ETV Bharat / state

ಸ್ಥಳೀಯ ಸಂಸ್ಥೆ ಚುನಾವಣೆ ರಿಸಲ್ಟ್​: ಶಿಕಾರಿಪುರದಲ್ಲಿ ಬಿಎಸ್​ವೈಗೆ ಭಾರಿ ಮುಖಭಂಗ - Kannada news

ಶಿಕಾರಿಪುರದಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು, 12 ಸ್ಥಾನ ಗೆದ್ದ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಇನ್ನು ಬಿಜೆಪಿಯು ಕೇವಲ 8 ಸ್ಥಾನ ಗೆದ್ದಿದ್ದು, ಯಡಿಯೂರಪ್ಪನವರ ತವರು ಕ್ಷೇತ್ರದಲ್ಲಿ ಕಮಲ ಮುದುಡಿದಂತಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿಕಾರಿಪುರ ಪುರಸಭೆ ಹಾಗೂ ಶಿರಾಳಕೊಪ್ಪ, ಸೊರಬ ಮತ್ತು ಹೊಸನಗರ ಪಟ್ಟಣ ಪಂಚಾಯತಿ ಫಲಿತಾಂಶ
author img

By

Published : Jun 3, 2019, 1:12 PM IST

Updated : Jun 3, 2019, 3:18 PM IST

ಶಿವಮೊಗ್ಗ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿಕಾರಿಪುರ ಪುರಸಭೆ ಹಾಗೂ ಶಿರಾಳಕೊಪ್ಪ, ಸೊರಬ ಮತ್ತು ಹೊಸನಗರ ಪಟ್ಟಣ ಪಂಚಾಯತಿ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.

ಶಿಕಾರಿಪುರದಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು, 12 ಸ್ಥಾನ ಗೆದ್ದ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಇನ್ನು ಬಿಜೆಪಿಯು ಕೇವಲ 8 ಸ್ಥಾನ ಗೆದ್ದಿದ್ದು, ಯಡಿಯೂರಪ್ಪನವರ ತವರು ಕ್ಷೇತ್ರದಲ್ಲಿ ಕಮಲ ಮುದುಡಿದಂತಾಗಿದೆ. ಹಾಗೆಯೇ ಶಿರಾಳಕೊಪ್ಪ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ 2, ಕಾಂಗ್ರೆಸ್ 7, ಜೆಡಿಎಸ್ 3 ಹಾಗೂ ಪಕ್ಷೇತರರು 5 ಸ್ಥಾನ ಗೆದ್ದಿದ್ದಾರೆ. ಹೀಗಾಗಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ. ಶಿರಾಳಕೊಪ್ಪ ಕೂಡ ಬಿಎಸ್​ವೈ ಅವರ ಶಿಕಾರಿಪುರ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತದೆ.

ಇನ್ನು ಸೊರಬ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ 6, ಕಾಂಗ್ರೆಸ್ 4, ಜೆಡಿಎಸ್ 01 ಹಾಗೂ ಪಕ್ಷೇತರರು 1 ಸ್ಥಾನ ಗೆದ್ದಿದ್ದು, ಕಮಲ ಪಕ್ಷ ಅಧಿಕಾರಕ್ಕೆ ಬರಲಿದೆ.

ಸ್ಥಳೀಯ ಸಂಸ್ಥೆ ಚುನಾವಣೆ, ಶಿಕಾರಿಪುರ ಪುರಸಭೆ ಹಾಗೂ ಶಿರಾಳಕೊಪ್ಪ, ಸೊರಬ ಮತ್ತು ಹೊಸನಗರ ಪಟ್ಟಣ ಪಂಚಾಯತಿ ಫಲಿತಾಂಶ

ಹೊಸನಗರ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ 4, ಕಾಂಗ್ರೆಸ್ 4, ಜೆಡಿಎಸ್ 03 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಮೈತ್ರಿ ಪಕ್ಷಗಳು ಅಧಿಕಾರಕ್ಕೆ ಬರಲಿವೆ. ಹಾಗೆಯೇ ಸಾಗರ ನಗರಸಭೆಯಲ್ಲಿ 16 ಸ್ಥಾನ ಬಿಜೆಪಿ ಗೆದ್ದಿದ್ದು ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಇಲ್ಲಿ ಕಾಂಗ್ರೆಸ್ 09, ಜೆಡಿಎಸ್ 01 ಹಾಗೂ ಪಕ್ಷೇತರರು 05 ಸ್ಥಾನ ಗೆದ್ದಿದ್ದಾರೆ.

ಫಲಿತಾಂಶ ಇಂತಿದೆ:

ಶಿಕಾರಿಪುರ ಪುರಸಭೆ 23 ವಾರ್ಡ್

  • ಕಾಂಗ್ರೆಸ್-12
  • ಬಿಜೆಪಿ-08
  • ಪಕ್ಷೇತರ-03

ಶಿರಾಳಕೊಪ್ಪ ಪಟ್ಟಣ ಪಂಚಾಯತಿ 17 ವಾರ್ಡ್

  • ಬಿಜೆಪಿ-02
  • ಕಾಂಗ್ರೆಸ್-07
  • ಜೆಡಿಎಸ್-03
  • ಪಕ್ಷೇತರ-05

ಸೊರಬ ಪಟ್ಟಣ ಪಂಚಾಯತಿ 12 ವಾರ್ಡ್

  • ಬಿಜೆಪಿ-06
  • ಕಾಂಗ್ರೆಸ್-04
  • ಜೆಡಿಎಸ್-01
  • ಪಕ್ಷೇತರ-01

ಹೊಸನಗರ ಪಟ್ಟಣ ಪಂಚಾಯತಿ 11 ವಾರ್ಡ್

  • ಬಿಜೆಪಿ-04
  • ಕಾಂಗ್ರೆಸ್-04
  • ಜೆಡಿಎಸ್-03

ಸಾಗರ ನಗರಸಭೆ 31 ವಾರ್ಡ್

  • ಬಿಜೆಪಿ-16
  • ಕಾಂಗ್ರೆಸ್-09

Intro:ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಯಡಿಯೂರಪ್ಪನವರಿಗೆ ಮುಖಭಂಗ. 15 ವರ್ಷಗಳ ನಂತ್ರ ಅಧಿಕಾರ ಪಡೆದ ಕಾಂಗ್ರೆಸ್Body:ಲ್ಲೆಯ‌ ಸಾಗರ ನಗರಸಭೆ ಹಾಗೂ ಸೊರಬ ಪಟ್ಟಣ ಪಂಚಾಯತಿ ಬಿಜೆಪಿ ಪಾಲು.Conclusion:ಶಿರಾಳಕೊಪ್ಪ ಪಟ್ಟಣ ಪಂಚಾಯತಿ, ಹೊಸನಗರ ಪಟ್ಟಣ ಪಂಚಾಯತಿ ಹಾಗೂ ಶಿಕಾರಿಪುರ ಪುರಸಭೆ ಮೈತ್ರಿ ಪಾಲು.
Last Updated : Jun 3, 2019, 3:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.