ETV Bharat / state

Lack of infrastructure: ಮೂಲ ಸೌಕರ್ಯಗಳಿಂದ ವಂಚಿತವಾದ ತುಂಗಾ ಹಿನ್ನೀರಿನ 'ಬೆಳಗಲ್ಲು' ಗ್ರಾಮ

ದಶಕಗಳಿಂದ ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಬೆಳಗಲ್ಲು ಗ್ರಾಮ ಕನಿಷ್ಠ ನಾಗರಿಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಕನಿಷ್ಠ ವ್ಯವಸ್ಥೆಯಾದರೂ ಕಲ್ಪಿಸುವಂತೆ ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

author img

By

Published : Jun 9, 2023, 1:30 PM IST

Lack of infrastructure in Belagallu village
ಮೂಲ ಸೌಕರ್ಯಗಳಿಂದ ವಂಚಿತವಾದ ಬೆಳಗಲ್ಲು ಗ್ರಾಮ
ಮೂಲ ಸೌಕರ್ಯ ಕಲ್ಪಿಸುವಂತೆ ಸ್ಥಳೀಯರಿಂದ ಮನವಿ

ಶಿವಮೊಗ್ಗ: ಮಾನವ ಮೂಲ ಸೌಕರ್ಯಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಹಾಗೂ ತಲೆಗೊಂದು ಸೂರು ಸೇರಿವೆ. ಆದರೆ, ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಬೆಳಗಲ್ಲು ಗ್ರಾಮ ಕನಿಷ್ಠ ನಾಗರಿಕ ಮೂಲ ಸೌಕರ್ಯಗಳಿಂದ ದಶಕಗಳಿಂದ ವಂಚಿತವಾಗಿದೆ.

ಬೆಳಗಲ್ಲು ಗ್ರಾಮ ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುತ್ತದೆ. ಈ ಗ್ರಾಮದಲ್ಲಿರುವುದು ಕೇವಲ 20 ಮನೆಗಳು. ಗ್ರಾಮಕ್ಕೆ ಹೋಗಲು ಶಿವಮೊಗ್ಗದಿಂದ ಶೃಂಗೇರಿ ಮಾರ್ಗದಲ್ಲಿ ಸಿಗುವ ಉಂಬ್ಳೆಬೈಲು ಗ್ರಾಮದಿಂದ ಐದಾರು ಕಿ.ಮೀ ದೂರ ಸಾಗಿದರೆ ಕೊರಲಕೊಪ್ಪ ಗ್ರಾಮ ಸಿಗುತ್ತದೆ. ಇಲ್ಲಿನ ಸರ್ಕಾರಿ ಶಾಲೆಯ ಪಕ್ಕದ ಕಾಡಿನ ರಸ್ತೆಯಲ್ಲಿ 5 ಕಿ.ಮೀ ದೂರ ಸಾಗಿದರೆ ಬೆಳಗಲ್ಲು ಗ್ರಾಮ ಕಾಣಿಸುತ್ತದೆ. ಈ ಗ್ರಾಮಕ್ಕೆ ಸಾಗಲು ರಸ್ತೆಯೇ ಇಲ್ಲ. ಇದು ಅಭಯಾರಣ್ಯ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಗ್ರಾಮಕ್ಕೆ ರಸ್ತೆಯನ್ನು ಮಾಡಲು ಅರಣ್ಯ ಇಲಾಖೆ ಬಿಟ್ಟಿಲ್ಲ ಎಂದು ತಳಿದು ಬಂದಿದೆ.

ಮೂಲ ಸೌಕರ್ಯ ವಂಚಿತ ಕುಗ್ರಾಮ: ಬೆಳಗಲ್ಲು ಗ್ರಾಮದಲ್ಲಿ 20 ಮನೆಗಳಿದ್ದು, ಇವರು ಕಳೆದ ಮೂರು ತಲೆಮಾರುಗಳಿಂದ ಇಲ್ಲಿ ವಾಸವಾಗಿದ್ದಾರೆ. ಇದು ತುಂಗಾ ಅಣೆಕಟ್ಟೆಯ ಹಿನ್ನೀರಿನ ಪ್ರದೇಶ. ಹಿಂದೆ ಈ ಗ್ರಾಮದವರು ನದಿ ದಂಡೆಯ ಮೇಲೆ ಕೃಷಿ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ತುಂಗಾ ಮೇಲ್ದಂಡೆ ಯೋಜನೆಯಿಂದ ಕೃಷಿ ಭೂಮಿಯನ್ನು ಕಳೆದು‌ಕೊಂಡರು. ಬಳಿಕ ಹಿನ್ನೀರಿನಲ್ಲಿ ನೀರು ನಿಲ್ಲುವ ಪ್ರಮಾಣ ಹೆಚ್ವಾದ ಕಾರಣ ಗ್ರಾಮಸ್ಥರು ಹಾಲಿ ಇರುವ ಜಾಗದಲ್ಲಿ ಬಂದು ನೆಲೆಸಿದ್ದಾರೆ. ಕಳೆದ ಮೂರು ತಲೆಮಾರುಗಳಿಂದ ಇಲ್ಲಿಯೇ ನೆಲೆಸಿರುವ ಇವರಿಗೆ ಶಾಶ್ವತ ನೆಲೆ ಕಲ್ಪಿಸುವಲ್ಲಿ ರಾಜ್ಯವನ್ನಾಳಿದ ಎಲ್ಲ ಸರ್ಕಾರಗಳು ವಿಫಲವಾಗಿವೆ.

ಹುಲ್ಲಿನ ಗುಡಿಸಲಲ್ಲಿ ವಾಸ: ಗ್ರಾಮದವರು ಇನ್ನೂ ಹುಲ್ಲಿನ ಗುಡಿಸಲಲ್ಲಿ ವಾಸವಾಗಿದ್ದಾರೆ ಎಂದರೆ ಇವರ ಬಡತನ ಹಾಗೂ ಎಲ್ಲಾರಿಗೂ ಸೂರು ಎನ್ನುವ ಸರ್ಕಾರದ ಘೋಷಣೆಗಳು ಕೇವಲ ಜಾಹೀರಾತಿನಲ್ಲಿ ಮಾತ್ರ ಎಂದು ಸಾಬೀತಾಗಿದೆ. ಈ ಗ್ರಾಮಸ್ಥರು ಇರುವ ಕೃಷಿ ಭೂಮಿ ಕಳೆದುಕೊಂಡು ಬೇರೆ ಕಡೆ ಪ್ರತಿ ದಿನ ನಡೆದುಕೊಂಡು ಹೋಗಿ ಕೊಲಿ ಕೆಲಸ ಮಾಡಬೇಕಿದೆ. ಕೆಲವರು ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಸಾಲ ಪಡೆದು ಮನೆಗಳಿಗೆ ಹಂಚನ್ನು ಹಾಕಿಸಿಕೊಂಡಿದ್ದಾರೆ. ಈ ಸಾಲವನ್ನು ತೀರಿಸಲು ಇವರು ಕಷ್ಟಪಡಬೇಕಿದೆ. ಇವರು ಇರುವ ಮನೆಗಳಿಗೆ ಪಟ್ಟ, ರಸ್ತೆ, ಕುಡಿಯುವ ನೀರು ಹಾಗೂ ಶೌಚಾಲಯಗಳಿಲ್ಲ.

ಕಿಮ್ಮನೆ ಅವರಿಂದ ಬೆಳಕು ಕಂಡ ಬೆಳಗಲ್ಲು: ಬೆಳಗಲ್ಲು ಗ್ರಾಮ ಶಿವಮೊಗ್ಗ ತಾಲೂಕು ಆಡಳಿತಕ್ಕೆ ಒಳಪಟ್ಟರು ಇದು ತೀರ್ಥಹಳ್ಳಿ ವಿಧಾನಸಭ ಕ್ಷೇತ್ರಕ್ಕೆ ಒಳಪಡುತ್ತದೆ. ಇದರಿಂದ ಕಳೆದ ಬಾರಿ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವರು ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನು ಒದಗಿಸಿಕೊಟ್ಟಿದ್ದಾರೆ. ಇದರಿಂದ ಮನೆಗಳಿಗೆ ಬೆಳಕು ಬಂದಿದೆ.

ವಿದ್ಯುತ್ ಬಂದ ಕಾರಣ ಉಂಬ್ಳೆಬೈಲು ಗ್ರಾಮ ಪಂಚಾಯತಿರವರು ಬೋರ್ ಕೊರೆಯಿಸಿ ಒಂದು ವಾರ ಕುಡಿಯುವ ನೀರು ಒದಗಿಸಿದರು. ನಂತರ ಆ ಮೋಟಾರನ್ನು ಕಿತ್ತುಕೊಂಡು ಹೋಗಿ 8 ವರ್ಷವಾದರೂ ಮೋಟಾರ್ ವಾಪಸ್ ಬಂದಿಲ್ಲ. ಇದರಿಂದ ಗ್ರಾಮಸ್ಥರು, ತುಂಗಾ ಹಿನ್ನೀರನ್ನು ಕುಡಿಸಲು ಬಳಸುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ನೀರು ಕೆಸರಿನಿಂದ ಕೂಡಿರುವುದರಿಂದ ಕುಡಿಯಲು ಯೋಗ್ಯವಾಗಿಲ್ಲ. ಅದೇ ನೀರನ್ನು ಎರಡು ದಿನ ಹಾಗೇಯೇ ಇಟ್ಟು ನಂತರ ಬಳಸುವ ಅನಿವಾರ್ಯತೆ ಇರುತ್ತದೆ.

ಶಾಲೆ ಬಲು ದೂರ: ಶಾಲೆಗೆ ಬೆಳಗಲ್ಲು ಗ್ರಾಮದಿಂದ ಕೊರಲಕೊಪ್ಪ ಗ್ರಾಮಕ್ಕೆ ಬರಬೇಕು. ಕಾಡಿನಲ್ಲಿ ಸರಿಯಾದ ರಸ್ತೆ ಇಲ್ಲದ ಕಾರಣ ಮಕ್ಕಳು ಪ್ರತಿ ನಿತ್ಯ ನಡೆದುಕೊಂಡೆ ಹೋಗಬೇಕಾಗಿದೆ. ಇದರಿಂದ ಶಾಲೆಗೆ ಹೋಗಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಯುವಕರು ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲ. ಗ್ರಾಮದಲ್ಲಿ ಶ್ವೇತ ಎಂಬ ಏಕೈಕ ಯುವತಿ ಬಿಎಸ್​ಸಿ ಪದವಿ ಪಡೆದುಕೊಂಡಿದ್ದಾಳೆ. ಉಳಿದಂತೆ ಐದಾರು ಮಂದಿ ಪಿಯುಸಿ ಮುಗಿಸಿದ್ದಾರೆ. ಉಳಿದಂತೆ ಎಲ್ಲರು ಹೈಸ್ಕೂಲ್ ಕೊನೆ.

ಹಿನ್ನೀರಿನ ಪ್ರದೇಶವಾದ ಕಾರಣ ಇಲ್ಲಿಗೆ ಆನೆ, ಹುಲಿ, ಚಿರತೆ ಸೇರಿದಂತೆ ಅನೇಕ ಪ್ರಾಣಿಗಳು ಬರುತ್ತವೆ. ರಾತ್ರಿಯಾದರೆ ಮನೆಯಲ್ಲಿ ಜೀವ ಭಯದಲ್ಲಿ ಬದುಕುವ ಸ್ಥಿತಿ ಇದೆ. ಪಂಚಾಯತಿಯಿಂದ ಐದಾರು ಮನೆಗಳಿಗೆ ಶೌಚಾಲಯ ನೀಡಿದ್ದಾರೆ. ಉಳಿದವರು ಬೆಳಕಾಗುವ ಒಳಗೆ ಇಲ್ಲವೆ ಕತ್ತಲಾದ ಮೇಲೆ ಶೌಚಾಲಯಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ.

ಅಳಲು ತೋಡಿಕೊಂಡ ಗ್ರಾಮಸ್ಥರು: "ತುಂಗಾ ಅಣೆಕಟ್ಟೆಯ ಹಿನ್ನೀರಿ ಪ್ರದೇಶದಲ್ಲಿ ಇರುವ ಬೆಳಗಲ್ಲು ಗ್ರಾಮ ಅಣೆಕಟ್ಟೆ ಎತ್ತರಿಸಿದಾಗ ಮುಳುಗಡೆಯಾಗಿದೆ. ನಂತರ ಗ್ರಾಮಸ್ಥರು ಹಾಲಿ‌ ಇರುವ ಜಾಗದಲ್ಲಿ ಬಂದು ನೆಲೆಸಿದ್ದಾರೆ.‌ ಮುಳುಗಡೆಯಿಂದ ತಮ್ಮ ಜಮೀನುಗಳನ್ನು ಕಳೆದು‌ಕೊಂಡು, ಈಗ ಜೀವನ ನಿರ್ವಹಣೆಗೆ ಕೂಲಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಇಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆ ಇದೆ. ಮೂರು ತಲೆಮಾರುಗಳಿಂದ‌ ನಾವು ಇಲ್ಲಿಯೇ ನೆಲೆಸಿದ್ದೇೆವೆ. ನಮಗೆ ರಸ್ತೆ, ನೀರು, ಶಾಲೆ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ.‌ ಹಿಂದೆ ಮುಳುಗಡೆಯಾದಾಗ ಕೇವಲ ಬೆಳೆ ಪರಿಹಾರವನ್ನು ಮಾತ್ರ ನೀಡಲಾಗಿತ್ತು. ಅದನ್ನು ಬಿಟ್ಟರೆ ಬೇರೆ ಯಾವುದೇ ಪರಿಹಾರ ನಮಗೆ ಸಿಕ್ಕಿಲ್ಲ. ತುಂಗಾ ಮೇಲ್ದಂಡೆ ಅಧಿಕಾರಿಗಳು ನಮಗೆ ಬೇರೆ ಕಡೆ 10 ಎಕರೆ ಜಾಗವನ್ನು ಕಾಡಿನ‌ ಮಧ್ಯದಲ್ಲಿ ಕೊಡುವುದಾಗಿ ಹೇಳಿದರು. ಆದರೆ ಅಲ್ಲಿ ಕೂಡ ಯಾವುದೇ ಮೂಲ ಸೌಕರ್ಯ ಇಲ್ಲದ ಕಾರಣ ನಾವು ಇಲ್ಲಿಯೇ ಉಳಿದುಕೊಂಡಿದ್ದೇವೆ" ಎನ್ನುತ್ತಾರೆ ಗ್ರಾಮದ ಹಿರಿಯರಾದ ಬಸವರಾಜಪ್ಪ.

"ನಮಗೆ ಸರಿಯಾದ ಮನೆ ಇಲ್ಲ. ಮನೆಗೆ ಪಟ್ಟ ನೀಡಬೇಕಿದೆ. ನಮ್ಮ ಗ್ರಾಮದಲ್ಲಿ ಶಾಲೆ ಇಲ್ಲದ ಕಾರಣ ನಮ್ಮ ಮಕ್ಕಳು ಪ್ರತಿ ದಿನ ಸುಮಾರು 4 ಕಿ.ಮಿ ದೂರದ ಕೊರನಕೊಪ್ಪ ಗ್ರಾಮಕ್ಕೆ ನಡೆದುಕೊಂಡು ಹೋಗಬೇಕು. ಇದರಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಸರಿ‌ ಇಲ್ಲದ ಕಾರಣ ಮಕ್ಕಳು ನಡೆದುಕೊಂಡು ಹೋಗುವುದು ಕಷ್ಟಕರವಾಗಿದೆ.

ಇನ್ನು ಹೈಸ್ಕೂಲ್​ಗೆ ಮುತ್ತಿನಕೊಪ್ಪಕ್ಕೆ ಹೋಗಬೇಕಿದೆ. ಒಬ್ಬರಿಗೆ ಹುಷಾರಿಲ್ಲ ಎಂದ್ರೆ, ಮುಖ್ಯ ರಸ್ತೆಗೆ ಹೋಗಬೇಕು. ಅಲ್ಲಿಂದ ಯಾವುದಾದರೂ ವಾಹನ ಹಿಡಿದು 8 ಕಿ. ಮೀ ದೂರದ ಉಂಬ್ಳೆಬೈಲು ಗ್ರಾಮಕ್ಕೆ ಹೋಗಬೇಕು. ಕರೆಂಟ್​ ಇದೆ. ಆದರೆ ಕುಡಿಯುವ ನೀರಿಲ್ಲ. ಕುಡಿಯುವ ನೀರಿಗೆ ಹೊಳೆಗೆ ಹೋಗಬೇಕು. ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ರಾಜಕಾರಣಿಗಳು ಬಂದು ಕೇವಲ ಆಶ್ವಾಸನೆ ನೀಡಿ ಹೋಗುತ್ತಾರೆಯೇ ಹೊರತು ಮತ್ತೆ ತಿರುಗಿ ನೋಡಲ್ಲ" ಎಂದು ಗ್ರಾಮದ ಲೀಲಾವತಿ ಅವರು ಅಳಲು ತೋಡಿಕೊಂಡಿದ್ದಾರೆ.

ಗ್ರಾಮದ ಮೊದಲ ಪದವೀಧರೆ: "ಬೆಳಗಲ್ಲು ಗ್ರಾಮದಿಂದ ಕೊರನಕೊಪ್ಪಕ್ಕೆ ನಡೆದುಕೊಂಡೆ ಹೋಗಬೇಕು. ರಸ್ತೆ ಸರಿ ಇಲ್ಲ. ಇದರಿಂದ ಮಕ್ಕಳು ಶಾಲೆಗೆ ಹೋಗಲು ಇಷ್ಟಪಡಲ್ಲ. ನಮಗೆ ಮೂಲ ಸೌಕರ್ಯಗಳಿಲ್ಲ. ರಸ್ತೆ, ಕುಡಿಯುವ ನೀರು, ಶೌಚಾಲಯಗಳಿಲ್ಲ. ನಾನು ಓದಲು ಪ್ರತಿ ನಿತ್ಯ ಸುಮಾರು 50 ಕಿ.ಮೀ ದೂರದ ಕಾಲೇಜಿಗೆ ಹೋಗಿ ಬಿಎಸ್ಸಿ ಪದವಿ ಮುಗಿಸಿದ್ದೇನೆ. ನಮ್ಮ ಜನತೆಗೆ ಮೂಲ ಸೌಕರ್ಯಬೇಕು ಎಂದು ಅನೇಕ ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ" ಎಂದು ಗ್ರಾಮದ ಮೊದಲ ಪದವೀಧರೆ ಶ್ವೇತ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

"ನಮ್ಮ ಗ್ರಾಮಕ್ಕೆ ಯಾವುದೇ ಮೂಲ ಸೌಕರ್ಯಗಳಿಲ್ಲ. 1992ರ ತನಕ ಉಂಬ್ಳೆಬೈಲು ಗ್ರಾಮ ಪಂಚಾಯತಿರವರು ನಮ್ಮ ಮನೆಯ ಮೇಲ್ಚಾವಣಿ ಕಂದಾಯ ಪಡೆಯುತ್ತಿದ್ದರು. ಈಗ ಅದು ಪಡೆಯುತ್ತಿಲ್ಲ. ನಮ್ಮ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು ಎಂದು ಸರ್ವೇಯನ್ನು ಸಹ ಮಾಡಲು ಪ್ರಾರಂಭಿಸಿದರು. ಅದನ್ನು ಮಾಡಲಿಲ್ಲ ಎನ್ನುತ್ತಾರೆ ಗ್ರಾಮದ ಯಲ್ಲಪ್ಪ ಅವರು.

ಶಾಶ್ವತ ಯೋಜನೆ ರೂಪಿಸಬೇಕು: ಬೆಳಗಲ್ಲು ಗ್ರಾಮವನ್ನು ಶಾಶ್ವತವಾದ‌ ಕಂದಾಯ ಗ್ರಾಮವನ್ನಾಗಿ ಮಾಡಬೇಕು. ಗ್ರಾಮಸ್ಥರಿಗೆಲ್ಲ ಪಟ್ಟ ಕೊಡಬೇಕು. ಮನೆ ನಿರ್ಮಾಣ ಮಾಡಿ‌ಕೊಡಬೇಕು. ಜಿಲ್ಲಾಧಿಕಾರಿಗಳು ಶಾಶ್ವತ ಯೋಜನೆಯನ್ನು ರೂಪಿಸಬೇಕು. 'ಜಿಲ್ಲಾಧಿಕಾರಿಗಳ‌ ನಡೆ ಗ್ರಾಮದ ಕಡೆ' ಕಾರ್ಯಕ್ರಮಕ್ಕೆ ಬಂದಾಗ ಗ್ರಾಮದ ಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿದವರು ಇನ್ನೂ ಇತ್ತ ಕಡೆ ತಲೆ ಹಾಕಿಲ್ಲ. ಸ್ಥಳೀಯ‌ ಶಾಸಕರಾದ ಆರಗ ಜ್ಞಾನೇಂದ್ರ ಅವರು ಇತ್ತ ಗಮನ ಹರಿಸಬೇಕು. ಹಿಂದೆ ಗೃಹ ಸಚಿವರಾಗಿದ್ದಾಗ ಏನೂ ಮಾಡದ ಇವರು ಈಗಲಾದರು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು. ಇನ್ನೂ ಸಂಸದರು ಎರಡು ಭಾರಿ ಗೆದ್ದರೂ ಸಹ ಈ ಗ್ರಾಮವನ್ನೇ ಅವರು ನೋಡಿಲ್ಲ ಎನ್ನುತ್ತಾರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ದುಗ್ಗಪ್ಪ ಗೌಡ.

ಇದನ್ನೂ ಓದಿ: ದೀಪದ ಕೆಳಗೆ ಕತ್ತಲು..! ಅರ್ಧ ಶತಮಾನದ ಬಳಿಕ ಶರಾವತಿ ಸಂತ್ರಸ್ತರಿಗೆ ಒಲಿದ ವಿದ್ಯುತ್ ಭಾಗ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.