ETV Bharat / state

ಮಹಾತ್ಮ ಗಾಂಧಿ 150ನೇ ಜನ್ಮ ದಿನ ಹಿನ್ನೆಲೆ.. ನೂತನ ಗೀತೆ ಬಿಡುಗಡೆ! - ಮಹಾತ್ಮ ಗಾಂಧೀಜಿ 150ನೇ ಜನ್ಮದಿನ

150ನೇ ಜನ್ಮ ದಿನದ ಪ್ರಯುಕ್ತ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರಗಳನ್ನ ಒಳಗೊಂಡ ಗೀತೆಯನ್ನ ಬಿಡುಗಡೆ ಮಾಡಲಾಗಿದೆ.

ಗಾಂಧೀಜಿ ಕುರಿತ ಗೀತೆ ಬಿಡುಗಡೆ
author img

By

Published : Sep 28, 2019, 10:48 PM IST

ಶಿವಮೊಗ್ಗ: ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಪ್ರಯುಕ್ತ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರಗಳನ್ನ ಒಳಗೊಂಡ ಗೀತೆಯನ್ನ ಬಿಡುಗಡೆ ಮಾಡಲಾಗಿದೆ.

ಗಾಂಧೀಜಿ ಕುರಿತ ಗೀತೆ ಬಿಡುಗಡೆ

ಶಿವಮೊಗ್ಗ ನಗರದ ಪತ್ರಿಕಾಭವನದಲ್ಲಿ ಪ್ರೆಸ್​ ಟ್ರಸ್ಟ್​ನ ಅಧ್ಯಕ್ಷರಾದ ಮಂಜುನಾಥ್ ಅವರು ಈ ಹಾಡನ್ನ ಬಿಡುಗಡೆಗೊಳಿಸಿದರು. 'ನಿನ್ನ ಪ್ರತಿಮೆಯ ನಿಲ್ಲಿಸಿ ನಾವು ಮೆರೆಯುವುದು ವ್ಯರ್ಥ' ಎಂಬ ಈ ಗೀತೆಯನ್ನ ಖ್ಯಾತ ಕವಿ ದಿನಕರ ದೇಸಾಯಿಯವರು ರಚನೆ ಮಾಡಿದ್ದಾರೆ.

ಛಾಯಾಚಿತ್ರಗಾರ ಶಿವಮೊಗ್ಗ ನಂದನ್ ಅವರು ಈ ವಿಡಿಯೋ ಸಾಂಗ್ ನಿರ್ಮಾಣದ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿ ಸಿದ್ದಪಡಿಸಿದ್ದಾರೆ. ಮಲೆನಾಡಿನ ಪ್ರಸಿದ್ಧ ಗಾಯಕಿ ಸುರೇಖಾ ಹೆಗಡೆ ಅವರು ಈ ಹಾಡಿಗೆ ಧ್ವನಿಗೂಡಿಸಿದ್ದು, ಈ ಹಾಡನ್ನು ಯೂಟ್ಯೂಬ್​ಗೆ ಅಪ್ಲೋಡ್ ಮಾಡಲಾದೆ.

  • " class="align-text-top noRightClick twitterSection" data="">

ಈ ಕುರಿತು ಮಾತನಾಡಿದ ಗಾಯಕಿ ಸುರೇಖಾ ಹೆಗಡೆ, ಗಾಂಧೀಜಿ ಅವರ ಕುರಿತಂತೆ ಸಾವಿರಾರು ಹಾಡುಗಳು ಬಂದಿವೆ. ಆದರೆ ಈ ಹಾಡು ತುಂಬಾ ಆಪ್ತವಾಗಿದೆ. ನಾಡಿನ ಪ್ರಸಿದ್ಧ ಕವಿ ದಿನಕರ ದೇಸಾಯಿ ಗಾಂಧೀಜಿ ಕುರಿತಂತೆ ಎಳೆ ಎಳೆಯಾಗಿ ತಮ್ಮ ಪದಗಳಲ್ಲಿ ಹೇಳಿದ್ದಾರೆ. ಈ ಗೀತೆಯನ್ನ ಹಾಡಲು ಖುಷಿಯಾಗಿದೆ ಎಂದಿದ್ದಾರೆ.

Intro:ಶಿವಮೊಗ್ಗ,
ಗಾಂಧಿಯವರು ೧೫೦ನೇ ಜಯಂತಿ ಪ್ರಯುಕ್ತ
ಗಾಂಧಿಯವರ ಅಪರೂಪದ ಛಾಯಾಚಿತ್ರಗಳೊಂಡ ವಿಶೇಷ ವಿಡಿಯೋ ಹಾಡು ಬಿಡುಗಡೆ.

"ನಿನ್ನ ಪ್ರತಿಮೆಯ ನಿಲ್ಲಿಸಿ ನಾವು ಮೆರೆಯುವುದು ವ್ಯರ್ಥ"
ಈ ಸಾಲುಗಳು ಖ್ಯಾತ ಕವಿ ದಿನಕರ ದೇಸಾಯಿಯವರ ರಚನೆಯಾಗಿದೆ. ಇದೀಗ ಈ ಹಾಡನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದ್ದು. ಗಾಂಧೀಜಿಯವರ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡ ವಿಡಿಯೋ ಸಾಂಗ್ ಅನ್ನು ಪತ್ರಿಕಾಭವನದಲ್ಲಿ ಪ್ರಸ್ ಟ್ರಸ್ಟ್ ನ ಅಧ್ಯಕ್ಷ ರಾದ ಮಂಜುನಾಥ್ ಬಿಡುಗಡೆಗೊಳಿಸಿದರು.
ಈ ವಿಡಿಯೋ ಸಾಂಗ್ ಸಾಹಸಕ್ಕೆ ಕೈ ಹಾಕಿದವರು ಛಾಯಾಚಿತ್ರಗಾರ ಶಿವಮೊಗ್ಗ ನಂದನ್ ,
ಮಲೆನಾಡಿನ ಪ್ರಸಿದ್ಧ ಗಾಯಕಿ ಸುರೇಖಾ ಹೆಗಡೆ ಅವರು ಈ ಹಾಡಿಗೆ ದ್ವನಿಗೂಡಿಸಿದ್ದಾರೆ.
ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಯಕಿ ಸುರೇಖಾ ಹೆಗಡೆ ಗಾಂಧೀಜಿ ಅವರ ಕುರಿತಂತೆ ಸಾವಿರಾರು ಹಾಡುಗಳು ಬಂದಿವೆ.
ಆದರೆ ಈ ಹಾಡು ತುಂಬಾ ಆಪ್ತವಾಗಿದ್ದು.
ದಿನಕರ ದೇಸಾಯಿ ನಾಡಿನ ಪ್ರಸಿದ್ಧ ಕವಿ ಗಾಂಧೀಜಿ ಕುರಿತಂತೆ ಎಳೆಎಳೆಯಾಗಿ ತಮ್ಮ ಪದಗಳಲ್ಲಿ ಬಿಡಿಸಿದ್ದಾರೆ.
ಇದನ್ನು ಹಾಡಲು ಖುಷಿಯಾಗಿದೆ.ಈ ವಿಡಿಯೋಚಿತ್ರೀಕರಣದಲ್ಲಿ ಗಾಂಧಿಜೀ ಅವರ ಅಪರೂಪದ ಪೋಟೋ ಇರುವುದರಿಂದ ಮತ್ತಷ್ಟು ಮೆರಗು ಬಂದಿದೆ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.