ಶಿವಮೊಗ್ಗ : ಅಧಿಕಾರ ಇದ್ದಾಗ ಶರಾವತಿ ಸಂತ್ರಸ್ತರ ಪರ ನಿಲ್ಲದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಈಗ ಮಂಜುನಾಥಗೌಡರ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಶರಾವತಿ ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕ ಲೋಕೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಅಧಿಕಾರ ಇದ್ದಾಗ ಶರಾವತಿ ಸಂತ್ರಸ್ತರ ನೆರವಿಗೆ ಧಾವಿಸಲಿಲ್ಲ.
ಆದರೆ, ಈಗ ಶರಾವತಿ ಸಂತ್ರಸ್ತರ ಪರ ಹೋರಾಟ ಮಾಡುತ್ತಿರುವ ಮಂಜುನಾಥಗೌಡರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಜೆಡಿಎಸ್ ಮುಖಂಡರನ್ನು ಸೇರಿಸಿಕೊಂಡು ಕಾಂಗ್ರೆಸ್ ಮುಖಂಡ ಮಂಜುನಾಥ ಗೌಡ ಪಾದಯಾತ್ರೆ ಮಾಡಿದ್ದಾರೆ ಎಂದು ಬಾಯಿಗೆ ಬಂದಂತೆ ಸಭೆಯಲ್ಲಿ ಮಾತನಾಡಿದ್ದಾರೆ.
ಆದರೆ, ಇದೇ ಕಿಮ್ಮನೆ ಅವರು ಯಾಕೆ ಶರಾವತಿ ಸಂತ್ರಸ್ತರ ಹೋರಾಟಕ್ಕೆ ಬರುತ್ತಿಲ್ಲಾ?. ಇವರು ರೈತ ವಿರೋಧಿಗಳು ಎಂದು ಆರೋಪಿಸಿದರು.
ಶರಾವತಿ ಸಂತ್ರಸ್ತರ ಹೋರಾಟ ಸಮಿತಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಹೋರಾಟ ಮಾಡಿದೆ. ಅದಕ್ಕೆ ಜೆಡಿಎಸ್ ಮುಖಂಡ ಶ್ರೀಕಾಂತ್ ಅವರು ಸಹ ಸಾಕಷ್ಟು ಸಹಾಯ ಮಾಡಿದ್ದಾರೆ ಹಾಗೂ ಬೆಂಬಲ ಸೂಚಿಸಿದ್ದಾರೆ.
ಹಾಗಾಗಿ, ಅವರನ್ನು ಹೋರಾಟ ಸಮಿತಿ ಪಾದಯಾತ್ರೆಗೆ ಕರೆದಿತ್ತು. ಅದನ್ನ ಸಹಿಸದ ಕಿಮ್ಮನೆ ಅವರು ರೈತರ ಪರ ಹೋರಾಟ ಮಾಡುತ್ತಿರುವ ಮಂಜುನಾಥ ಗೌಡರ ವಿರುದ್ಧ ಮಾತನಾಡುತ್ತಿರುವುದು ನೋವು ತಂದಿದೆ ಎಂದರು.
ಕಿಮ್ಮನೆ ರತ್ನಾಕರ್ ಅವರು ಸಚಿವರಾಗಿದ್ದಾಗ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವಂತೆ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರು ಹೇಳಿದ್ದರು. ಇವರು ಅವರ ಮಾತಿಗೆ ಬೆಲೆ ಕೊಡದೆ, ಶರಾವತಿ ಸಂತ್ರಸ್ತರ ಸಮಸ್ಯೆಗೆ ಧ್ವನಿಯಾಗಲಿಲ್ಲ.
ಆದರೆ, ಈಗ ಹೋರಾಟ ಮಾಡಲು ಮುಂದೆ ಬಂದವರನ್ನ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಓದಿ: ಒಂಚೂರು ಗಮನಿಸಿ.. ವಾಹನ ಚಲಾಯಿಸುವಾಗ ಇನ್ಮೇಲೆ ಇಯರ್ ಫೋನ್ ಬಳಸಿದರೆ ದಂಡ..