ETV Bharat / state

ರಿಪೇರಿ ಮಾಡಲು ವಿದ್ಯುತ್ ಕಂಬವೇರಿದ ಯುವಕ: ಕಂಬದಲ್ಲಿಯೇ ಸುಟ್ಟು ಕರಕಲು - ಯುವಕ ಸಾವು

ವಿದ್ಯುತ್ ಕಂಬ ಏರಿ‌ ರಿಪೇರಿ ಮಾಡಲು ಹೋಗಿ ಯುವಕನೋರ್ವ ಕಂಬದಲ್ಲಿಯೇ ಸುಟ್ಟು ಕರಕಲಾಗಿದ್ದಾನೆ. ಸುರೇಶ್​ (21) ಮೃತ ಯುವಕ.

Man dies on electricity pole in Shimoga
ರಿಪೇರಿ ಮಾಡಲು ವಿದ್ಯುತ್ ಕಂಬವೇರಿದ ಯುವಕ: ಕಂಬದಲ್ಲಿಯೇ ಸುಟ್ಟು ಕರಕಲು
author img

By

Published : Dec 21, 2020, 6:58 PM IST

Updated : Dec 21, 2020, 8:08 PM IST

ಶಿವಮೊಗ್ಗ: ವಿದ್ಯುತ್ ಸರಿಯಾಗಿ ಪ್ರಸರಣವಾಗುತ್ತಿಲ್ಲ ಎಂದು ವಿದ್ಯುತ್ ಕಂಬ ಏರಿ‌ ರಿಪೇರಿ ಮಾಡಲು ಹೋಗಿ ಯುವಕನೋರ್ವ ಕಂಬದಲ್ಲಿಯೇ ಸುಟ್ಟು ಕರಕಲಾಗಿದ್ದಾನೆ. ಭದ್ರಾವತಿಯ ಕಾಳೆನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರಿಪೇರಿ ಮಾಡಲು ವಿದ್ಯುತ್ ಕಂಬವೇರಿದ ಯುವಕ: ಕಂಬದಲ್ಲಿಯೇ ಸುಟ್ಟು ಕರಕಲು

ಸುರೇಶ್​ (21) ಮೃತ ಯುವಕ. ಕಾಳನಕಟ್ಟೆ ಗ್ರಾಮದ ಅಣ್ಣಯ್ಯ ಎಂಬುವರ ಜಮೀನಿನ ಬೋರ್ ವೆಲ್ ಗೆ ಸರಿಯಾಗಿ ವಿದ್ಯುತ್ ಸಂಪರ್ಕವಾಗದ ಕಾರಣ ಸುರೇಶ್ ನನ್ನು ಕರೆಸಿ ವಿದ್ಯುತ ಕಂಬ ಹತ್ತಿಸಿದ್ದಾರೆ. ಈ ವೇಳೆ ವಿದ್ಯುತ್ ಪ್ರಸರಣವಾಗಿ ಸುರೇಶ್​ ಕಂಬದಲ್ಲಿಯೇ ಸುಟ್ಟು ಕರಕಲಾಗಿದ್ದಾನೆ ಎನ್ನಲಾಗ್ತಿದೆ.

ಮೃತ ಸುರೇಶ್ ಐಟಿಐ ವಿದ್ಯಾಭ್ಯಾಸ ಮಾಡಿದ್ದು, ಗ್ರಾಮದ ಸುತ್ತ ಮುತ್ತ ಸಣ್ಣಪುಟ್ಟ ರಿಪೇರಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಅಣ್ಣಯ್ಯನನ್ನು ವಶಕ್ಕೆ ಪಡೆದಿದ್ದಾರೆ.

Last Updated : Dec 21, 2020, 8:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.