ETV Bharat / state

44 ವರ್ಷಗಳಿಂದ ನಡೆಯದ ಕರಿಯಮ್ಮನ ಜಾತ್ರೆ ಮತ್ತೆ ಆರಂಭ! - kariyamma devi fair celebration in shimoga

ಶಿವಮೊಗ್ಗದ ಗೊಂದಿ ಚಟ್ನಹಳ್ಳಿ ಗ್ರಾಮ ದೇವತೆಯ ಪೂಜೆಯನ್ನು ಹಿಂದಿನಿಂದಲೂ ದಲಿತರೇ ಮಾಡಿಕೊಂಡು ಬರ್ತಾ ಇದ್ದಾರೆ. ಈಗ ನಡೆಯಲಿರುವ ದೇವಿಯ ಜಾತ್ರೆಯನ್ನು ಗ್ರಾಮದ ಲಿಂಗಾಯತರು, ಮರಾಠರು ಹಾಗೂ ದಲಿತರು ಸೇರಿಕೊಂಡು ಆಚರಿಸಲಿದ್ದಾರೆ.

kariyamma
ಕರಿಯಮ್ಮ
author img

By

Published : Mar 17, 2021, 10:36 PM IST

ಶಿವಮೊಗ್ಗ: ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದಲ್ಲಿ ನಿನ್ನೆಯಿಂದ ಗ್ರಾಮ ದೇವತೆ ಕರಿಯಮ್ಮ ಹಾಗೂ ಮಾತಂಗಮ್ಮ ದೇವಿಯರ ಜಾತ್ರೆ ನಡೆಸಲಾಗುತ್ತಿದೆ. ಈ ಗ್ರಾಮದಲ್ಲಿ ಇಂತಹ ಜಾತ್ರೆ ನಡೆದಿದ್ದರ ನೆನಪು ಸಹ ಗ್ರಾಮಸ್ಥರಿಗಿಲ್ಲ. ಆದರೆ ಇದ್ದಕ್ಕಿದ್ದಂತೆಯೇ ಗ್ರಾಮದ ಯುವಕರಿಗೆ ತಮ್ಮ ಗ್ರಾಮದಲ್ಲಿ ದೇವಿಯ ಜಾತ್ರೆ ನಡೆಸಬೇಕೆಂಬ ಆಲೋಚನೆ ಬಂದಿದೆಯಂತೆ.

ದಲಿತರ ಮನೆಯ ದೇವತೆ ಕರಿಯಮ್ಮ: ಗೊಂದಿ ಚಟ್ನಹಳ್ಳಿಯಲ್ಲಿ ಕರಿಯಮ್ಮ ದೇವಿಯು ದಲಿತರ ಮನೆ ದೇವತೆ. ಜಾತ್ರೆಯ ಪ್ರಯುಕ್ತ ದಲಿತರ ಮನೆಯಲ್ಲಿದ್ದ ದೇವಿಯನ್ನು ಇದೀಗ ನಿನ್ನೆ ರಾತ್ರಿಯೇ ಊರಿನ ದೇವಾಲಯಕ್ಕೆ ತರಲಾಗಿದೆ. ಇಂದು ಮತ್ತು ನಾಳೆ ದೇವಿಯನ್ನು ದೇವಾಲದಲ್ಲಿಟ್ಟು ನಾಳೆ ರಾತ್ರಿ ಪುನಃ ದಲಿತರ ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಈಗ ಆಚರಿಸಲಾಗುವ ಜಾತ್ರೆ ನಡೆದು ಸುಮಾರು 44 ವರ್ಷಗಳೇ ಕಳೆದಿವೆ ಎನ್ನಲಾಗುತ್ತಿದೆ.

ಗೊಂದಿ ಚಟ್ನಹಳ್ಳಿ ಗ್ರಾಮ ದೇವತೆ ಜಾತ್ರೆ

ಗ್ರಾಮ ದೇವತೆಯ ಪೂಜೆಯನ್ನು ಹಿಂದಿನಿಂದಲೂ ದಲಿತರೇ ಮಾಡಿಕೊಂಡು ಬರ್ತಾ ಇದ್ದಾರೆ. ಈಗ ನಡೆಯಲಿರುವ ದೇವಿಯ ಜಾತ್ರೆಯನ್ನು ಗ್ರಾಮದ ಲಿಂಗಾಯತರು, ಮರಾಠರು ಹಾಗೂ ದಲಿತರು ಸೇರಿಕೊಂಡು ಆಚರಣೆ ಮಾಡುತ್ತಿದ್ದಾರೆ.

ದೇವಿಯ ಜಾತ್ರೆಯನ್ನು ನಡೆಸುವುದರಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆ. ಇದರಿಂದ ಗ್ರಾಮದಲ್ಲಿ ಒಳ್ಳೆಯ ಮಳೆ-ಬೆಳೆ ಆಗುತ್ತದೆ ಎಂಬ ಆಶಯದಿಂದ ಎಲ್ಲಾ ಸಮುದಾಯದವರು ಸೇರಿ ಜಾತ್ರೆ ನಡೆಸುತ್ತಿದ್ದಾರೆ. ಹೀಗಾಗಿ, ಇಂದು ಬೆಳಗ್ಗೆಯಿಂದಲೇ ಗ್ರಾಮಸ್ಥರು ತಮ್ಮ ನೆಂಟರೊಂದಿಗೆ ಆಗಮಿಸಿ, ದೇವಿಗೆ ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ.

ಓದಿ: ಬೆಂಗಳೂರು, ಗಡಿ ಜಿಲ್ಲೆ ಕಲಬುರಗಿ, ಬೀದರ್​ನಲ್ಲಿ ಹೆಚ್ಚು ಗಮನ ಹರಿಸಿ: ಸಿಎಂಗೆ ಪ್ರಧಾನಿ ಮೋದಿ ಸೂಚನೆ

ಗ್ರಾಮದ ಬಳಿ ನೂತನವಾದ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ದೇವಿಯ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದರಿಂದ ದೇವಿಯ ಜಾತ್ರೆ ನಡೆಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ ಜಾತ್ರೆಯನ್ನು ಹೇಗೆ ನಡೆಸಬೇಕೆಂದು ಗ್ರಾಮಸ್ಥರಿಗೆ ತಿಳಿದು ಬಂದಿರಲಿಲ್ಲ. ಈಗ ಈ ಕುರಿತು ಸಂಪೂರ್ಣವಾಗಿ ತಿಳಿದು ಉತ್ಸವವನ್ನು ನಡೆಸಲು ಮುಂದಾಗಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.