ETV Bharat / state

ಕಮಲ ಲಕ್ಷ್ಮೀ ಸಂಕೇತ.. ಟೀಕಿಸುವುದು ಬಿಟ್ಟು ಸಹಕರಿಸಿ; ಕಾಂಗ್ರೆಸ್​ಗೆ ಈಶ್ವರಪ್ಪ ಟಾಂಗ್​

ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಮಲದ ಮಾದರಿ ಇದೆ ಎಂದು ಕಾಂಗ್ರೆಸ್​ ಆರೋಪ ಮಾಡುತ್ತಿದೆ. ಆದರೆ ಏನು ಬಿಜೆಪಿಗೆ ಗುತ್ತಿಗೆ ಕೊಟ್ಟಿದ್ದಾರೆಯೇ‌? ಕಮಲ ಮಹಾಲಕ್ಷ್ಮಿಯ ಒಂದು ಸಂಕೇತ ಎಂದು ಸಚಿವ ಕೆ.ಎಸ್.​ ಈಶ್ವರಪ್ಪ ಹೇಳಿದ್ದಾರೆ.

ಚಿವ ಕೆ.ಎಸ್​ ಈಶ್ವರಪ್ಪ
ಚಿವ ಕೆ.ಎಸ್​ ಈಶ್ವರಪ್ಪ
author img

By

Published : Jun 24, 2021, 3:06 PM IST

Updated : Jun 24, 2021, 4:37 PM IST

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ನೀಲ ನಕ್ಷೆ ಕಮಲದ ಮಾದರಿ ಇದೆ ಎಂದು ಕಾಂಗ್ರೆಸ್​ನವರು ಆರೋಪ ಮಾಡಿದ್ದರು. ಈ ಸಂಬಂಧ ಸಚಿವ ಕೆ.ಎಸ್​. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಅನೇಕ ವಿಚಾರಗಳಲ್ಲಿ ಸರ್ಕಾರ ಹಲವು ಯೋಚನೆಗಳನ್ನು ಮಾಡುತ್ತದೆ. ಹಲವು ರಾಜ್ಯಗಳಲ್ಲಿ ವಿಮಾನ ನಿಲ್ದಾಣಗಳಿಗೆ ಮಹಾಪುರುಷರ ಹೆಸರುಗಳನ್ನು ಇಡಲಾಗಿದೆ. ಆ ಸಂದರ್ಭದಲ್ಲೂ ಸಹ ಹಲವರು ವಿರೋಧ ಮಾಡಿದ್ದರು. ಇಲ್ಲಿ ವಿಷಯ ಇರೋದು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಬೇಕಾಗಿರುವುದು ಅಷ್ಟೇ. ಇದು ಶಿವಮೊಗ್ಗ ಮಾತ್ರವಲ್ಲದೇ ಸುತ್ತಮುತ್ತಲ ಜಿಲ್ಲೆಗಳ ಜನರ ಅಪೇಕ್ಷೆಯಾಗಿದೆ ಎಂದರು.

ಯಡಿಯೂರಪ್ಪ ಅವರು ಸಿಎಂ ಆದ ಕೂಡಲೇ ಅದಕ್ಕೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಆದರೆ ಕಮಲದ ಮಾದರಿ ಇದೆ ಎಂದು ಕಾಂಗ್ರೆಸ್ಸಿಗರು ವಿರೋಧ ಮಾಡ್ತಿದ್ದಾರೆ. ಕಮಲವನ್ನು ಏನು ಬಿಜೆಪಿಗೆ ಗುತ್ತಿಗೆ ಕೊಟ್ಟಿದ್ದಾರೆಯೇ‌? ಕಮಲ ಮಹಾಲಕ್ಷ್ಮಿಯ ಒಂದು ಸಂಕೇತ. ಇದನ್ನೂ ಕೂಡ ಕಾಂಗ್ರೆಸ್ಸಿಗರು ವಿರೋಧ ಮಾಡ್ತಿದ್ದಾರೆ. ಇದಕ್ಕೆ ಅರ್ಥವೇ ಇಲ್ಲ ಎಂದು ಗುಡುಗಿದರು.

ಸಚಿವ ಕೆ.ಎಸ್​ ಈಶ್ವರಪ್ಪ

ಅಭಿವೃದ್ಧಿಯ ಕೆಲಸಗಳು ಅಗುವ ಸಮಯದಲ್ಲಿ ಸಹಕಾರ ಕೊಡಬೇಕು. ಅದನ್ನು ಬಿಟ್ಟು ಎಲ್ಲವನ್ನು ಟೀಕಿಸುವುದಲ್ಲ. ಈಡೀ ರಾಜ್ಯದಲ್ಲಿ ಕಾಂಗ್ರೆಸ್​ನ ವಿರೋಧವನ್ನು ನೋಡ್ತಾ ಇದ್ದೇವೆ. ರೇಷನ್, ವ್ಯಾಕ್ಸಿನ್ ಎಲ್ಲವನ್ನು ಟೀಕಿಸಿದ್ದಾರೆ. ಟೀಕೆ ಮಾಡೋಕೆ ಕಾಂಗ್ರೆಸ್ ಪಕ್ಷ ಇದೆ ಎನ್ನುವಂತಾಗಿದೆ. ದೆಹಲಿಯಲ್ಲಿ ಅವರೇ ಕಟ್ಟಿಸಿದ ಲೋಟಸ್ ಮಹಲ್ ಇದೆ. ಹಾಗೆಂದು ಒಡೆದು ಹಾಕೋಕೆ ಆಗುತ್ತಾ? ಪ್ರತಿಯೊಂದಕ್ಕೂ ವಿರೋಧ ಮಾಡೋದು ಅರ್ಥವಿಲ್ಲದ್ದು, ಅದು ಸರಿಯಲ್ಲ. ಇಂತಹ ಟೀಕೆ ಮಾಡುವವರಿಗೆ ಕಾಂಗ್ರೆಸ್ ನಾಯಕರೇ ಬುದ್ದಿ ಹೇಳಬೇಕು ಎಂದು ಗುಡುಗಿದರು.

Last Updated : Jun 24, 2021, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.