ಶಿವಮೊಗ್ಗ: ಮನೆ ಹಿಂದಿನ ಅಡಿಕೆ ತೋಟದಲ್ಲಿ ಗಾಂಜಾ ಗಿಡ ಬೆಳೆದಿದ್ದ ಓರ್ವನನ್ನು ತೀರ್ಥಹಳ್ಳಿ ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿ ತಾಲೂಕು ಹಳಗ ಗ್ರಾಮದ ರವಿ ಎಂಬಾತ ತನ್ನ ಮನೆ ಹಿಂಭಾಗದ ತೋಟದಲ್ಲಿ 4 ಗಾಂಜಾ ಗಿಡಗಳನ್ನು ಬೆಳೆದಿದ್ದ. ಇದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ 3 ಅಡಿ ಎತ್ತರದ ಸುಮಾರು 3 ಸಾವಿರ ಮೌಲ್ಯದ 4 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿ ರವಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ದಾಳಿಯಲ್ಲಿ ತೀರ್ಥಹಳ್ಳಿ ಅಬಕಾರಿ ಪೊಲೀಸ್ ಅಮಿತ್ ಕುಮಾರ್, ರಾಕೇಶ್, ರಾಘವೇಂದ್ರ ಸೇರಿ ಭಾಗಿಯಾಗಿದ್ದರು.