ಶಿವಮೊಗ್ಗ: ಪೊಲೀಸ್ ಠಾಣೆಗೆ ವಿಚಾರಣೆಗೆಂದು ಕರೆದುಕೊಂಡು ಬಂದಿದ್ದ ವ್ಯಕ್ತಿಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಸ್ಪಷ್ಟನೆ ಕೊಟ್ಟರು.
ಬಾಲೇಶ್ ಸಾವಿನ ಕುರಿತು ಮಾತನಾಡಿದ ಅವರು, ಬಾಲೇಶ್ನನ್ನು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ ಅವರ ಮನೆಗೆ ಕಳುಹಿಸಿ ಕೊಡಲಾಗಿತ್ತು. ಈ ವೇಳೆ ಬಾಲೇಶ್ ಕೈಮರದ ಬಳಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರ ಸಂಬಂಧಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದನ್ನು ವೈದ್ಯರೇ ಧೃಡೀಕರಿಸಿದ್ದಾರೆ ಎಂದರು.
ಬಾಲೇಶ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.ಈ ಕುರಿತು ದಾಖಲೆಗಳಿವೆ. ಅವರನ್ನು ಯಾವ ಪೊಲೀಸ್ ಠಾಣೆಯಲ್ಲೂ ಸಹ ಥಳಿಸಲಾಗಿಲ್ಲ.ಅವರು ಹೃದಯಘಾತದಿಂದಲೇ ಸಾವನ್ನಪ್ಪಿದ್ದಾರೆ.ಇನ್ನೂ ಅವರ ಸಾವಿನ ಕುರಿತು ಕೆಲವರು ಅನುಮಾನ ವ್ಯಕ್ತಪಡಿಸುತ್ತಿರುವ ಕಾರಣ ಈ ಕುರಿತು ತನಿಖೆಗೆ ಆದೇಶ ಮಾಡಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಬಾಲೇಶ್ ಹೊಳಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿ ಆಗರದಹಳ್ಳಿ ಕ್ಯಾಂಪ್ನ ನಿವಾಸಿಯಾಗಿದ್ದು, ಮಟ್ಕಾ ದಂಧೆ ನಡೆಸುತ್ತಿದ್ದರು. ಈ ಕುರಿತು ಠಾಣೆಗೆ ವಿಚಾರಣೆಗೆ ಕರೆಯಿಸಿ ವಾಪಸ್ ಕಳುಹಿಸಿದಾಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.