ETV Bharat / state

ಅಣ್ಣನ ಪರವಾಗಿ ತಮ್ಮ ಪ್ರತಿಭಟಿಸುವಾಗ ಹೃದಯಾಘಾತದಿಂದ ಸಾವು.. - ಬೀದಿ ಬದಿ ವ್ಯಾಪಾರಿ

ಸಾಗರ ನಗರಸಭೆ ಆಯುಕ್ತ ಹೆಚ್ ಕೆ ನಾಗಪ್ಪ ಪರವಾಗಿ ಸಹೋದರ ಹೆಚ್. ಕೆ ಗಣಪತಿ (50) ಪ್ರತಿಭಟನೆ ನಡೆಸುವಾಗ ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶಿವಮೊಗ್ಗದ ಸಾಗರದಲ್ಲಿ ನಡೆದಿದೆ.

ಹೆಚ್ ಕೆ ಗಣಪತಿ
ಹೆಚ್ ಕೆ ಗಣಪತಿ
author img

By

Published : Nov 30, 2022, 8:07 PM IST

ಶಿವಮೊಗ್ಗ: ಅಣ್ಣನ ಪರವಾಗಿ ತಮ್ಮ ಪ್ರತಿಭಟನೆ ನಡೆಸುವಾಗ ತಮ್ಮ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸಾಗರದಲ್ಲಿ ನಡೆದಿದೆ. ಸಾಗರ ನಗರಸಭೆ ಆಯುಕ್ತ ಹೆಚ್ ಕೆ ನಾಗಪ್ಪ ಪರವಾಗಿ ಸಹೋದರ ಹೆಚ್ ಕೆ ಗಣಪತಿ (50) ಪ್ರತಿಭಟನೆ ನಡೆಸುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಗಣಪತಿಯನ್ನು ಸಾಗರದ ಉಪವಿಭಾಗಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಅಷ್ಟರಲ್ಲಿ ಗಣಪತಿ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ನಾಗಪ್ಪ ಅವರು ಸಾಗರ ನಗರಸಭೆಯ ಪ್ರಭಾರ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಂದು ಬೆಳಗ್ಗೆ ಬೀದಿ ಬದಿ ವ್ಯಾಪಾರಿಯೊಬ್ಬನ ಅಂಗಡಿ ತೆರವು ಮಾಡಿದ ವಿಚಾರದಲ್ಲಿ ಕೆಲವರು ಬಂದು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ನಂತರ ಕಚೇರಿ ಒಳಗೆ ಹೋಗಿ ಕೂಗಾಟ ನಡೆಸಿದ್ದರು‌. ನಾಗಪ್ಪ ಅವರನ್ನು ಎಳೆದಾಡಲು ಪ್ರಯತ್ನಿಸಿದ್ದರು. ಇದರಿಂದ ಸಾಗರ ತಾಲೂಕು ನಗರಸಭೆ ವ್ಯಾಪ್ತಿಯ ಈಡಿಗರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಗಣಪತಿ ಅವರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.‌

ಓದಿ: ಚಾಕುವಿನಿಂದ ಪತ್ನಿಯನ್ನು ಮನಬಂದಂತೆ ಇರಿದು ಕೊಂದ ಪತಿರಾಯ.. ಹೊಸಕೋಟೆಯಲ್ಲಿ ದಾರುಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.