ETV Bharat / state

ಸಚಿವರು ನ್ಯಾಯಾಲಯಕ್ಕೆ ಹೋಗಿದ್ದು ಯಾಕೆಂದು ಗೊತ್ತಿಲ್ಲ; ಕೆ.ಎಸ್. ಈಶ್ವರಪ್ಪ

ಜಾರಕಿಹೊಳಿ ಪ್ರಕರಣದಲ್ಲಿ ಮಾಧ್ಯಮದಲ್ಲಿ ಬಂದ ಅಶ್ಲೀಲ ದೃಶ್ಯಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ದೃಷ್ಟಿಯಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ks-eshwrappa
ಕೆ.ಎಸ್ ಈಶ್ವರಪ್ಪ
author img

By

Published : Mar 6, 2021, 10:41 PM IST

ಶಿವಮೊಗ್ಗ: ಸಚಿವರು ಕೋರ್ಟ್​​ಗೆ ಯಾವ ಯಾವ ಕಾರಣಕ್ಕೆ ಅರ್ಜಿ ಹಾಕಿದ್ದಾರೋ ನನಗೆ ತಿಳಿದಿಲ್ಲ, ನೀವು ಅವರನ್ನೇ ಕೇಳಬೇಕು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜಾರಕಿಹೊಳಿ ಪ್ರಕರಣದಲ್ಲಿ ಮಾಧ್ಯಮದಲ್ಲಿ ಬಂದ ಅಶ್ಲೀಲ ದೃಶ್ಯಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬ ದೃಷ್ಟಿಯಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದೇನೆ ಎಂದರು.

ಭದ್ರಾವತಿ ಘಟನೆ ಕುರಿತು ಪ್ರತಿಕ್ರಿಯಿಸಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡ್ತಾರೆ, ಆದರೆ ಚುನಾವಣೆ ಮುಗಿದ ಮೇಲೆ ಬಡಿದಾಟ ಮಾಡಿಕೊಂಡಿಲ್ಲ. ಚುನಾವಣೆ ಮುಗಿದ ಮೇಲೆ ಎಲ್ಲರೂ ಅಣ್ಣ ತಮ್ಮಂದಿರ ರೀತಿ ಇದ್ದೇವೆ. ಕಬಡ್ಡಿ ಪಂದ್ಯಾವಳಿಯಲ್ಲಿ ಜೈ ಶ್ರೀರಾಮ, ಭಾರತ ಮಾತಾಕೀ ಜೈ ಅಂತಾ ಕೂಗಿದ್ದಕ್ಕೆ ಹಲ್ಲೆ ಆಗಿದೆ ಅಂತ ಕೇಳಿದ್ದೇನೆ‌. ಈ ಪ್ರಕರಣವನ್ನು ಇಲ್ಲಿಗೆ ಮುಗಿಸುವುದು ಸೂಕ್ತ. ಭದ್ರಾವತಿಯನ್ನು ಎಲ್ಲರು ಸೇರಿ ಯಥಾಸ್ಥಿತಿಗೆ ತರಬೇಕು ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕೋರ್ಟ್ ಮೆಟ್ಟಿಲೇರಿದ ಸಚಿವರ ಕುರಿತು ಈಶ್ವರಪ್ಪ ಪ್ರತಿಕ್ರಿಯೆ

ಶಿವಮೊಗ್ಗ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಕೋಷ್ಠ ವತಿಯಿಂದ ನಡೆದ ಜಿಲ್ಲಾ ಕಾರ್ಯಾಗಾರವನ್ನು ಸಚಿವರು ಇದೇ ಸಮಯದಲ್ಲಿ ಉದ್ಘಾಟಿಸಿದರು. ಸಾಮಾಜಿಕ ಜಾಲತಾಣದ ಬಗ್ಗೆ ವಿಶ್ವದ ಗಮನ ಸೆಳೆದವರು ನರೇಂದ್ರ ಮೋದಿಯವರು. ಹಾಗಾಗಿ ಪ್ರತಿ ಬೂತ್ ಮಟ್ಟದಲ್ಲಿಯೂ ನಮ್ಮ ಕಾರ್ಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಲುಪಿಸುವ ಹಾಗೂ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕಿದೆ ಎಂದರು.

ಇದಲ್ಲದೆ ಜಿಲ್ಲಾ ಪಂಚಾಯಿತಿಯ ಎಲ್ಲ ಸದಸ್ಯರಿಗೆ ಖಾಸಗಿ ಹೋಟೆಲ್​ನಲ್ಲಿ ಸನ್ಮಾನ ಮಾಡಿದರು. ನಗರದ ಸಾಯಿ ಇಂಟರ್​ನ್ಯಾಶನಲ್ ಹೋಟೆಲ್​​ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಚಿವರು ಜಿಲ್ಲೆಯ 31 ಸದಸ್ಯರಿಗೆ ಸನ್ಮಾನಿಸಿದರು.

ಇದನ್ನೂ ಓದಿ: ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಅಡಕೆ ಬೆಳೆ ಸೇರಿಸುವಂತೆ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.