ETV Bharat / state

ತುಂಗೆಯ ಮಡಿಲಲ್ಲಿ ಅದ್ಧೂರಿಯಾಗಿ ನಡೆದ ಕೋಟೆ ಶ್ರೀ ಸೀತಾರಾಮ ತೆಪ್ಪೋತ್ಸವ

author img

By

Published : Jan 7, 2023, 7:04 AM IST

Updated : Jan 7, 2023, 1:26 PM IST

ತುಂಗಾ ನದಿಯಲ್ಲಿ ಕೋಟೆ ಶ್ರೀ ಸೀತಾರಾಮ ದೇವರ ಅದ್ಧೂರಿ ತೆಪ್ಪೋತ್ಸವ- ಸಾವಿರಾರು ಭಕ್ತರು ಭಾಗಿ- ಗಮನಸೆಳೆದ ಸಿಡಿಮದ್ದಿನ ಆಟ

kote shree seetharama
ಕೋಟೆ ಶ್ರೀ ಸೀತಾರಾಮ ತೆಪ್ಪೋತ್ಸವ
ಕೋಟೆ ಶ್ರೀ ಸೀತಾರಾಮ ತೆಪ್ಪೋತ್ಸವ

ಶಿವಮೊಗ್ಗ: ಮಲೆನಾಡಿನ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮ ದೇವರ ತೆಪ್ಪೋತ್ಸವ ನಿನ್ನೆ ತುಂಗಾ ನದಿಯಲ್ಲಿ ಅದ್ಧೂರಿಯಾಗಿ ಜರುಗಿತು. ಸೀತಾರಾಮರ ಕಲ್ಯಾಣೋತ್ಸವ ಜರುಗಿದ ಮೇಲೆ ನಡೆಸುವ ಉತ್ಸವ ಇದಾಗಿದೆ. ಸುಮಾರು ಎಂಟು ದಿನಗಳ ಕಾಲ ಸೀತಾರಾಮರ ಕಲ್ಯಾಣ ನಡೆಸಲಾಗುತ್ತದೆ. ಕಲ್ಯಾಣೋತ್ಸವದ ಎರಡನೇ ದಿನ ವೈಕುಂಠ ಏಕಾದಶಿ ಬರುತ್ತದೆ. ಕಲ್ಯಾಣೋತ್ಸವ ಮುಗಿಯುವ ಹಿಂದಿನ ದಿನ ಅಂದರೆ ಹುಣ್ಣಿಮೆಯ ದಿನ ತೆಪ್ಪೋತ್ಸವ ನಡೆಸಲಾಗುತ್ತದೆ.

ತೆಪ್ಪೋತ್ಸವಕ್ಕೂ ಮುನ್ನ ಕೋಟೆ ಆಂಜನೇಯ ದೇವಾಲಯದಿಂದ ಸರ್ವಭೂಷಣ ಅಲಂಕೃತವಾಗಿ ಸೀತಾರಾಮ ದೇವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಗುತ್ತದೆ. ನಂತರ ದೇವರ ಮೂರ್ತಿಗಳನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಿದ‌ ತೆಪ್ಪದಲ್ಲಿ ಕೂರಿಸಿ ನದಿಯಲ್ಲಿ ಸುತ್ತಾಟ ಮಾಡಲಾಗುತ್ತದೆ. ಮದುವೆಯ ನಂತರ ಗಂಡ-ಹೆಂಡತಿಯನ್ನು ಹೇಗೆ ಸುತ್ತಾಟಕ್ಕೆ ಕಳುಹಿಸಲಾಗುತ್ತದೆಯೋ ಹಾಗೆ ತೆಪ್ಪದಲ್ಲಿ ತಿರುಗಾಟ ನಡೆಸಲಾಗುತ್ತದೆ. ನದಿಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ‌ ಕಾಲ ಸೀತಾರಾಮರನ್ನು ತೇಲಿಸಲಾಗುತ್ತದೆ. ನಂತರ ಮಹಾ ಮಂಗಳಾರತಿ ನಡೆಸಿ, ದೇವರನ್ನು ಪುನಃ ಸ್ವಸ್ಥಾನಕ್ಕೆ ಕರೆದುಕೊಂಡು ಹೋಗಲಾಗುತ್ತದೆ ಎನ್ನುತ್ತಾರೆ ಕೋಟೆ ಆಂಜನೇಯ ದೇವಾಲಯದ ಅರ್ಚಕರಾದ ರಾಮ ಪ್ರಸಾದ್.

kote shree seetharama
ಕೋಟೆ ಶ್ರೀ ಸೀತಾರಾಮ ತೆಪ್ಪೋತ್ಸವ

ಕಳೆದ 23 ವರ್ಷದಿಂದ ಕೋಟೆ ಶ್ರೀ ಸೀತಾರಾಮ ದೇವರ ತೆಪ್ಪೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಸಾವಿರಾರು ಭಕ್ತರು ಸುಮಾರು 7 ವರೆ ಗಂಟೆಯಿಂದ ದೇವರ ತೆಪ್ಪೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ತುಂಗಾ ನದಿ ಸೇತುವೆಗೆ ವಿದ್ಯುತ್​ ದೀಪಾಲಂಕಾರ ಮಾಡಲಾಗಿದೆ ಎಂದು ಭಕ್ತರಾದ ಡಾ.ಶ್ರೀಧರ್ ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಡಿಕೇರಿ: ಇತಿಹಾಸ ಪ್ರಸಿದ್ದ ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ

ಸಿಡಿಮದ್ದಿನ ಚಿತ್ತಾರ: ಅತ್ತ ದೇವತೆಗಳು ನದಿಯಲ್ಲಿ ವಿಹಾರ ನಡೆಸುತ್ತಿದ್ದರೆ, ಇತ್ತ ಸಿಡಿಮದ್ದಿನ ಆಟ ಜನಾಕರ್ಷಣೆಯಾಗಿತ್ತು. ತೆಪ್ಪೋತ್ಸವದ ವೇಳೆ ಸಿಡಿಸಿದ ಸಿಡಿಮದ್ದಿನ ಚಿತ್ತಾರ ನೆರೆದಿದ್ದವರನ್ನು ರಂಜಿಸಿತು. ನದಿ ನಡುವೆಯ ಬಂಡೆಯ ಮೇಲೆ ಸಿಡಿಮದ್ದು ಸಿಡಿಸುತ್ತಲೇ ಅದು ಆಕಾಶದೆತ್ತರಕ್ಕೆ ಹಾರಿ ಸಿಡಿದು ಚಿತ್ತಾರ ಬಿಡಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ತೆಪ್ಪೋತ್ಸವದ ನಂತರ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.‌

ಇದನ್ನೂ ಓದಿ: ಕೊಪ್ಪಳದ ಗವಿಮಠದಲ್ಲಿ ವಿಜೃಂಭಣೆಯ ತೆಪ್ಪೋತ್ಸವ- ವಿಡಿಯೋ

ಗವಿಮಠ ಜಾತ್ರೆ: ದಕ್ಷಿಣ ಭಾರತದ ಮಹಾ ಕುಂಭಮೇಳ ಎಂದು ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಮಠ ಜಾತ್ರೆಯ ಹಿನ್ನೆಲೆ ಗುರುರುವಾರ ಮಠದ ಆವರಣದ ಕೆರೆಯಲ್ಲಿ ತೆಪ್ಪೋತ್ಸವ ನಡೆದಿತ್ತು. ಕಳೆದ ಮೂರು ವರ್ಷಗಳ ಬಳಿಕ ನಡೆದ ಉತ್ಸವವನ್ನು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು. ಜನವರಿ 8 ರಂದು ಗವಿಸಿದ್ದೇಶ್ವರ ಮಹಾರಥೋತ್ಸವ ನಡೆಯಲಿದೆ.

ಇದನ್ನೂ ಓದಿ: ತೀರ್ಥಹಳ್ಳಿ ರಾಮೇಶ್ವರ ತೆಪ್ಪೋತ್ಸವಕ್ಕೆ ಅದ್ಧೂರಿ ತೆರೆ: ಗಮನಸೆಳೆದ ಬಾಣ ಬಿರುಸು

Last Updated : Jan 7, 2023, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.