ಶಿವಮೊಗ್ಗ: ಇಲ್ಲಿನ ಮೆಡಿಕಲ್ ಕಾಲೇಜು ನಿರ್ದೇಶಕ ಡಾ. ಹೆಚ್ ಲೇಪಾಕ್ಷಿ ಅವರನ್ನು ಅಯೋಗ್ಯ ನನ್__ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ನಿಂದಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಸಚಿವ ಈಶ್ವರಪ್ಪ ಕರೆ ಮಾಡಿದ್ದಾರೆ. ರಾಘವೇಂದ್ರ ಜೊತೆ ಸಿಮ್ಸ್ ನಿರ್ದೇಶಕ ಡಾ.ಲೇಪಾಕ್ಷಿ ಅವರ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಗರಂ ಆಗಿ ಮಾತನಾಡಿದ್ದಾರೆ.
ಅವನ ಮುಖ ನೋಡಲು ನಂಗೆ ಇಷ್ಟವಿಲ್ಲ. ಮೊದಲು ಲೇಪಾಕ್ಷಿಯನ್ನು ಕಿತ್ತು ಹಾಕಿ, ಆಮೇಲೆ ನಾನು ಸಿಮ್ಸ್ಗೆ ನಿನ್ನೊಂದಿಗೆ ಬರುತ್ತೇನೆ. ಇಲ್ಲದಿದ್ದರೆ ನೀನೊಬ್ಬನೇ ಹೋಗು ಎಂದು ಸಂಸದ ರಾಘವೇಂದ್ರ ಅವರಿಗೆ ಮೊಬೈಲ್‌ನಲ್ಲಿಯೇ ಹೇಳಿರೋದು ವಿಡಿಯೋದಲ್ಲಿದೆ.