ETV Bharat / state

ಶಿವಮೊಗ್ಗ: ಲಾಕ್​ಡೌನ್​ ಹಿನ್ನೆಲೆ ಸಭೆ ನಡೆಸಿದ ಸಚಿವ ಕೆ‌ ಎಸ್ ಈಶ್ವರಪ್ಪ - ಶಿವಮೊಗ್ಗ ಲೇಟೆಸ್ಟ್ ನ್ಯೂಸ್

ಗ್ರಾಮಾಂತರ ಭಾಗದಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ಇಲ್ಲ. ಕೃಷಿ ಚಟುವಟಿಕೆಗಳನ್ನು ರೈತರು ಮಾಡಿಕೊಳ್ಳಬಹುದು ಜತೆಗೆ ನರೇಗಾ ಕಾಮಗಾರಿಗೆ ಸಹ ಯಾವುದೇ ನಿರ್ಬಂಧ ಇಲ್ಲ..

ks eshwarappa meeting in shimogga
ಲಾಕ್​ಡೌನ್​ ಹಿನ್ನೆಲೆ ಸಭೆ ನಡೆಸಿದ ಸಚಿವ ಕೆ‌ಎಸ್ ಈಶ್ವರಪ್ಪ
author img

By

Published : May 9, 2021, 5:18 PM IST

Updated : May 9, 2021, 7:39 PM IST

ಶಿವಮೊಗ್ಗ : ನಾಳೆಯಿಂದ ಕಟ್ಟುನಿಟ್ಟಿನ ಲಾಕ್​​ಡೌನ್ ಜಾರಿಯಾಗಲಿದೆ. ನಡೆದುಕೊಂಡು ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಅವಕಾಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ‌ ಎಸ್ ಈಶ್ವರಪ್ಪ ತಿಳಿಸಿದರು.

ರಾಜ್ಯದಲ್ಲಿ ಕೋವಿಡ್​​ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಕಾರಣ, ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸುವ ಮೂಲಕ ನಾಳೆಯಿಂದ ಲಾಕ್​ಡೌನ್ ಘೋಷಣೆ ಮಾಡಿದೆ‌.

ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಕೆ‌ ಎಸ್ ಈಶ್ವರಪ್ಪ ಜಿಲ್ಲೆಯ ಶಾಸಕರುಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಂಭಾಗಣದಲ್ಲಿ ಸಭೆ ನಡೆಸಿ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿಗೊಳಿಸುವ ಕುರಿತು ಚರ್ಚೆ ನಡೆಸಿದರು.

ಲಾಕ್​ಡೌನ್​ ಹಿನ್ನೆಲೆ ಸಭೆ ನಡೆಸಿದ ಸಚಿವ ಕೆ‌ಎಸ್ ಈಶ್ವರಪ್ಪ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಲಾಕ್​ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಹಾಗಾಗಿ, ಅನಗತ್ಯವಾಗಿ ಯಾರೂ ಕೂಡ ಹೊರ ಬರಬೇಡಿ ಎಂದರು.

ಹಾಪ್ ಕಾಮ್ಸ್ ವತಿಯಿಂದ ಶಿವಮೊಗ್ಗ ನಗರದಲ್ಲಿ 70 ವಾಹನಗಳ ಮೂಲಕ ಮನೆ ಬಾಗಿಲಿಗೆ ತರಕಾರಿ ಸರಬರಾಜು ಮಾಡಲಾಗುತ್ತದೆ. ಹಾಗಾಗಿ, ತರಕಾರಿ ಖರೀದಿಗೆ ಜನರು ಮಾರುಕಟ್ಟೆಗೆ ಬರುವುದು ಬೇಡ ಎಂದರು.

ಗ್ರಾಮಾಂತರ ಭಾಗದಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ಇಲ್ಲ. ಕೃಷಿ ಚಟುವಟಿಕೆಗಳನ್ನು ರೈತರು ಮಾಡಿಕೊಳ್ಳಬಹುದು ಜತೆಗೆ ನರೇಗಾ ಕಾಮಗಾರಿಗೆ ಸಹ ಯಾವುದೇ ನಿರ್ಬಂಧ ಇಲ್ಲ. ನರೇಗಾ ಕಾಮಗಾರಿ ಎಂದಿನಂತೆ ನಡೆಯುತ್ತದೆ. ಹಾಗಾಗಿ ಸರ್ಕಾರದ, ನಿಯಮ ಪಾಲಿಸುವ ಮೂಲಕ ಎಲ್ಲರೂ ಕೊರೊನಾ ತಡೆಗಟ್ಟಲು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

ವರ್ತಕರೊಂದಿಗೆ ಸಭೆ:

ಕೊರೊನಾ ತಡೆಗಟ್ಟಲು ಸರ್ಕಾರ ವಿಧಿಸಿರುವ ಲಾಕ್​​​ಡೌನ್​ಗೆ ವರ್ತಕರು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸಂಭಾಗಣದಲ್ಲಿ ಆಯೋಜಿಸಿದ್ದ ವರ್ತಕರ ಜೊತೆಗಿನ ಸಭೆಯಲ್ಲಿ ಸಚಿವರು ಮನವಿ ಮಾಡಿಕೊಂಡರು. ದಿನಸಿ ವರ್ತಕರು ಸೇರಿದಂತೆ ಎಲ್ಲ ಅಂಗಡಿಯ ಮಾಲೀಕರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ವರ್ತಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಒಮ್ಮತದಿಂದ ಜಿಲ್ಲಾಡಳಿತದ ನಿರ್ಣಯಕ್ಕೆ ಹಾಗೂ ಸರ್ಕಾರದ ಆದೇಶಕ್ಕೆ ಬೆಂಬಲ ನೀಡುತ್ತೇವೆಂದು ಭರವಸೆ ನೀಡಿದರು. ಇದರ ಜತೆಗೆ ಹತ್ತು ದಿನಗಳ ಕಟ್ಟುನಿಟ್ಟಿನ ಸಂಪೂರ್ಣ ಲಾಕ್​​ಡೌನ್ ವಿಧಿಸಿ ಎಂದು ಸಚಿವರಿಗೆ ಮನವಿ ಮಾಡಿಕೊಂಡರು. ಅಗತ್ಯ ಇರುವ ಕೈಗಾರಿಕೆಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಪಾಸ್ ನೀಡುವಂತೆ ಮನವಿ ಮಾಡಿಕೊಂಡರು.

ಇದನ್ನೂ ಓದಿ: ಅನಗತ್ಯವಾಗಿ ರಸ್ತೆಗಿಳಿದರೆ ಲಾಠಿ ರುಚಿ ತೋರಿಸ್ತೇವೆ: ಡಿಸಿಪಿ ಶರಣಪ್ಪ ಎಚ್ಚರಿಕೆ

ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಅವಕಾಶ ನೀಡಿದೆ. ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಬೇಕು, ಜತೆಗೆ ಗ್ರಾಹಕರಿಗೂ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿಕೊಳ್ಳುವ ಮೂಲಕ ಕೊರೊನಾ ತಡೆಗಟ್ಟಲು ನಿಮ್ಮ ಸಹಕಾರ ಮುಖ್ಯ ಎಂದು ಸಚಿವರು ತಿಳಿಸಿದರು.

Last Updated : May 9, 2021, 7:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.