾದರಿ ಆಸ್ಪತ್ರೆ ಮಾಹಿತಿ ಇಲ್ಲಿದೆ ನೋಡಿ.. - ಈಟಿವಿ ಭಾರತ ಕರ್ನಾಟಕ

ಸೊರಬ ತಾಲೂಕಿನ ಗ್ರಾಮವೊಂದರ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯರು ಗ್ರಾಮಸ್ಥರ ಸಹಕಾರದೊಂದಿಗೆ 75ಕ್ಕೂ ಹೆಚ್ಚು ಔಷಧ ಸಸ್ಯ ಬೆಳೆಸಿ ಗಮನ ಸೆಳೆಯುತ್ತಿದ್ದಾರೆ.

Etv Bharatmedicinal-plant-garden-at-ayurvedic-hospital-in-udri-village-at-soraba
ಆಯುರ್ವೇದ ಆಸ್ಪತ್ರೆಯಲ್ಲಿ ಔಷಧ ಸಸ್ಯ ಉದ್ಯಾನ: ಈ ಮಾದರಿ ಆಸ್ಪತ್ರೆಯ ಮಾಹಿತಿ ಇಲ್ಲಿದೆ ನೋಡಿ..
author img

By

Published : Jul 1, 2023, 7:05 PM IST

Updated : Jul 1, 2023, 10:33 PM IST

ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಔಷಧ ಸಸ್ಯ ಉದ್ಯಾನ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ವೈದ್ಯರೊಬ್ಬರು ಸುಮಾರು 75ಕ್ಕೂ ಹೆಚ್ಚು ಔಷಧ ಸಸಿಗಳನ್ನು ನೆಟ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಆಸ್ಪತ್ರೆಯಲ್ಲಿ ಆಯುಷ್ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಎಂ.ಕೆ. ಮಹೇಶ್ ಅವರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಜೊತೆಗೆ ಆಸ್ಪತ್ರೆಯ ಆವರಣದಲ್ಲಿ ಔಷಧ ಸಸ್ಯಗಳ ಉದ್ಯಾನವನ್ನೇ ಸೃಷ್ಟಿ ಮಾಡಿದ್ದಾರೆ. ಉದ್ಯಾನವು ಆಸ್ಪತ್ರೆಗೆ ಬರುವ ರೋಗಿಗಳಿಗೆ ಮನೋಲ್ಲಾಸ ನೀಡುತ್ತಿದೆ. ಅಷ್ಟೇ ಅಲ್ಲದೇ ತಾಲೂಕಿನಲ್ಲಿಯೇ ಮಾದರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದೂಂದು‌ ರೋಗಕ್ಕೂ ಒಂದೂಂದು ಸಸ್ಯ: ಕ್ಯಾನ್ಸರ್ ಕಾಯಿಲೆಗೆ ಲಕ್ಷಣಫಲ, ಕೊಬ್ಬು ಮತ್ತು ಸಕ್ಕರೆ ಕಾಯಿಲೆಗೆ ಬೆಟ್ಟದ ನೆಲ್ಲಿ, ರೋಗ ನಿರೋಧಕ ಶಕ್ತಿಗೆ ಅಶ್ವಗಂಧ, ಪಚನ ಕ್ರಿಯೆಗೆ ವಿಷ್ಣುಕಾಂತಿ, ಜೀರ್ಣಕ್ರಿಯೆಗೆ ಧಾಲ್ಚಿನ್ನಿ, ಮೂಳೆ ಮುರಿತಕ್ಕೆ ನೀಡುವ ಅಸ್ತಿಶೃಂಖಲ, ಗರ್ಭಕೋಶ ಕಾಯಿಲೆಗೆ ಬಳಕೆಯಾಗುವ ಅಶೋಕ, ಕರಳು ಸಂಬಂಧಿ ಕಾಯಿಲೆಗೆ ಬಿಲ್ವ, ಹೊಟ್ಟೆ ನೋವಿಗೆ ಕಛೂರ, ಕಿಡ್ನಿ ಸ್ಟೋನ್‍ಗೆ ರಾಣಫಲ ಸೇರಿದಂತೆ ವಿವಿಧ ಔಷಧೀಯ ಗುಣಗಳುಳ್ಳ ಮರೀಚ, ಜಲಬ್ರಾಹ್ಮಿ, ಅಪಮಾರ್ಗ, ಅಮಲಕಿ, ಚಿತ್ರಕ, ಗುಡೂಚಿ, ದೂಪದ ಮರ, ಅಸ್ಥಿಶೃಂಖಲ, ದೊಡ್ಡಪತ್ರೆ, ದೂರ್ವ, ಪಿಪ್ಪಲಿ ಮಧುನಾಶಿನಿ, ಪಾನ್ ಪತ್ರೆ, ವಚ ಹೀಗೆ ಸುಮಾರು 75 ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ.

ಜನರಿಗೆ ಮಾಹಿತಿ ನೀಡಲು ನಾಮಫಲಕ: ಆಯುರ್ವೇದವು ಸಂಪೂರ್ಣವಾಗಿ ಸಸ್ಯ, ಮರಗಳನ್ನು ಅವಲಂಭಿಸಿದೆ. ಹೀಗಾಗಿ ಪ್ರತಿಯೊಬ್ಬರು ಔಷಧ ಗುಣವನ್ನು ಹೊಂದಿರುವ ಸಸ್ಯ ಮತ್ತು ಮರಗಳ ಮಾಹಿತಿಯನ್ನು ತಿಳಿದುಕೊಳ್ಳಲು ಪ್ರತಿಯೊಂದು ಸಸಿಗೂ ವೈಜ್ಞಾನಿಕವಾಗಿ, ಆಯುರ್ವೇದದಲ್ಲಿ ಬಳಕೆಯಲ್ಲಿರುವ ಮತ್ತು ಆಡು ಭಾಷೆಯಲ್ಲಿ ಬಳಕೆಯಲ್ಲಿ ಹೆಸರಿನ ನಾಮಫಲಕದ ಜೊತೆಗೆ ಉಪಯೋಗದ ಕುರಿತು ಕಿರು ಮಾಹಿತಿವುಳ್ಳ ನಾಮಫಲಕ ಅಳವಡಿಸಿರುವುದು ಇಲ್ಲಿನ ವಿಶೇಷವಾಗಿದೆ.

ವೈದ್ಯರಿಗೆ ಸ್ಥಳೀಯರ ಸಹಕಾರ: ಡಾ.ಮಹೇಶ್ ಅವರು ಆಯುರ್ವೇದ ಆಸ್ಪತ್ರೆಯಲ್ಲಿ ಔಷಧೀಯ ಸಸ್ಯಗಳನ್ನು‌ ಬೆಳೆಸುತ್ತಿದ್ದಾರೆ ಎಂಬ ವಿಷಯ ತಿಳಿದ ಗ್ರಾಮಸ್ಥರು ಇವರ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಪ್ರತಿ ಸಸಿಗೂ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಬೆಳೆದಿರುವ ಔಷಧೀಯ ಸಸ್ಯಗಳಿಂದ ಔಷಧವನ್ನು ತಯಾರಿಸುತ್ತಿಲ್ಲ. ಬದಲಿಗೆ ಮುಂದಿನ ಪೀಳಿಗೆಗೆ ಅಪರೂಪದ ಸಸ್ಯ ಪ್ರಭೇದಗಳನ್ನು ಸಂರಕ್ಷಿಸಿ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ಯುವಕರು ಸಹ ಕೈಜೋಡಿಸಿದ್ದಾರೆ. ಸಸಿಗಳನ್ನು ಖುದ್ದು ವೈದ್ಯರೇ ಹಾಸನ, ಚಿಕ್ಕಮಗಳೂರು, ಶಿರಸಿ ಸೇರಿದಂತೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಭಾಗದಿಂದ ತಂದಿದ್ದಾರೆ. ಇನ್ನಷ್ಟು ಸ್ಥಳಾವಕಾಶವಿದಿದ್ದರೆ ಔಷಧ ವನವನ್ನೇ ಮಾಡುವ ಹಂಬಲ ಇಲ್ಲಿನ ವೈದ್ಯರಲ್ಲಿದೆ.

ನರೇಗಾ ಸದ್ಬಳಕೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಕ್ರಿಯಾಯೋಜನೆ ತಯಾರಿಸಿ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. 109 ಮಾನವ ದಿನಗಳನ್ನು ಇಲ್ಲಿ ಸೃಜನೆ ಮಾಡಲಾಗಿದೆ. ಅನುದಾನದ ಕೊರತೆಯ ನಡುವೆ ನರೇಗಾ ವರದಾನವಾಗಿದೆ. ನರೇಗಾ ಸೇರಿದಂತೆ ಸುಮಾರು 2 ಲಕ್ಷ ರೂ ವೆಚ್ಚದಲ್ಲಿ ಸುಂದರ ಉದ್ಯಾನ ನಿರ್ಮಾಣವಾಗಿದೆ. ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆ ತಾಲೂಕಿನಲ್ಲಿಯೇ ಮಾದರಿಯಾಗಿದ್ದು, ಕೇವಲ ಆಸ್ಪತ್ರೆಯಾಗಿರದೇ, ಔಷಧ ಸಸ್ಯಗಳ ಭಂಡಾರವನ್ನೇ ಹೊತ್ತು ನಿಂತಿರುವುದು ಗ್ರಾಮಸ್ಥರಿಗೂ ಸಹ ಹೆಮ್ಮೆಯ ವಿಷಯವಾಗಿದೆ.

ವೈದ್ಯಾಧಿಕಾರಿ ಡಾ. ಎಂ.ಕೆ. ಮಹೇಶ್ ಮಾತನಾಡಿ, ಉದ್ರಿ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಸ್ಥಳದ ಕೊರತೆಯ ನಡುವೆಯೂ ಗ್ರಾಮಸ್ಥರ ಮತ್ತು ಸ್ಥಳೀಯ ಗ್ರಾಪಂ ಸಹಕಾರದೊಂದಿಗೆ ಕಳೆದ ಮೂರು ವರ್ಷದಿಂದ ಔಷಧ ಸಸ್ಯಗಳ ಉದ್ಯಾನ ಮಾಡಲಾಗಿದೆ. ತಾವು ಸೇವೆ ಸಲ್ಲಿಸುವ ವೇಳೆಯಲ್ಲಿ ಗ್ರಾಮಸ್ಥರು ಸಹ ಉತ್ತಮ ಸಹಕಾರ ನೀಡುತ್ತಿದ್ದಾರೆ. ಗ್ರಾಮಸ್ಥರ ನೆರವಿನಿಂದ ಪರಿಸರ ದಿನ, ರಕ್ತದಾನ ಶಿಬಿರದಂತಹ ಅನೇಕ ಸಮಾಜಮುಖಿ ಕಾರ್ಯಗಳು ಸಹ ನಡೆದಿದೆ. ತಾಲೂಕು ಕೇಂದ್ರದಲ್ಲಿ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆ ನಿರ್ಮಿಸಲು ಅನುಮೋದನೆಯ ಹಂತದಲ್ಲಿದ್ದು, ತಾಲೂಕು ಕೇಂದ್ರದ ಆಸ್ಪತ್ರೆಯ ಆವರಣದಲ್ಲಿಯೇ ಔಷಧ ವನ ಅಥವಾ ಉದ್ಯಾನ ಮಾಡುವ ಅಭಿಲಾಷೆ ಇದೆ ಎಂದು ತಿಳಿಸಿದ್ದಾರೆ.

ಗ್ರಾಮದ ಸಲಹ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಮಾತನಾಡಿ, ಗ್ರಾಮಸ್ಥರು ತಮ್ಮ ಗ್ರಾಮದ ಆಯುರ್ವೇದ ಆಸ್ಪತ್ರೆಯನ್ನು ಇಲ್ಲಿನ ವೈದ್ಯರು ಚೆನ್ನಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರು‌ ಆಸ್ಪತ್ರೆಯ ಆವರಣದಲ್ಲಿ ಆರ್ಯವೇದ ಔಷಧ ಸಸ್ಯಗಳನ್ನು ಬೆಳೆಸುವುದನ್ನು ತಿಳಿದು ಗ್ರಾಮಸ್ಥರೂ ಸಹಕಾರ ನೀಡಿದ್ದೆವೆ. ನಮ್ಮ ಗ್ರಾಮಸ್ಥರು ವೈದ್ಯರ ಜೊತೆ ಕೈ ಜೋಡಿಸಿದ ಪರಿಣಾಮ ಇಲ್ಲಿ ಒಂದು ಸುಂದರ ಆಯುರ್ವೇದ ಔಷಧ ವನ‌ ನಿರ್ಮಾಣವಾಗಿದೆ. ಇದಕ್ಕೆ ನಾವು ವೈದ್ಯರಾದ ಮಹೇಶ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಆಸ್ಪತ್ರೆಯ ನೌಕರ ದರ್ಶನ್ ಮಾತನಾಡಿ, ನಮ್ಮ ಆಸ್ಪತ್ರೆಯನ್ನು ಇಂದು ಔಷಧದ ಉದ್ಯಾನವನವಾಗಿ ರೂಪಿಸಲು ನಮ್ಮ‌ ವೈದ್ಯರಾದ ಮಹೇಶ್ ಸರ್ ಹಾಗೂ ಗ್ರಾಮಸ್ಥರ ಶ್ರಮ ಇದೆ. ಇಂದು ನಾವೆಲ್ಲಾ‌ ಇಲ್ಲಿ ಕೆಲಸ‌ ಮಾಡುತ್ತಿರುವುದು ನಮಗೆ ಖುಷಿ ತಂದಿದೆ ಎಂದು ಹೇಳಿದರು.

ಇದನ್ನೂ ಓದಿ: ಸಿಗಂದೂರು ಸೇತುವೆ ಕಾಮಗಾರಿಗೆ ಅಡ್ಡಿಯಾದ ನೀರಿನ ಮಟ್ಟದ ಕುಸಿತ: ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ

Last Updated : Jul 1, 2023, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.