ಶಿವಮೊಗ್ಗ: ಲಾಕ್ಡೌನ್ ಹಿನ್ನೆಲೆ ಯಾವುದೇ ಎಣ್ಣೆ ಅಂಗಡಿಗಳು ತೆರೆದಿಲ್ಲ. ಹೀಗಾಗಿ ಎಣ್ಣೆ ಪ್ರಿಯರು ಬಾರ್ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಗಾಜನೂರು ಗ್ರಾಮದಲ್ಲಿ ನಡೆದಿದೆ.
ಗಾಜನೂರಿನ ಸ್ನೇಹ ಬಾರ್ನ ಹಿಂಭಾಗದ ಗೋಡೆಯನ್ನು ಕೊರೆದು ಕಳ್ಳರು ಒಳ ನುಗ್ಗಿದ್ದಾರೆ. ಆದರೆ ಒಳಗೆ ಕಳ್ಳತನ ಮಾಡಲು ಆಗದೆ ವಾಪಸ್ ಬಂದಿದ್ದಾರೆ.
ಇಂದು ಬಾರ್ನ ಮಾಲೀಕರು ಬಾರ್ ಕಡೆ ಬಂದಾಗ ಹಿಂಬದಿ ಕನ್ನ ಹಾಕಿರುವುದು ತಿಳಿದು ಬಂದಿದೆ. ಸ್ಥಳಕ್ಕೆ ತುಂಗಾನಗರ ಪೊಲೀಸರು ಹಾಗೂ ಅಬಕಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.