ETV Bharat / state

ಸಹಾಯಧನದ ಪತ್ರ ನೀಡಲು ಲಂಚ; ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ - lokayukta raid

ಟ್ಯಾಕ್ಸಿ ಚಾಲಕನಿಗೆ ಸರ್ಕಾರದ ಸಹಾಯಧನದ ಪ್ರಮಾಣ ಪತ್ರ ನೀಡಲು 5 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಯನ್ನು ಲೋಕಾಯಕ್ತ ಪೊಲೀಸರು ಬಂಧಿಸಿದ್ದಾರೆ.

lokayuktha-raid-at-shivamogga
ಸಹಾಯಧನದ ಪತ್ರ ನೀಡಲು 5 ಸಾವಿರ ರೂ ಲಂಚ ಬೇಡಿಕೆ, ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
author img

By

Published : Apr 18, 2023, 10:21 PM IST

ಶಿವಮೊಗ್ಗ: ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಸರ್ಕಾರ ನೀಡಿದ ಸಹಾಯಧನದ ಬ್ಯಾಂಕ್ ಪ್ರಮಾಣ ಪತ್ರ ನೀಡಲು 5 ಸಾವಿರ ರೂ ಲಂಚಕ್ಕೆ ಬೇಡಿಕೆ‌ ಇಟ್ಟಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಅಜ್ಜಪ್ಪ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಶಿವಮೊಗ್ಗದ ಗಂಗಾಧರ್ ಎಂಬಾತ ಟ್ಯಾಕ್ಸಿ ಚಾಲಕರಾಗಿದ್ದು ಪ್ರವಾಸಿ ಟ್ಯಾಕ್ಸಿ ಯೋಜನೆಯಡಿಯಲ್ಲಿ ಕಾರ್ ಲೋನ್ ಮಂಜೂರು ಆಗಿದ್ದು, ಸರ್ಕಾರದ ವತಿಯಿಂದ 3 ಲಕ್ಷ ರೂ. ಸಹಾಯಧನ ಸಹ ಲಭ್ಯವಾಗುತ್ತದೆ. ಗಂಗಾಧರ ಅವರಿಗೆ ಬ್ಯಾಂಕ್​​ನಿಂದ ಲಭ್ಯವಾದ ಸಹಾಯಧನದ ಪ್ರಮಾಣ ಪತ್ರವನ್ನು ನೀಡಲು ಅಜ್ಜಪ್ಪ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈ‌ ಕುರಿತು ಗಂಗಾಧರ್ ಶಿವಮೊಗ್ಗದ ಲೋಕಾಯುಕ್ತ ಡಿವೈಎಸ್​​ಪಿಗೆ ದೂರು‌ ನೀಡಿದ್ದು, ಮೊಬೈಲ್ ಆಡಿಯೋ ಸಂಭಾಷಣೆಯನ್ನು ಸಹ ಒಪ್ಪಿಸಿದ್ದರು. ದೂರು ದಾಖಲಿಸಿಕೊಂಡು‌ ಲೋಕಾಯುಕ್ತ ಡಿವೈಎಸ್​ಪಿ ಉಮೇಶ್ ಈಶ್ವರ ನಾಯಕ್​ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರಂತೆ ಪ್ರಕರಣ ದಾಖಲಿಸಿಕೊಂಡು ಅಜ್ಜಯ್ಯ ತಮ್ಮ ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಕಲಬುರಗಿ ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.