ETV Bharat / state

ರಸ್ತೆ ಕಾಮಗಾರಿ ಮುಗಿಸದ ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡ ಕುಮಾರ ಬಂಗಾರಪ್ಪ - ರಸ್ತೆ ಕಾಮಗಾರಿ ಮುಗಿಸದ ಗುತ್ತಿಗೆದಾರನಿಗೆ ತರಾಟೆ

ಸೊರಬದ ಮುಖ್ಯ ರಸ್ತೆ ಕಾಮಗಾರಿ ಮುಗಿಸದ ಗುತ್ತಿಗೆದಾರರನ್ನು ಸೊರಬ ಶಾಸಕ ಕುಮಾರ ಬಂಗಾರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.

kumara-bangarappa-slams-contractor-at-shivamogga
ರಸ್ತೆ ಕಾಮಗಾರಿ ಮುಗಿಸದ ಗುತ್ತಿಗೆದಾರನ ತರಾಟೆಗೆ ತೆಗೆದುಕೊಂಡ ಕುಮಾರ ಬಂಗಾರಪ್ಪ
author img

By

Published : Nov 7, 2022, 9:51 PM IST

ಶಿವಮೊಗ್ಗ : ರಸ್ತೆ ಕಾಮಗಾರಿ ಮುಗಿಸದ ಗುತ್ತಿಗೆದಾರರನ್ನು ಸೊರಬ ಶಾಸಕ ಕುಮಾರ ಬಂಗಾರಪ್ಪ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸೊರಬದ ಮುಖ್ಯ ರಸ್ತೆಯ ಕಾಮಗಾರಿಯು ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇಂದು ಕಾಮಗಾರಿ ಪರಿಶೀಲನೆಗೆ ಆಗಮಿಸಿದ ಶಾಸಕ ಕುಮಾರ ಬಂಗಾರಪ್ಪ ಗುತ್ತಿಗೆದಾರ ನಾಗರಾಜ್ ವಿರುದ್ದ ಗರಂ ಆದರು.

ನನ್ನ ಲೈಫ್​​ ನಲ್ಲಿ‌ ನಿಮಗೆ ಕೆಲಸ ಕೊಡಬಾರದು ಎಂದು ನಿರ್ಧರಿಸಿದ್ದೇನೆ. ನಿಮ್ಮ ಫ್ಯಾಮಿಲಿ ನೋಡಿ ನಿಮಗೆ ಕೆಲಸ ನೀಡಿದ್ದೆ. ಆದರೆ, ನೀವು ನಿಮ್ಮ ಕೆಲಸವನ್ನು ಮಾಡದೇ ಹಾಗೆ ಕುಳಿತು ಕೊಂಡಿದ್ದೀರಿ. ಕಳೆದ ಮೂರು ವರ್ಷಗಳಿಂದ ಕಾಮಗಾರಿ ಮುಗಿಸೋಕೆ ಆಗಿಲ್ವಾ. ಕೆಲಸ ಮಾಡದೇ ಕಥೆ ಹೇಳಿಕೊಂಡು ಬಂದಿದ್ದೀರಿ ಎಂದು ಗುತ್ತಿಗೆದಾರನ ವಿರುದ್ಧ ಹರಿಹಾಯ್ದರು.

ರಸ್ತೆ ಕಾಮಗಾರಿ ಮುಗಿಸದ ಗುತ್ತಿಗೆದಾರನ ತರಾಟೆಗೆ ತೆಗೆದುಕೊಂಡ ಕುಮಾರ ಬಂಗಾರಪ್ಪ

ಇನ್ನು ನೀವು ಕಾಮಗಾರಿ ವಿಳಂಬ ಮಾಡುತ್ತಿರುವುದರಿಂದ ಸೊರಬ ನಗರದ ಜನತೆಗೆ ಸಂಚಾರ ಮಾಡಲು ಕಷ್ಟವಾಗಿದೆ. ಅಲ್ಲದೇ ವ್ಯಾಪಾರಸ್ಥರು ಪರದಾಡುವಂತಾಗಿದೆ. ಬೇಗನೆ ಕಾಮಗಾರಿ ಮುಗಿಸಬೇಕು ಎಂದು ಗುತ್ತಿಗೆದಾರನಿಗೆ ತಾಕೀತು ಮಾಡಿದರು.

ಇದನ್ನೂ ಓದಿ :ಶಿವಮೊಗ್ಗ: ವಿಚಾರಣೆ ವೇಳೆ ಸಹೋದರರಿಂದ ಪೊಲೀಸರ ಮೇಲೆ ಹಲ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.