ETV Bharat / state

ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆಯಲ್ಲಿ ನಮ್ಮ ಪಾಲು ನಮಗೆ ನೀಡಲಿ: ಸಚಿವ ಮಧು ಬಂಗಾರಪ್ಪ

ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವುದರಿಂದ ಕೇಂದ್ರ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದ್ದಾರೆ.

ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ
author img

By ETV Bharat Karnataka Team

Published : Dec 1, 2023, 8:29 PM IST

Updated : Dec 1, 2023, 10:05 PM IST

ಕೇಂದ್ರದಿಂದ ಬರ ಪರಿಹಾರ ಹಣ ಬಿಡುಗಡೆಯಾಗಿಲ್ಲ

ಶಿವಮೊಗ್ಗ : ನಮ್ಮ ರಾಜ್ಯದಿಂದ ಪ್ರತಿ ವರ್ಷ 4 ಲಕ್ಷ ಕೋಟಿ ರೂ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತದೆ. ಇದರಲ್ಲಿ ನಮ್ಮ ಪಾಲು ನಮಗೆ ನೀಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಾಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಬರದ ಕುರಿತು ಅಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿದ ಅವರು, ರಾಜ್ಯಕ್ಕೆ ಬರಕ್ಕಾಗಿ ಕೇಂದ್ರದಿಂದ ಯಾವುದೇ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ರಾಜ್ಯದಿಂದ 17 ಸಾವಿರ ಕೋಟಿ ರೂಗಳನ್ನ ಬರ ನಿರ್ವಹಣೆಗಾಗಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೆವು. ಈಗ ಸಿಎಂ ಸಿದ್ದರಾಮಯ್ಯ ತುರ್ತಾಗಿ ರಾಜ್ಯದ ರೈತರಿಗೆ 2. ಸಾವಿರ ರೂ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದ 16 ಜಿಲ್ಲೆಗಳಲ್ಲಿ ಬರ ಇದೆ. ಇದರಿಂದ ಕೇಂದ್ರ ಸರ್ಕಾರ ಹಣ ನೀಡಬೇಕಾಗುತ್ತದೆ ಎಂದು ತಿಳಿಸಿದರು

ಪಂಚರಾಜ್ಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಪರ ಬಂದಿರುವುದು ಒಂದೇ ಒಂದು ರಾಜ್ಯ, ಉಳಿದವುಗಳಲ್ಲಿ ಕಾಂಗ್ರೆಸ್ ಪರ ಇದೆ. ಚುನಾವಣಾ ಫಲಿತಾಂಶ ಬಂದಾಗ ನೋಡೋಣ ಎಂದು ಸಚಿವರು ಹೇಳಿದರು. ನಮ್ಮ ಸರ್ಕಾರ ಇದ್ದಾಗ ಕೇಂದ್ರಕ್ಕೆ ಕಾಯದೆ ನಾವೇ ಹಣ ನೀಡಿದ್ದೆವು ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಬರ ಅಧ್ಯಯನ ನಡೆಸಿದರೆ, ಹೋಗಿ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಿ ತರಲಿ, ಈಗ ಸಿಎಂ 2 ಸಾವಿರ ರೂ ನೀಡುತ್ತಿರುವುದು ಸಹ ನಮ್ಮ ರಾಜ್ಯದ ಹಣವೇ. ಮೊದಲ ಹಂತದಲ್ಲಿ ಈಗ ಹಣ ನೀಡುತ್ತಿದ್ದಾರೆ. ಮೊದಲು ಬಿಜೆಪಿಯವರು ಬರದ ಅನುದಾನ ಬಿಡುಗಡೆ ಮಾಡಿಸಲಿ ಎಂದು ವಾಗ್ದಾಳಿ ನಡೆಸಿದರು.

ಅಡಕೆ ಸುಲಿಯುವ ಯಂತ್ರಕ್ಕೆ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ಮುಂದಾಗಿದ್ದಕ್ಕೆ ಬಿಜೆಪಿರವರು ಮತ್ತು ಮಾಜಿ ಸಚಿವ ಆರಗ ಜ್ಞಾನೇಂದ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಇಂಧನ ಸಚಿವ ಜಾರ್ಜ್ ರವರಿಗೆ ಪತ್ರ ಬರೆದ ನಂತರ ಮೀಟರ್ ಅಳವಡಿಕೆ ಮಾಡಲು ನಿಲ್ಲಿಸಲಾಗಿದೆ. ಅಡಕೆ ಸುಲಿಯುವ ಎರಡು ಬೆಲ್ಟ್​ನ ಯಂತ್ರಕ್ಕೆ ಉಚಿತ ವಿದ್ಯುತ್ ನೀಡುವ ಕುರಿತು ಇಂದನ ಸಚಿವರು, ಸಿಎಂ ಜೊತೆ ಮಾತನಾಡೋಣ ಎಂದು ಹೇಳಿದ್ದಾರೆ ಎಂದರು.

ಬರದ ಕುರಿತು ತಾಲೂಕುವಾರು ಸಭೆ ನಡೆಸಿ ಮಾಹಿತಿ ಸಂಗ್ರಹಿಸಿಲು ಸಿಎಂ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಲಾಗುತ್ರಿದೆ. ಸಭೆಗೆ ಶಾಸಕರು ಇರಲಿ ಇಲ್ಲದಿರಲಿ, ನೀವು ಸಭೆ ನಡೆಸಿ ಎಂದು ಹೇಳಿದ್ದಾರೆ. ಅದರಂತೆ ಸಭೆ ನಡೆಸಲಾಗುತ್ತಿದೆ. ನಿನ್ನೆ ಶಾಸಕ ಗೋಪಾಲಕೃಷ್ಣ ಬೇಳೂರು ನಮ್ಮ ಜೊತೆ ಇದ್ದರು. ಗೋಪಾಲಕೃಷ್ಣ ಅವರು ಮೊನ್ನೆಯೇ ಸಭೆ ಮುಗಿಸಿದ್ದಾರೆ. ಅದೇ ರೀತಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಸಹ ಸಭೆ ನಡೆಸಿದ್ದಾರೆ. ಅವರು ಇಂದು ಸಭೆಗೆ ಲಭ್ಯ ಇರುದಿಲ್ಲ ಎಂದಿದ್ದಾರೆ. ಸಾಗರ ತಾಲೂಕಿನಲ್ಲಿ ಕುಡಿಯುವ ನೀರು, ಮೇವು ಸಂಬಂಧಿಸಿದಂತೆ ಎಲ್ಲವನ್ನು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಎಲ್ಲವನ್ನು ಸರಿಯಾಗಿ ನಿಭಾಯಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಚಳಿಗಾಲ ಅಧಿವೇಶನದ ವೇಳೆ ಮತ್ತೆ ಪ್ರತಿಧ್ವನಿಸಲಿದೆ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು

Last Updated : Dec 1, 2023, 10:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.