ETV Bharat / state

ಶಿವಮೊಗ್ಗದ ರಾಗಿಗುಡ್ಡದಲ್ಲಿ ಈಶ್ವರಪ್ಪ ಕನಸಿನ ಯೋಜನೆ: ಸ್ಥಳೀಯ ಅರ್ಚಕರಿಂದಲೇ ವಿರೋಧವೇಕೆ?

ಶಿವಮೊಗ್ಗದ ರಾಗಿಗುಡ್ಡದಲ್ಲಿ 74 ಅಡಿ ಎತ್ತರದ ಈಶ್ವರ ಲಿಂಗ ದೇವಾಲಯ ಜೊತೆಗೆ 12 ಜ್ಯೋತಿರ್ಲಿಂಗಗಳ ನಿರ್ಮಾಣದ ಯೋಜನೆಗೆ ಕೆ.ಎಸ್​.ಈಶ್ವರಪ್ಪ ಮುಂದಾಗಿದ್ದಾರೆ. ಆದರೆ, ಈಗಿರುವ ವೆಂಕಟರಮಣ ದೇವಸ್ಥಾನದ ಮೂಲ ರೂಪಕ್ಕೆ ಹೊಸ ಯೋಜನೆಯಿಂದ ಧಕ್ಕೆ ಉಂಟಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ.

ks-eshwarappas-dream-project-in-ragigudda-was-opposed-by-local-priests
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈಶ್ವರಪ್ಪನವರ ಕನಸಿನ ಯೋಜನೆ: ಸ್ಥಳೀಯ ಅರ್ಚಕರಿಂದಲೇ ವಿರೋಧವೇಕೆ?
author img

By

Published : Jul 21, 2022, 3:37 PM IST

ಶಿವಮೊಗ್ಗ: ಶಿವಮೊಗ್ಗ ನಗರದ ಹೊರವಲಯ ಹಾಗೂ ಅತಿ ಎತ್ತರದ ಪ್ರದೇಶವಾಗಿರುವ ರಾಗಿಗುಡ್ಡದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರ ಕನಸಿನ ಯೋಜನೆ ಹಾಗೂ ಸುಮಾರು 11 ಕೋಟಿ ರೂ. ವೆಚ್ಚದ ಉದ್ದೇಶಿಸಿ ಯೋಜನೆಗೆ ವಿರೋಧ ವ್ಯಕ್ತವಾಗಿದೆ.

ರಾಗಿಗುಡ್ಡದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಹಾಗೂ ರಾಜ್ಯದ ಜನರ ಗಮನ ಸೆಳೆಯುವ ಉದ್ದೇಶದಿಂದ ಸುಮಾರು 74 ಅಡಿ ಎತ್ತರದ ಈಶ್ವರ ಲಿಂಗ ದೇವಾಲಯ ಜೊತೆಗೆ 12 ಜ್ಯೋತಿರ್ಲಿಂಗಗಳ ನಿರ್ಮಾಣದ ಕಾರ್ಯವನ್ನು ಮಹಾನಗರ ಪಾಲಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಶಿವಮೊಗ್ಗ ಶಾಸಕರಾದ ಈಶ್ವರಪ್ಪ ಹಾಕಿಕೊಂಡಿದ್ದಾರೆ. ಆದರೆ, ಇದಕ್ಕೆ ಸ್ಥಳೀಯರಿಂದಲೇ ಆಕ್ಷೇಪ ಕೇಳಿ ಬಂದಿದೆ.

ks-eshwarappas-dream-project-in-ragigudda-was-opposed-by-local-priests
74 ಅಡಿ ಎತ್ತರದ ಈಶ್ವರ ಲಿಂಗ ದೇವಾಲಯದ ನೀಲನಕ್ಷೆ

ಈ ಯೋಜನೆ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಜೊತೆಗೆ ಕೆ.ಎಸ್.ಈಶ್ವರಪ್ಪ ಸ್ಥಳ ಸರ್ವೇಗೆಂದು ತೆರಳಿದ್ದರು. ಈ ವೇಳೆ, ರಾಗಿಗುಡ್ಡ ಅಭಿವೃದ್ಧಿ ಕಾರ್ಯಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ಇಲ್ಲಿ ಹಲವಾರು ವರ್ಷಗಳಿಂದ ಅರ್ಚಕ ವೃತ್ತಿ ಮಾಡಿಕೊಂಡು ಬಂದಿರುವ ಅರ್ಚಕರ ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ.

ಒಕ್ಕಲೆಬ್ಬಿಸುವ ಭೀತಿ: ರಾಗಿಗುಡ್ಡದಲ್ಲಿ ಈಗಾಗಲೇ ಇವರು ಪುರಾತನ ದೇವಾಲಯವನ್ನು ಯಾವುದೇ ಕಾರಣಕ್ಕೂ ಕೆಡವಬಾರದು. ಜೊತೆಗೆ ತಮ್ಮನ್ನು ಇಲ್ಲಿಂದ ಜಾಗ ಖಾಲಿ ಮಾಡಿಸಬಾರದು ಎಂದು ಅರ್ಚಕರ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅಲ್ಲದೇ, ಇಲ್ಲಿನ ಸುಮಾರು 2 ಎಕರೆ ದೇವಾಲಯದ ಜಾಗದ ವಿಚಾರ ನ್ಯಾಯಾಲಯದಲ್ಲಿದೆ. ಹೀಗಾಗಿ ಹೊಸ ಯೋಜನೆ ಕೈಬಿಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅರ್ಚಕರ ಕುಟುಂಬ ಎಚ್ಚರಿಕೆ ನೀಡಿದೆ.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಈಶ್ವರಪ್ಪನವರ ಕನಸಿನ ಯೋಜನೆ: ಸ್ಥಳೀಯ ಅರ್ಚಕರಿಂದಲೇ ವಿರೋಧವೇಕೆ?

ಪರ್ಯಾಯ ವ್ಯವಸ್ಥೆಯ ಭರವಸೆ: ಈಗಿರುವ ಪುರಾತನ ವೆಂಕಟರಮಣ ದೇವಾಲಯವನ್ನು ಉಳಿಸಿಕೊಂಡೇ, 74 ಅಡಿಯ ಈಶ್ವರ ಲಿಂಗ ದೇವಾಲಯ ಮತ್ತು 12 ಜ್ಯೋತಿರ್ಲಿಂಗಗಳ ಸ್ಥಾಪನೆ ಮಾಡಲಾಗುತ್ತದೆ. ಈ ಮೂಲಕ ದೇವಾಲಯದ ಜಾಗ ಅಭಿವೃದ್ಧಿಪಡಿಸಿ, ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದ ಅಭಿವೃದ್ಧಿ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಇದರಲ್ಲಿ ಯಾರ ಹಿತಾಸಕ್ತಿಯೂ ಇಲ್ಲ. ಅರ್ಚಕರ ಕುಟುಂಬ ವಿರೋಧ ವ್ಯಕ್ತಪಡಿಸಿದರೆ, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದೂ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಮಿನಿ ಸಂಪುಟ ವಿಸ್ತರಣೆ: ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸೇರ್ಪಡೆ ಸಾಧ್ಯತೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.