ETV Bharat / state

'ರಾಮಮಂದಿರ ಸ್ಫೋಟಿಸುವ PFI ಸಂಚಿನಿಂದ ರಾಷ್ಟ್ರಭಕ್ತ ಹಿಂದೂಗಳಿಗೆ ಆಘಾತ' - ರಾಮಮಂದಿರ ನಿರ್ಮಾಣ

ಪಿಎಫ್ಐ ದ್ರೋಹ ಚಿಂತನೆಯನ್ನು ಎಲ್ಲಾ ಭಾರತೀಯರು ಖಂಡಿಸಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆಗ್ರಹಿಸಿದರು.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
author img

By

Published : Oct 20, 2022, 2:52 PM IST

ಶಿವಮೊಗ್ಗ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಸ್ಫೋಟಿಸುವ ಪಿಎಫ್ಐ ಸಂಘಟನೆಯ ಸಂಚು ಹೊರ ಬಂದಿರುವುದು ರಾಷ್ಟ್ರಭಕ್ತ ಹಿಂದೂಗಳಿಗೆ ಆಘಾತ ತಂದಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾವಣ, ಜಿನ್ನಾ ಹಾಗೂ ಜಿಹಾದಿ ವಂಶಸ್ಥರ ರಾಮಮಂದಿರ ಸ್ಫೋಟಿಸುವ ಕನಸು ಎಂದಿಗೂ ನನಸಾಗದು. ಇದನ್ನು ಪಿಎಫ್ಐನವರು ತಿಳಿಯಬೇಕು. ಯಾರಿಗೆ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇದೆಯೋ ಅವರು ದುಷ್ಕೃತ್ಯವನ್ನು ಖಂಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಬಾಬರಿ ಮಸೀದಿ ಶತಶತಮಾನಗಳಿಂದ ನಾವು ಗುಲಾಮರೆಂದು ನಮ್ಮನ್ನು ಅಣಕಿಸುತ್ತಿತ್ತು.‌ ರಾಮಮಂದಿರ ಅಯೋಧ್ಯೆಯಲ್ಲಿತ್ತು ಎಂದು ನಮ್ಮ ದೇಶದ ಪ್ರತಿಯೊಬ್ಬರಿಗೂ ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರು 2024ಕ್ಕೆ ರಾಮಮಂದಿರ ಉದ್ಘಾಟನೆ ಎಂದು ತಿಳಿಸಿದ ಮೇಲೆ ರಾಮಮಂದಿರ ಸ್ಫೋಟಿಸುವ ವಿಷಯ ಪ್ರಸ್ತಾಪವಾಗಿದೆ. ಇದು ನಿಜಕ್ಕೂ ಆಘಾತಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ನಟ ಚೇತನ್​​ಗೆ ಹಿಂದೂ ಧರ್ಮದ ಬಗ್ಗೆ ಗೊತ್ತಿಲ್ಲ: ನಟ ಚೇತನ್​​ ಅವರಿಗೆ ಹಿಂದೂ ಧರ್ಮದ ಬಗ್ಗೆ ಏನೂ ಗೊತ್ತಿಲ್ಲ. ಕೆಲವರಿಗೆ ಹಿಂದೂ ಧರ್ಮದ ಬಗ್ಗೆ ಮಾತನಾಡದೇ ಹೋದ್ರೆ ತಿಂದಿದ್ದು ಜೀರ್ಣವಾಗಲ್ಲ. ಚೇತನ್ ಯಾರು ಅಂತ ನಾನು ನಿಮ್ಮ ಮಾಧ್ಯಮಗಳಲ್ಲಿ ನೋಡಿದ ಮೇಲೆ ತಿಳಿಯಿತು ಎಂದು ಅವರು ವ್ಯಂಗ್ಯವಾಡಿದರು.

ಇದನ್ನೂ ಓದಿ: ರಾಮ ಮಂದಿರ ಬ್ಲಾಸ್ಟ್​ ಮಾಡಲು ಪಿಎಫ್​ಐ ಸಂಚು: ಪ್ರಮೋದ್ ಮುತಾಲಿಕ್.. ನಟ ಚೇತನ ವಿರುದ್ಧವೂ ಗರಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.