ಶಿವಮೊಗ್ಗ: ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದ ಮಗ ಸಹ ಸಾವನ್ನಪ್ಪಿದ ಘಟನೆ ಹೊಸನಗರ ತಾಲೂಕು ಸುಳಗೋಡು ಗ್ರಾಮ ಪಂಚಾಯತಿಯ ಹುಲ್ಲುಸಾಲೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಶನಿವಾರ ಹುಲ್ಲುಸಾಲೆ ಗ್ರಾಮದ ಚಿನ್ನಮ್ಮ(78) ವಯೋ ಸಹಜವಾಗಿ ಸಾವನ್ನಪ್ಪಿದ್ದರು. ಇವರ ಅಂತ್ಯ ಸಂಸ್ಕಾರವನ್ನು ಭಾನುವಾರ ನಡೆಸಲಾಯಿತು. ತಾಯಿ ಚಿನ್ನಮ್ಮನ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದ 30 ನಿಮಿಷದ ನಂತರ ಚಿನ್ನಮ್ಮನ ಮಗ ತಿಮ್ಮಪ್ಪಗೌಡ(58) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ತಿಮ್ಮಪ್ಪಗೌಡ ತನ್ನ ತಾಯಿಯನ್ನು ಬಹಳ ಪ್ರೀತಿಸುತ್ತಿದ್ದರು. ಇದರಿಂದ ಅವರಿಗೆ ಹೃದಯಾಘಾತವಾಗಿರಬಹುದು ಎನ್ನಲಾಗುತ್ತಿದೆ. ಒಂದೇ ಮನೆಯಲ್ಲಿ ಎರಡು ದಿನಗಳ ಅಂತರದಲ್ಲಿ ತಾಯಿ ಮಗ ಸಾವನ್ನಪ್ಪಿದ್ದು, ಕುಟುಂಬಕಷ್ಟೇ ಅಲ್ಲದೆ, ಗ್ರಾಮಸ್ಥರಿಗೆ ದಿಗ್ಬ್ರಮೆಯನ್ನುಂಟು ಮಾಡಿದೆ. ತಿಮ್ಮಪ್ಪಗೌಡರಿಗೆ ಪತ್ನಿ ಹಾಗೂ ಓರ್ವ ಪುತ್ರ ಇದ್ದಾರೆ.
ಓದಿ: ಮಕ್ಕಳನ್ನೂ ಬಿಡದೆ ಕಾಡುತ್ತಿದೆ ಹೃದಯಾಘಾತ: ತಂದೆಯ ಕಣ್ಣೆದುರೇ ಕುಸಿದು ಬಾಲಕ ಸಾವು