ಶಿವಮೊಗ್ಗ : ಪಕ್ಷದ ವರಿಷ್ಠರು ಶಿವಮೊಗ್ಗ ನಗರಕ್ಕೆ ಚನ್ನಬಸಪ್ಪರನ್ನು ಆಯ್ಕೆ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ವರಿಷ್ಠರ ಆಯ್ಕೆಯನ್ನು ಯಾರು ಪ್ರಶ್ನೆ ಮಾಡುವ ಹಾಗೆ ಇಲ್ಲ. ನಾವು ಚನ್ನಬಸಪ್ಪ ಗೆಲ್ಲುವವರೆಗೂ ಸುಮ್ಮನೆ ಕೂರುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, " ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಒಬ್ಬ ಯುವ ನಾಯಕ ಹಾಗೂ ಪಕ್ಷದ ಸಂಘಟಕ ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಸಂತಸ ತಂದಿದೆ. ಅವರು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಒಂದು ಕಡೆ ಸಂಘಟನೆ ಮತ್ತೊಂದು ಕಡೆ ಆಡಳಿತ ಎರಡನ್ನೂ ಸೂಕ್ತವಾಗಿ ನಿಭಾಯಿಸಿದ್ದಾರೆ. ಒಟ್ಟಾರೆ ಎಲ್ಲಾ ಕಾರ್ಯಕರ್ತರು ಜೊತೆಗೂಡಿ ಚನ್ನಬಸಪ್ಪ ಅವರನ್ನು ಗೆಲ್ಲಿಸುತ್ತೇವೆ. ನಾನೇ ಮುಂದೆ ನಿಂತು ಚುನಾವಣೆ ಕೆಲಸ ಮಾಡುತ್ತೇನೆ, ಅವರು ಶೇಕಾಡ 100% ಗೆಲ್ಲುತ್ತಾರೆ " ಎಂದರು.
ಇದನ್ನೂ ಓದಿ : ಷರತ್ತುಬದ್ಧ ರಾಜೀನಾಮೆ ಅಂಗೀಕಾರ.. ಬಗೆಹರಿದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಮಸ್ಯೆ
ಇನ್ನು ಕಾಂತೇಶ್ಗೆ ಮುಂದಿನ ದಿನಗಳಲ್ಲಿ ಅವನ ಕಾರ್ಯವೈಖರಿ ನೋಡಿ ಪಕ್ಷ ಸೂಕ್ತವಾದ ಸ್ಥಾನಮಾನ ಕೊಡುವ ಬಗ್ಗೆ ನಿರ್ಧಾರ ಮಾಡುತ್ತದೆ. ಇವತ್ತಿಗೆ ಇದು ಮುಗಿದು ಹೋಗಿಲ್ಲ, ಪಕ್ಷದ ನಾಯಕರು ಎಲ್ಲವನ್ನು ಅಳೆದು ತೂಗಿ ನಿರ್ಧಾರ ಮಾಡಿರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ : ಈಶ್ವರಪ್ಪ ಪುತ್ರನ ಜೊತೆ ಬಿಎಸ್ವೈ, ಕಟೀಲ್ ಮಾತುಕತೆ: ಸಾಯೋವರೆಗೂ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದ ಕಾಂತೇಶ್!
ಆಯನೂರು ಮಂಜುನಾಥ್ ಜೆಡಿಎಸ್ ಸೇರ್ಪಡೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಜೆಡಿಎಸ್ ಸಿದ್ಧಾಂತ ಮೆಚ್ಚಿ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಎಂದರು.
ಇದನ್ನೂ ಓದಿ : ತಪ್ಪಿದ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್.. ಜೆಡಿಎಸ್ನಿಂದ ಮೊಯ್ದಿನ್ ಬಾವ ಸ್ಪರ್ಧೆ
ಶಿವಮೊಗ್ಗದಲ್ಲಿ ಈಶ್ವರಪ್ಪ ಕಣದಿಂದ ಹಿಂದಕ್ಕೆ ಸರಿದ ಬಳಿಕ ಅವರ ಪುತ್ರ ಕಾಂತೇಶ್ ಈಶ್ವರಪ್ಪ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಭಾವಿಸಲಾಗಿತ್ತು. ಜೊತೆಗೆ, ಈಶ್ವರಪ್ಪ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬ ಒತ್ತಡ ಕೂಡ ಇತ್ತು. ಆದರೆ, ಇದಕ್ಕೆ ಒಪ್ಪದ ಹೈಕಮಾಂಡ್ ಈಶ್ವರಪ್ಪ ಕುಟುಂಬಕ್ಕೆ ಟಿಕೆಟ್ ಬೇಡ ಎನ್ನುವ ತೀರ್ಮಾನ ಪ್ರಕಟಿಸಿ, ಅವರ ಆಪ್ತ ಚನ್ನಬಸಪ್ಪಗೆ ಟಿಕೆಟ್ ನೀಡಿದೆ.
ಚನ್ನಬಸಪ್ಪ ಅವರು ಶಿವಮೊಗ್ಗ ಪಾಲಿಕೆ ಸದಸ್ಯರಾಗಿದ್ದು, ಉಪ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ಈ ಹಿಂದೆ ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿ ಹಾಗೂ ಶಿವಮೊಗ್ಗ ನಗರಸಭೆ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ : ಈಶ್ವರಪ್ಪ ಪುತ್ರನ ಕೈ ತಪ್ಪಿದ ಟಿಕೆಟ್: ಶಿವಮೊಗ್ಗಕ್ಕೆ ಚನ್ನಬಸಪ್ಪ, ಮಾನ್ವಿಗೆ ಬಿವಿ ನಾಯಕ್ ಹೆಸರು ಪ್ರಕಟ